ರೈತರು ಕಷ್ಟದ ನಡುವೆ ಜೀವನ ಮಾಡುವುದು ಹೊಂದಾದರೆ ನಮ್ಮ ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕಾದರು ಟ್ರಾನ್ಸ್ ಫಾರ್ಮರ್ ಕೊಡಿ ಎಂದು ರೈತರು ಮಾನ್ವಿ ಕೆಇಬಿ ಅಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕಾಲುವೆಗೆ ಸರಿಯಾದ ನೀರು ಬಾರದ ಕಾರಣ ಬೋರ್ ಮೂಲಕವಾದರು ಬೆಳೆಗಳಿಗೆ ನೀರು ಹಾಯಿಸೋಣವೆಂದರೆ ಟ್ರಾನ್ಸ್ ಫಾರ್ಮರ್ ಸುಟ್ಟು ಒಂದು ತಿಂಗಳಾಗಿದೆ.ಆದರೆ ನಮ್ಮ ಮನವಿಗೆ ಸ್ಪಂಧಿಸಬೇಕಾದ ಕೆಇಬಿ ಎಇಇ ವೈದ್ಯನಾಥ್ ಕಣ್ಣಿದ್ದು ಕುರುಡರಾಗಿದ್ದಾರೆಂದು ರೈತರು ಕಿಡಿಕಾರಿದರು.
ರೈತರ ಕಷ್ಟ ಕೇಳೋರು ಯಾರು ಇಲ್ಲದ ಕಾರಣ ನಾವು ವಿಷ ಕುಡಿದು ಸಾಯಬೇಕಾಗಿದೆ.ನಮ್ಮ ಪರಿಸ್ಥಿತಿಯನ್ನು ಅರಿತು ಶಾಸಕರು ಹಾಗು ಸಚಿವರು ಟ್ರಾನ್ಸ್ ಫಾರ್ಮರ್ ಕೊಡಿಸುವ ಕೆಲಸ ಮಾಡಿ ಪುಣ್ಯ ಕಟ್ಟಿಕೊಳ್ಳಲಿ ಎಂದು ರೈತರು ಮನವಿ ಮಾಡಿಕೊಂಡಿದ್ದಾರೆ.
ವರದಿ: R now TV ಶಫೀಕ್ ಹುಸೇನ್ ಮಾನವಿ