ಚಿಕ್ಕಬಳ್ಳಾಪುರ: ಕಳೆದ ನಗರಸಭಾ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡಮತಧಾನ ಮಾಡಿದ ಕಾರಣ ರಾಜ್ಯ ಅಧ್ಯಕ್ಷರ ಸೂಚನೆ ಮೇರೆಗೆ ಆರ್ ಮಟಮಪ್ಪರವರನ್ನ ಜೆಡಿಎಸ್ ಪಕ್ಷದಿಂದ ಬೃಹತ್ ಉಚ್ಚಾಟಿಸಲಾಗಿದೆ ಅವರ ಜತೆಗೆ ವೀಣಾರಾಮುರನ್ನು ಉಚ್ಚಾಟಿಸಲಾಗಿದ್ದು ಇಬ್ಬರ ನಗರಸಭಾ ಸದಸ್ಯತ್ವ ರದ್ದುಗೊಳಿಸುವಂತೆ ಕೋರಿ ಡಿಸಿ ಗೆ ಪತ್ರ ಬರೆಯಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತಮುನಿಯಪ್ಪ ತಿಳಿಸಿದ್ದಾರೆ
ಜೆಡಿಎಸ್ ಸರ್ವೋಚ್ಚ ನಾಯಕ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್ ಡಿ ಕುಮಾರಸ್ವಾಮಿಯವರ ಜನ್ಮದಿನ ಇಂದು
ಚಿಕ್ಕಬಳ್ಳಾಪುರ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಮುಕ್ತಮುನಿಯಪ್ಪ ಕಾರ್ಯಾಧ್ಯಕ್ಷ ಕೆ ಆರ್ ರೆಡ್ಡಿ ಮುಖಂಡತ್ವದಲ್ಲಿ ಬೃಹತ್ ಗಾತ್ರದ ಕೇಕ್ ಕತ್ತರಿಸಿ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಹಂಚಿಕೆ ಮಾಡಲಾಯಿತು
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಹಚ್ ಡಿ ಕುಮಾರಸ್ವಾಮಿ ರಾಜ್ಯದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಅವರ ಸೇವೆ ರಾಜ್ಯದ ಜನರಿಗೆ ಮತ್ತಷ್ಟು ಸಿಗಬೇಕು ಅವರಿಗೆ ದೇವರು ಆರೋಗ್ಯ ಸುಖ ಸಂತೋಷ ನೀಡಲಿ ಎಂದು ಶುಭಕೋರಿದ ನಂತರ ಚಿಕ್ಕಬಳ್ಳಾಪುರ ದಲ್ಲಿ ಕಳೆದ ನಗರಸಭಾ ಚುನಾವಣೆಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಗೆದ್ದು ಉಪಾಧ್ಯಕ್ಷರಾಗಿದ್ದ ವೀಣಾ ರಾಮು ಹಾಗು ಒಂಬತ್ತನೆ ವಾರ್ಡು ಕೌನ್ಸಿಲರ್ ಗಳು ಪಕ್ಷದ ವಿಪ್ ಉಲ್ಲಂಘಿಸಿ ಎನ್ ಡಿ ಎ ಅಭ್ಯರ್ಥಿಗಳ ಬದಲು ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳಿಗೆ ಮತಧಾನ ಮಾಡಿದ್ದಾರೆ
ಇದು ಪಕ್ಷ ವಿರೋದಿ ಚಟುವಟಿಕೆಯಾಗಿದ್ದರಿಂದ ರಾಜ್ಯಾಧ್ಯಕ್ಷರ ಅನುಮತಿ ಮೇರೆಗೆ ಇಬ್ಬರನ್ನೂ ಪಕ್ಷದಿಂದ ಉಚ್ಚಾಟಿಸಲಾಗಿದೆ ಈಗ ಅವರ ನಗರಸಭಾ ಸದಸ್ಯತ್ವ ರದ್ದುಗೊಳಿಡುವಂತೆ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು
ಈ ವೇಳೆ ತಾಲ್ಲೂಕು ಅಧ್ಯಕ್ಷ ಕೆ ಬಿ ಮುನಿರಾಜು,ಮಂಚೇನಹಳ್ಳಿ ಪ್ರಬಾ, ನಾರಾಯಣಗೌಡ,ಬಂಡ್ಲುಶ್ರೀನಿವಾಸ್, ಶ್ರೀದರ್,ಶಾಂತಮೂರ್ತಿ,ನಾರಾಯಣಸ್ವಾಮಿ ಇತರರು ಇದ್ದರು.