ಸ್ಮಶಾನಕ್ಕಾಗಿ ಮೀಸಲಿಟ್ಟಿರುವ ಜಮೀನಿನಿಂದ ಸ್ವಂತ ಮಾವಿನ ತೋಟಕ್ಕೆ ರಸ್ತೆ ಬೇಕೆಂದು ಕಲ್ಲುಕುಂಟೆ ಗ್ರಾಮದ ವ್ಯಕ್ತಿಯೋರ್ವ ಪಟ್ಟು ಹಿಡಿದಿದ್ದು ಅಧಿಕಾರಿಗಳ ಸಾತ್ ಮೂಲಕ ಒತ್ತು ನೀಡುತ್ತಿದ್ದಾರೆ.
ಶ್ರೀನಿವಾಸಪುರ ತಾಲ್ಲೂಕಿನ ಕಲ್ಲುಕುಂಟೆ ಗ್ರಾಮದಲ್ಲಿ ಸಾರ್ವಜನಿಕರ ಸ್ಮಶಾನಕೆಂದು ಸುಮಾರು 3 ಕ್ಕೂ ಹೆಚ್ಚು ಎಕರೆ ಜಮೀನನನ್ನು 2019 ರಲ್ಲಿನ ತಹಸೀಲ್ದಾರ್ ಶ್ರೀನಿವಾಸ್ ಹಾಗೂ ಇನ್ನಿತರೆ ಕಂದಾಯ ಅಧಿಕಾರಿಗಳು ಸರ್ವೇ ಸಂಖ್ಯೆ 19 ರಲ್ಲಿ ಈಗಾಗಲೇ ಪುರಾತನ ಕಾಲದಿಂದ ಸ್ಮಶಾನವಾಗಿ ಬಳಸಲಾಗುತ್ತಿದ್ದು ಜಮೀನನ್ನು ಅಳತೆ ಮಾಡಿ ಸ್ಮಶಾನ ಜಮೀನಿನ ಸುತ್ತ ಮುಳ್ಳು ತಂಗಳನ್ನು ನಿರ್ಮಿಸಿದ್ದರು.
ಆದ್ರೆ ಇದೆ ತಾಲ್ಲೂಕಿನ ಹೊದಲಿ ಗ್ರಾಮದಿಂದ ಕಲ್ಲುಕುಂಟೆ ಗ್ರಾಮಕ್ಕೆ ವಲಸೆ ಬಂದಿದ್ದ ಶಂಕರಪ್ಪ ಎಂಬಾತ ತನ್ನ ಸ್ವಂತ ಜಮೀನಿಗೆ ಸ್ಮಶಾನಕ್ಕೆ ಮೀಸಲಿಟ್ಟಿರುವ ಜಮೀನಿನಿಂದ ರಸ್ತೆ ನಿರ್ಮಾಣವಾಗಬೇಕು ಎಂದು ಪಟ್ಟು ಹಿಡಿದಿದ್ದಾನೆ.
ಅಧಿಕಾರಿಗಳನ್ನು ಹರಾಜಿನಲ್ಲಿ ಕೊಂದುಕೊಂಡಂತೆ ವರ್ತಿಸುವ ಈತ ರಸ್ತೆ ನಿರ್ಮಿಸಿಕೊಂಡು ತನ್ನ ಜಮೀನನ್ನು ಹೆಚ್ಚು ಲಾಭಕ್ಕೆ ಮಾರುವ ದುರುದ್ದೇಶನದಿಂದ ಸ್ಮಶಾನದಲ್ಲಿ ರಸ್ತೆಗೆ ಪರದಾಡುತ್ತಿದ್ದಾನೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇನ್ನು ಸ್ಮಶಾನದಲ್ಲಿ ರಸ್ತೆ ನಿರ್ಮಿಸಲು ತಾಲ್ಲೂಕು ಕಚೇರಿಗೆ ಅರ್ಜಿ ನೀಡಿದ್ದು ಸ್ಮಶಾನದಲ್ಲಿ ರಸ್ತೆ ನಿರ್ಮಿಸಲು ಅಧಿಕಾರಿಗಳು ಶಂಕರಪ್ಪನಿಗೆ ಸಾತ್ ಕೊಟ್ಟು ಮುಂದಾಗುತ್ತಿದ್ದಾರೆ ಎಂದು ಸಹ ಆರೋಪಿಸುತ್ತಿದ್ದಾರೆ.
ಏನೇ ಆದ್ರೂ ನಮ್ಮ ಪೂರ್ವಿಕರನ್ನು ಕಾಲ ಕಾಲದಿಂದ ಅಂತ್ಯಕ್ರಿಯೆ ಮಾಡಿಕೊಂಡು ಬಂದಿರುವ ಸ್ಮಶಾನದಲ್ಲಿ ಯಾವುದೇ ಖಾಸಗಿ ವ್ಯಕ್ತಿಗಳಿಗೆ ಅಥವಾ ಯಾವುದೇ ಜಮೀನುಗಳಿಗೆ ರಸ್ತೆ ಬಿಡುವ ಪ್ರಸಕ್ತಿ ಇಲ್ಲವೆಂನ್ನುತ್ತಿದ್ದಾರೆ ಕಲ್ಲುಕುಂಟೆ ಗ್ರಾಮದ ಗ್ರಾಮಸ್ಥರು.