ಚಿಕ್ಕಬಳ್ಳಾಪುರ: ಹಾರೋಬಂಡೆ ,ಆವಲಗುರ್ಕಿ ಸೇರಿದಂತೆ ತಾಲ್ಕೂಕಿನಾಧ್ಯಂತ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಕುಟುಂಬಗಳಿಗೆ ನಿವೇಶನ ಹಂಚಿಕೆ ಹೌಸ್ ಲಿಷ್ಟ್ ತಿದ್ದುಪಡಿ ಅಕ್ರಮ ಸ್ಮಶಾನಗಳಿಗೆ ಮುಂಜೂರಾಗಿದ್ದ ಭೂಮಿ ಒತ್ತುವರಿ ಮಾಡಿಕೊಂಡಿದ್ದು ಹಲವು ಅಕಗರಮಗಳಿಗೆ ಕಾರಣವಾಗಿರುವ
ಪಿಡಿಒ ಹಾಗು ಇಒ ಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ದಲಿತರಿಗೆ ನ್ಯಾಯಕೊಡಿಸಬೇಕೆಂದು ಒತಗತಾಯಿಸಿ ಮಹಾ ನಾಯಾಕ ಅಂಬೇಡ್ಕರ್ ಸೇನೆ ವತಿಯಿಂದ ತಾಲ್ಕೂಕು ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಚಿಕ್ಕಬಳ್ಳಾಪುರ ತಾಲ್ಲೂಕು ಹಾರೋಬಂಡೆ ಆವಲಗುರ್ಕಿ ಸೇರಿದಂತೆ ಹಲವಾರು ಪಂಚಾಯಿತಿಗಳಲ್ಲಿ ದಲಿತರ ಪರಿಶಿಷ್ಟ ಜಾತಿ ಹಾಗು ಪಂಗಡಗಳ ಜನಾಂಗಕ್ಕೆ ಸೇರಿದ ನಿವೇಶನ ಹಾಗು ಸ್ಮಶಾನ ಜಾಗಗಳ ಒತ್ತುವರಿ ಮಾಡಲಾಗಿದೆ ಹೌಸ್ ಲಿಷ್ಟ್ ತದ್ದುಪಡಿ ಮಾಡಲಾಗಿದೆ
ಈ ಬ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವ ಗ್ರಾಮಪಂಚಾಯಿತಿ ಸದಸ್ಯರು,ಅಭಿವೃದ್ದಿ ಅಧಿಕಾರಿಗಳು,ಇಒ ರವರ ಮೇಲೆ ಕ್ರಮ ಜರುಗಿಸಬೇಕು ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಮಹಾನಾಯಕ ಡಾ ಬಿ ಆರ್ ಅಂಬೇಡ್ಕರ್ ಸೇನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡಿದ್ದರು
ಈ ವೇಳೆ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಧಲಿ ಮಂಜುನಾಥ್ ಎಲ್ಲ ಪಂಚಾಯಿತಿಗಳಲ್ಲಿ ಪ್ರಭಾವಿಗಳ ಒತಗತಡಕ್ಕೆ ಮಣಿದು ನಿವೇಶನಗಳ ತಿದ್ದುಪಡಿ ಮಾಡಿ ಬ್ರಷ್ಟಾಚಾರಕ್ಕೆ ಬಲಿಯಾಗಿದ್ದಾರೆ ಪ್ರಭಾವಿಗಳಿಗೆ ಮಾರಾಟ ಮಾಡಿಕೊಂಡಿದ್ದಾರೆ ಈ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಅಮಾನತ್ತುಗೊಳಿಸಬೇಕೆಂದು ಒತ್ತಾಯಿಸಿದರು
ಈ ವೇಳೆ ರಾಜ್ಯಾದ್ಯಕ್ಷ ಡಿ ವಿ ನಾರಾಯಣಸ್ವಾಮಿ,ರಾಜು,ನರಸಿಂಹಮೂರ್ತಿ,ದೇವದಾಸು,ಹರೀಶ್,ರೂಪ,ಸುಜಾತ,ಜ್ಯೋತಿ,ರಾಜು, ಹಾಗೂ ಹಳ್ಳಿ ಮಕ್ಕಳ ಸಂಘದ ಉಪಾಧ್ಯಕ್ಷ ವೆಂಕಟರವಣಪ್ಪ ಇತರರು ಹಾಜರಿದ್