ಚಿಕ್ಕಬಳ್ಳಾಪುರ : ನಗರದಲ್ಲಿ ಆಗಾಗ ಕಳ್ಳತನದ ಚಟುವಟಿಕೆಗಳು ಘೋಚರವಾಗುತ್ತಲೆ ಇರುತ್ತವೆ ಇಪ್ಪತ್ತು ದಿನಗಳ ಹಿಂದೆ ಒಂದೇ ರಾತ್ರಿ ಎರಡು ಕಡೆ ಕಳ್ಳತನವಾಗಿದ್ದು ನಿನ್ನೆ ರಾತ್ರಿಯೂ ಸಹ ಮೂರು ಅಂಗಡಿಗಳ ಶೆಟರ್ ಡೋರ್ ಮುರಿದು ಕಳ್ಳತನದ ಯತ್ನ ನಡೆಸಿರುವ ಕಳ್ಳರು ಮೋಬೈಲ್ ಅಂಗಡಿಯಲ್ಲಿ ಹತ್ತು ಸ್ಮಾರ್ಟ್ ಪೋನ್ ರೇಷನ್ ಅಂಗಡಿಯಲ್ಲಿ ಸಿಗರೇಟ್ ಪಾಕೇಟ್ ಜತೆಗೆ ಕ್ಯಾಷ್ ಬಾಕ್ಸ ನಲ್ಲಿದ್ದ ಕ್ಯಾಷ್ ಬ್ಯಾಗ್ ಕಳ್ಳತನ ಮಾಡಿ ಆ ಬ್ಯಾಗನ್ನ ಅರ್ದ ಕಿಮೀ ದೂರದಲ್ಲಿ ಬಿಸಾಡಿ ಹೋಗಿದ್ದಾರೆ.
ಚಿಕ್ಕಬಳ್ಳಾಪುರ ದಲ್ಲಿ ಇತ್ತೀಚೆಗೆ ಕಳ್ಳರ ಗ್ಯಾಂಗ್ ಗಳ ಕೈಚಳಕ ಹೆಚ್ಚಾಗತೊಡಗಿದೆ ಇದರಿಂದ ಅಂಗಡಿ ಮಾಲೀಕರಲ್ಲಿ ಆತಂಕ ಹೆಚ್ಚಾಗಿದೆ ಇಪ್ಪತ್ತು ದಿನಗಳ ಹಿಂದೆ ಬಿ ಬಿ ರಸ್ತೆ ಕ್ರಾಂತಿ ಸ್ವೀಟ್ಸ್ ಪಕ್ಕದ ಬಟಗಟೆ ಅಂಗಡಿಗೆ ನುಗ್ಗಿದ್ದ ಖತರ್ನಾಕ್ ಕಳ್ಳರು ಅವತ್ತೆ ಎಸ್ ಬಿ ಎಂ ಹಿಂಬಾಗದ ಅಂಗಡಿಯೊಂದಕ್ಕೆ ನುಗ್ಗಿ ನಗದು ಮತ್ತು ವಸ್ತುಗಳ ಕಳವು ಮಾಡಿದ್ದರೆ ಅದೇ ಮಾಧರಿಯಲ್ಲಿ ನಿನ್ನೆ ರಾತ್ರಿ ಬಿಬಿ ರಸ್ತೆ ವಾಪಸಂದ್ರದ ಎಸ್ ಎಲ್ ಎನ್ ಮೋಬೈಲ್ ಅಂಗಡಿಯಲ್ಲಿ ರಿಪೇರಿಗೆಂದು ನೀಡಿದ್ದ ಹತ್ತು ಸ್ಮಾರ್ಟ ಪೋನ್ ಕಳುವು ಮಾಡಿದ್ದರು
ಅದರ ಪಕ್ಕದ ರೇಷನ್ ಅಂಗಡಿ ಬೀಗ ಹೊಡೆದು ಸಿಗರೇಟ್ ಬಂಡಲ್ ಹಾಗು ಕ್ಯಾಷ್ ಬ್ಯಾಗ್ ಹೊತ್ತೋಯ್ದು ಮುಂದಿನ ಅರ್ದ ಕಿಮೀ ನಲ್ಲಿ ಬೇಕರಿ ಮುಂದೆ ಬಿಸಾಕಿ ಹೋಗಿರುವುದು ಪತ್ತೆಯಾಗಿದೆ ಮತ್ತೊಂದು ರೇಷನ್ ಅಂಗಡಿ ಅಂಗಡಿ ಬೀಗ ಮುರಿಯಲು ಯತ್ನಿಸಿದ್ದು ಅದು ಆಗದೆ ಇದ್ದುದಕ್ಕೆ ಹಾಗೆ ಮುಂದಕ್ಕೆ ಸಾಗಿದ್ದಾರೆ ರಾತ್ರಿ ಸುಮಾರು ಮೂರು ಗಂಟೆ ವೇಳೆ ರಸ್ತೆಯಲ್ಲಿ ಮೂರು ಜನ ನಡೆದುಕೊಂಡು ಹೋಗುತಿದ್ದನ್ನ ಅವರನ್ನ ನೋಡಿ ನಾಯಿಗಳು ಬೊಗಳ ತಿದ್ದನ್ನ ಕಣ್ಣಾರೆ ಕಂಡ ವ್ಯಕ್ತಿ ಪ್ರಕಾಶ್ ಅವರ ಚಲನವಲನ ತಿಳಿಸಿದ್ದಾರೆ ನೋಡಿ
ಪ್ರಕಾಶ್ ಖಾಸಗಿ ಕಂಪನಿ ಬಸ್ ಡ್ರೈವರ್
ಇನ್ನು ಈ ಮಾಹಿತಿ ನಗರ ಪೊಲೀಸರಿಗೆ ತಿಳಿಸಿರುವ ಅಂಗಡಿ ಮಾಲಿಕರು ಪೊಲೀಸರಿಗಾಗಿ ಹನ್ನೊಂದು ಗಂಟೆವರೆಗೂ ಕಾದರು ಬಂದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು ನಗರ ಠಾಣೆ ಪಿ ಎಸ್ ಐ ರವರನ್ನ ವಿಚಾರಿಸಿದಾಗ ಎನಿಲ್ಲ ಬಿಡಿ ಏನೂ ಕಳುವಾಗಿಲ್ಲ ಅಂತ ನಿರ್ಲಕ್ಷದ ಉತ್ತರ ಕೊಟ್ಟಿದ್ದಾರೆ ಪೊಲೀಸರ ಲೆಕ್ಕಾಚಾರದಲ್ಲಿ ದೊಡ್ಡದೊಡ್ಡ ಮಟ್ಟದಲ್ಲಿ ಕಳುವಾದ್ರೆ ಮಾತ್ರನೆ ಅದು ಕಳ್ಳತನ ಅನ್ನಿಸಿಕೊಳ್ಳುತ್ತಾ ಅನ್ನೋ ಬಾವನೆ ಎದ್ದುಕಾಣುತಿತ್ತು.