ಚಿಕ್ಕಬಳ್ಳಾಪುರ : ಇಶಾ ಫೌಂಡೇಶನ್ ಹಮ್ಮಿಕೊಂಡಿರುವ ಗ್ರಾಮೋತ್ಸವದಲ್ಲಿ ಕರ್ನಾಟಕ ರಾಜ್ಯದಲ್ಲಿ 5 ಸಾವಿರ ಯುವಕ ಯುವತಿಯರು ಪಾಲ್ಗೊಂಡಿದ್ದರೆ ಐದು ರಾಜ್ಯಗಳಿಂದ 43 ಸಾವಿರ ಜನ ಕ್ರೀಡೆಗಳಲ್ಲಿ ಪಾಲ್ಗೊಂಡು ಉತ್ಸಾಹ ಬರಿತರಾಗಿದ್ದಾರೆ, ನಿತ್ಯ ಕೆಲಸ ಕಾರ್ಯದ ಜತೆಗೆ ಕ್ರೀಡೆಯೂ ಮನುಷ್ಯನ ಆರೋಗ್ಯ ಹೆಚ್ವಿಸುತ್ತದೆ ಜೊತೆಗೆ ದುಷ್ಚಟಗಳಿಂದ ದೂರ ಮಾಡುತ್ತೆ ಇದೆ ತಿಂಗಳ 28-29 ರಂದು ಕೊಯಂಬತೂರಿನಲ್ಲಿ ಪೈನಲ್ಸ್ ನಡೆಯಲಿದೆ ಎಂದು ಇಶಾ ಪೌಂಡೇಶನ್ ಸದ್ಗುರು ಜಗ್ಗಿವಾಸುದೇವ್ ತಿಳಿಸಿದರು.
ಚಿಕ್ಕಬಳ್ಳಾಪುರ ಹೊರ ವಲಯ ಆವಲಗುರ್ಕಿ ಪಂಚಾಯಿತಿ ಇಶಾ ಪೌಂಡೇಶನ್ ಆದಿಯೋಗಿ ಕ್ಷೇತ್ರದಲ್ಲಿಂದು ಸದ್ಗುರು ಜಗ್ಗಿವಾಸುದೇವ್ ಮಾದ್ಯಮಗಳ ಜೊತೆ ಸಂವಾದ ನಡೆಸಿದರು.
ಈ ವೇಳೆ ಮಾತನಾಡಿದ ಅವರು ಗ್ರಾಮೀಣ ಯುವಕ ಯುವತಿರಲ್ಲೂ ಕ್ರೀಡಾ ಮನೋಬಾವನೆ ಇದೆ ಅವರಿಗೆ ಅವಕಾಶಗಳನ್ನ ಕಲ್ಪಿಸೋರಿಲ್ಲ ನಮ್ಮ ಇಶಾ ಪೌಂಡೇಶನ್ ಕ್ರೀಡಾ ಚಟುವಟಿಕೆಗಳನ್ನ ಇಪ್ಪತ್ತು ವರ್ಷಗಳಿಂದ ಗ್ರಾಮೋತ್ಸವ ಹೆಸರಿನಲ್ಲಿ ಎಲ್ಲರಿಗೂ ಕ್ರೀಡಾ ಚಟುವಟಿಕೆಗಳನ್ನ ಹಮ್ಮಿಕೊಳ್ಳುತ್ತಾ ಬರುತ್ತಿದೆ. ಕರ್ನಾಟಕ ರಾಜ್ಯ ಸೇರಿದಂತೆ ಐದು ರಾಜ್ಯಗಳ ಗ್ರಾಮೋತ್ಸವದಲ್ಲಿ 43 ಸಾವಿರ ಜನ ಪಾಲ್ಗೊಂಡಿದ್ದಾರೆ
ಈ ಕ್ರೀಡೆ ಜನರನ್ನು ಉತ್ಸಾಹ ಹಾಗು ಉಲ್ಲಾಸ ಬರಿತರನ್ನಾಗಿಸುತ್ತದೆ. ಆ ಕಾರಣದಿಂದ ನಡೆಸುತ್ತಿರುವ ಕ್ರೀಡೆಗಳಲ್ಲಿ ನಾನು ಗೆಲ್ಲಬೇಕು ನಾನು ಮೊದಲ ಬಹುಮಾನ ಪಡೆಯಬೇಕು ಎಂಬ ಕಾತುರತೆ ಇರುತ್ತೆ ಇದರಿಂದ ದುಷ್ವಟಗಳಿಗೆ ಬಲಿಯಾಗುವ ಸಮಯವನ್ನ
ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ, ಜಾತಿ ಬೇದ ಮತ ಕಲಹ ಮರೆತು ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಾರೆ, ಈ ಬಾರಿ ನಡೆದ ಗ್ರಾಮೋತ್ಸವದಲ್ಲಿ ಕರ್ನಾಟಕ ರಾಜ್ಯದಿಂದ 5 ಸಾವಿರ, ಐದು ರಾಜ್ಯಗಳಿಂದ ಒಟ್ಟು 43 ಸಾವಿರ ಕ್ರೀಡಾಸಕ್ತರು ಪಾಲ್ಗೊಂಡಿದ್ದಾರೆ, ಇದೆ ತಿಂಗಳ 28ಮತ್ತು 29ರಂದು ಪೈನಲ್ಸ್
ಕೊಯಂಬತ್ತೂರಿನಲ್ಲಿ ನಡೆಯಲಿದೆ ಎಂದು ತಿಳಿಸಿದರು. ಚಿಕ್ಕಬಳ್ಳಾಪುರ ಇಶಾ ಆದಿಯೋಗಿ ಕ್ಷೇತ್ರಕ್ಕೆ 9 ತಿಂಗಳ ನಂತರ ಬೇಟಿ ನೀಡಿದ್ದ ಸದ್ಗುರುವನ್ನ ಸಂದರ್ಶಿಸಲು ನೂರಾರು ಜನ ಕಾಯುತಿದ್ದರು ಎಲಿಕ್ಯಾಪ್ಟರ್ ನಲ್ಲಿ ಬಂದಿಳಿದ ಜಗ್ಗಿವಾಸುದೇವ್ ಮೊದಲು ಮಾಧ್ಯಮ ಸಂವಾದ ಮುಗಿಸಿ ನಂತರ ಆದಿಯೋಗಿ ಕ್ಷೇತ್ರದ ಭಕ್ತರನ್ನ ಬೇಟಿ ಮಾಡಿದರು.
ವರದಿ :ಮೋಹನ್ ಕುಮಾರ್ ಆರ್,ನೌ, ಟಿವಿ ಚಿಕ್ಕಬಳ್ಳಾಪುರ