ರಾಯಚೂರು : ಪಡಿತರವನ್ನು ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ತಿಂಗಳ 10ನೆ ತಾರೀಖಿನೊಳಗೆ ಸರಬರಾಜು ಮಾಡಬೇಕು.ಆದರೆ ರಾಯಚೂರು ಆಹಾರ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ ಅವರ ಕಳ್ಳಾಟದಿಂದಾಗಿ ರಾಯಚೂರು ತಾಲೂಕು ಸೇರಿದಂತೆ ದೇವದುರ್ಗ, ಲಿಂಗಸುಗೂರು, ಮಾನ್ವಿ ತಾಲೂಕಲ್ಲಿ ಪಡಿತರ ಧಾನ್ಯ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜಾಗದಿರುವುದು ಬೆಳಕಿಗೆ ಬಂದಿದೆ.
ಕೆಎಫ್ ಸಿ ಗೋದಾಮಿನಿಂದ ನ್ಯಾಯಬೆಲೆ ಅಂಗಡಿಗೆ ಸರಬರಾಜಾಗದ ಕಾರಣ ಅಮಾಯಕ ಕೂಲಿ ಕಾರ್ಮಿಕರು ಪಡಿತರವನ್ನೆ ನೆಚ್ಚುವಂತಾಗಿದೆ.ಆದರೆ ಇದನ್ನು ನೋಡಬೇಕಾದ ರಾಯಚೂರು ಆಹಾರ ಅಖೆ ಉಪ ನಿರ್ದೇಶಕ ಕೃಷ್ಣಪ್ಪ ಅವರ ದುರಾಡಳಿತದಿಂದ ಬಡವರಿಗೆ ಪಡಿತರ ಇನ್ನು ಮುಟ್ಟುತ್ತಿಲ್ಲ ಎಂದು ದಲಿತ ಸಂಘಟನೆ ಮುಖಂಡರ ಆರೋಪವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರೆ ಬಡವರಿಗೆ ತಂದ ಅನ್ನಭಾಗ್ಯ ಅಕ್ಕಿ ಯೋಜನೆ ರಾಯಚೂರು ಆಹಾರ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ ಹಾಗು ರಾಯಚೂರು ತಾಲೂಕು,ದೇವದುರ್ಗ, ಲಿಂಗಸುಗೂರು ಸೇರಿದಂತೆ ಮಾನ್ವಿ ತಾಲೂಕು ಆಹಾರ ಇಲಾಖೆ ಶಿರಸ್ತೇದಾರ್ ಹಾಗು ನಿರೀಕ್ಷಕರ ದುರಾಡಳಿತದಿಂದ ಸರಕಾರದ ಆದೇಶ ಅನ್ನೋದು ಇಲ್ಲಿ ಸತ್ತೋಗಿದೆ ಎಂದು ದಲಿತ ಸಂಘಟನೆಕಾರರು ಕಿಡಿಕಾರಿದ್ದಾರೆ.
ವರದಿ:R now TV ಶಫೀಕ್ ಹುಸೇನ್ ಮಾನವಿ