Welcome to reportnowtv.in   Click to listen highlighted text! Welcome to reportnowtv.in
Sunday, March 23, 2025
HomeRaichurManviಬಾಲಿವುಡ್ ನಟ 'ಸಲ್ಮಾನ್ ಖಾನ್‌'ಗೆ ಜೀವ ಬೆದರಿಕೆ ಹಾಕಿದ್ದ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ 'ಸೋಹೆಲ್...

ಬಾಲಿವುಡ್ ನಟ ‘ಸಲ್ಮಾನ್ ಖಾನ್‌’ಗೆ ಜೀವ ಬೆದರಿಕೆ ಹಾಕಿದ್ದ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ‘ಸೋಹೆಲ್ ಪಾಷ‌’ ಬಂಧನ

ಮಾನ್ವಿ : ಸಾಮಾಜಿಕ ಜಾಲತಾಣವೆಂದರೆ ಕೈಯಲ್ಲಿರುವ ಮುಳ್ಳು ಇದ್ದಂಗೆ. ಬಾಲಿವುಡ್ ನಟ ಸಲ್ಮಾನ್‌ ಖಾನ್ ಅಭಿಮಾನಿಯಾಗಿದ್ದ ಮಾನ್ವಿ ನಗರದ ನಿವಾಸಿ ಸೋಹೆಲ್ ಪಾಷ ಎಂಬ ಯುವಕ ಸಲ್ಮಾನ್ ಖಾನ್ ರನ್ನು ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿದ್ದರಿಂದ ಮುಂಬಯಿ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.

ಬಹುಬೇಗ ಹೆಸರು ಮಾಡಲು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೆಸರಲ್ಲಿ ಬೆದರಿಕೆ ಹಾಕಿದ್ದ ಆರೋಪಿ ಸೋಹೆಲ್ 5ಕೋಟಿ ಕೊಡಬೇಕು ಸಂದೇಶ ಹಾಕಿದ್ದ. ಮಗನ ಬಂಧನದಿಂದ ಪೋಷಕರು ಕಣ್ಣೀರಿಡುತ್ತ ನಮ್ಮ ಮಗ ಅಮಾಯಕ ಎಂದು ತಿಳಿಸಿದ್ದಾರೆ.

ಎಂಟನೇ ತರಗತಿ ಓದಿದ್ದ ಸೋಹೆಲ್ ಪಾಷಾ ಹಿಂದಿ ಹಾಡುಗಳನ್ನ ಬರೆಯುತ್ತಿದ್ದ, ಸಲ್ಮಾನ್ ಖಾನ್ ಕುರಿತಾಗಿಯೂ ಹಾಡು ಬರೆದಿದ್ದ ಅಭಿಮಾನಿಯಿಂದಲೇ ಕೊಲೆ ಬೆದರಿಕೆ ಹಾಕಿದ್ದರಿಂದ ಮುಂಬೈ ನಗರದ ವರ್ಲಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಿಸುತ್ತಿದ್ದಾರೆ.

ಮಾನ್ವಿ ನಗರವು ಭಾರತ ದೇಶಾದ್ಯಂದ ಸೋಹೆಲ್ ಎಂಬ ಯುವಕನ ಎಡವಟ್ಟಿನಿಂದ ಪ್ರಚಲಿತದಲ್ಲಿದೆ ಎಂದು ಬುದ್ದೀ ಜೀವಿಗಳ ನೋವಿನ ನುಡಿಯಾಗಿದೆ.
ವರದಿ:R now TV ಶಫೀಕ್ ಹುಸೇನ್ ಮಾನವಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!