ರಾಯಚೂರು ಜಿಲ್ಲೆಯ ಗ್ರಾಮೀಣ ಕ್ಷೇತ್ರದ ಕುರ್ಡಿ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಸನಗೌಡ ದದ್ದಲ್ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿ ದ್ಯಾವಮ್ಮ ದೇವಿ ಜಾತ್ರೆ ನಿಮಿತ್ತ ತಾಲೂಕ ಮಟ್ಟದ ಅಧಿಕಾರಿಗಳ ಪೂರ್ವ ಭಾವಿ ಸಭೆ ನಡೆಸಿದರು.
ಕುರ್ಡಿ ಗ್ರಾಮದಲ್ಲಿ ಕೆಕೆಆರ್ ಡಿಬಿ ಯೋಜನೆಯಡಿ 70 ಲಕ್ಷ ಅನುದಾನದ ದೇವಿ ಸರ್ಕಲ್ ನಲ್ಲಿ ಸಿಸಿ ರಸ್ತೆ ನಿರ್ಮಾಣ, ಎಸ್,ಹೆಚ್,ಡಿ,ಪಿ ಯೋಜನೆಯಡಿ ಕುರ್ಡಿಯಿಂದ ಮಟಮಾರಿ ವಯಾ ಅರೋಲಿ ರಸ್ತೆ ನಿರ್ಮಾಣ, ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆಡಿಯ 60 ಲಕ್ಷ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ಮಾಡಬೇಕು ಎಂದರು.
ಪ್ರತಿ ಐದು ವರ್ಷಕ್ಕೊಮ್ಮೆ ಕುರ್ಡಿ ಗ್ರಾಮದಲ್ಲಿ ಜಾತ್ರೆ ನಡೆಯುತ್ತದೆ,ತಾಲೂಕ ಮಟ್ಟದ ಆಯಾ ಅಧಿಕಾರಿಗಳು ನಿಮ್ಮನಿಮ್ಮ ಕೆಲಸಗಳನ್ನ ಅಚ್ಚುಕಟ್ಟಾಗಿ ಕೆಲಸ ಮಾಡುತ್ತ ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು ಎಂದರು.