ಚಿಕ್ಕಬಳ್ಳಾಪುರ ನಗರ ಈಗ ಪ್ರವಾಸಿ ತಾಣ ಆಗಿರುವುದರಿಂದ ಪುತ್ಪಾಟ್ ಅಂಗಡಿ ಮತ್ತು ಹೋಟೆಲ್ ಗಳು ಆಗಿದ್ದು ನಗರದ ಅಂದವನ್ನು ಕೆಡುಸುವಂತಾಗಿದೆ,ಇಲ್ಲಿಯ ಸ್ಥಳೀಯ ಸಂಸ್ಥೆಯು ಸೂಚಿಸಿರುವ ನಿಯಮಗಳನ್ನು ಎಲ್ಲರೂ ಪಾಲಿಸಿ ನಗರದ ಅಭಿವೃದ್ಧಿಗೆ ಸಹಕರಿಸಬೇಕು
ಮತ್ತು ನಿಮ್ಮಿಂದ ಆಗುವ ಟ್ರಾಫಿಕ್ ಸಮಸ್ಯೆಯನ್ನು ತಡೆಯಬೇಕು ಎಂದು ನಗರ ಸಭೆ ಅಧ್ಯಕ್ಷ ಎ. ಗಜೇಂದ್ರ ತಿಳಿಸಿದರು.
ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ನಗರದ ಎಲ್ಲಾ ಬೀದಿ ಬದಿ ವ್ಯಾಪಾರಿಗಳ ಜೊತೆ ಸಭೆ ಮಾಡಿದ ನಗರಸಭೆ ಅಧ್ಯಕ್ಷ.ಎ.ಗಜೇಂದ್ರ ಮಾತನಾಡಿ ನಗರದಲ್ಲಿ ವಾಹನ ದಟ್ಟಣೆ ಹಾಗೂ ಜನರ ಒಡಾಟದ ಬಗ್ಗೆ ಸಮಸ್ಯೆಯು
ಈ ವ್ಯಾಪಾರಸ್ಥರಿಂದ ಆಗುತ್ತಿದೆ ಎಂಬುದು ದೂರಿನನ್ವಯ ಚರ್ಚಿಸಲಾಗಿ ಮುಖ್ಯವಾಗಿ ನಗರದ ಬಿ ಬಿ ರಸ್ತೆಯಲ್ಲಿ ಎಲ್ಲಾ ವ್ಯಾಪಾರಸ್ಥರ ಜೊತೆ ಮಾತುಕತೆ ಮಾಡಿ ಅವರ ವ್ಯಾಪಾರಸ್ಥರಿಗೂ ಅನುಕೂಲವಾಗುವಂತೆ ಹಾಗೂ ವಾಹನ ನಿಲುಗಡೆಗೂ ವಾಹನ ದಟ್ಟನೆ ನೀವೇ ನಿವಾರಣೆ ಮಾಡಬೇಕು, ಒಂದು ವೇಳೆ ಯಾವ ಬೀದಿ ಬದಿ ವ್ಯಾಪಾರಸ್ಥರು ನಗರಸಭೆ ನಿಯಮವಳಿ ಮೀರಿದವರಿಗೆ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ನಗರಸಭೆಯ ಅಧಿಕಾರಿಗಳಿಗೆ ಸೂಚಿಸಲಾಯಿತು.
ನಗರ ಸಭೆ ಉಪಾಧ್ಯಕ್ಷರಾದ ಜೆ. ನಾಗರಾಜ್ ಮಾತನಾಡಿ ಇನ್ನು ಕೌಶಲ್ಯ ಅಭಿವೃದ್ಧಿ ಜಿಲ್ಲಾ ನಿರ್ದೇಶಕರು ವೆಂಕಟಾಚಲಪತಿಯವರು ಎಲ್ಲಾ ಬೀದಿ ಬದಿ ವ್ಯಾಪಾರಸ್ಥರಿಗೆ ನಗರ ಸಭೆಯ ಒಂದು ಫುಡ್ ಸ್ಟ್ರೀಟ್ ಮಾಡಿ ಒಂದೇ ಸೂರಿನ ಅಡಿಗೆ ಎಲ್ಲರನ್ನು ಸೇರಿಸಿ ಕಿರಿಕಿರಿ ಆಗದಂತೆ ತಡೆಯಬಹುದು ಎಂದರು.
ನಗರದ ಬೀದಿ ಬದಿ ವ್ಯಾಪಾರಿಗಳ ಕ್ಷೇಮದ ಬಗ್ಗೆ ನಗರ ಸಭೆಯ ನಿಯಮಗಳನ್ನು ಇನ್ನು ಮೇಲೆ ಪಾಲಿಸುತ್ತೇವೆ ಎಂದು ಅಸ್ಲಾಂ ಪಾಶ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತರಾದ ಮನ್ಸೂರ್ ಆಲಿ, ಟ್ರಾಫಿಕ್ ಪೊಲೀಸ್ASI ನಾಗರಾಜ್, ನಗರ ಪೊಲೀಸ್ ಸಬ್ ಇನ್ಸ್ಪೆಕ್ಟರಾದ ಅಮರ್, ನಗರಸಭೆ ಪರಿಸರ ಅಭಿಯಂತರರು ಉಮಾಶಂಕರ್, ಬೀದಿ ಬದಿ ವ್ಯಾಪಾರಸ್ಥರು ಹಾಜರಿದ್ದರು.