ಮಕ್ಕಳು ದೇವರಿಗೆ ಸಮಾನ ಅವರಿನ್ನು ಸುಪ್ತಮನಸ್ಸಿನವರಾಗಿದ್ದಾರೆ ಅವರನ್ನ ಜೀತಕ್ಕಿಟ್ಟುಕೊಂಡು ದುಡಿಸಿಕೊಳ್ಳುವುದಾಗಲಿ ತಮ್ಮ ತಮ್ಮ ಮನೆಗಳಲ್ಲಿಯೆ ಇರಿಸಿಕೊಂಡು ಶಾಲೆಗೆ ಕಳಿಸದೆ ಕೆಲಸ ಮಾಡಿಸಿಕೊಳ್ಳುವುದಾಗಿ ಅದೊಂದು ಅಫರಾಧ ಅವರಿಗೆ ಕಲಿಯುವ ಆಸಕ್ತಿ ಇರುವ ವಿಷಯವಾರು ಬೆಳೆಯಲು ಅವಕಾಶ ಮಾಡಿಕೊಡಬೇಕೆಂದು ಜೀವಿಕ ರಾಜ್ಯ ಅಧ್ಯಕ್ಷ ಕಮಲ್ ಪ್ರಸಾಧ್ ತಿಳಿಸಿದರು.
ಚಿಕ್ಕಬಳ್ಳಾಪುರ ತಾಲ್ಲೂಕು ಬಾಗೇಪಲ್ಲಿ ಹಾಗೂ ತಮ್ಮನಾಯಕನಹಳ್ಳಿ ಅಂಬೇಡ್ಕರ್ ಭವನದಲ್ಲಿ ಜೀವಿಕ ಜಿಲ್ಲಾ ಘಟಕದಿಂದ ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ ಹಾಗು ಆಟೋಟ ಸ್ಪರ್ದೆಗಳನ್ನ ಏರ್ಪಡಿಸಲಾಗಿತ್ತು
ರಾಜ್ಯ ಸಂಸ್ಥಾಪಕ ಅಧ್ಯಕ್ಷ ಕಿರಣ್ ಕಮಲ್ ಪ್ರಸಾದ್ ಬಾಗವಹಿಸಿ ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆದು ಆಟವಾಡಿದರು ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಕ್ಕಳನ್ನ ಜೀತಕ್ಕಿಟ್ಟುಕೊಳ್ಳುವುದು ಅಫರಾಧ ಅವರು ಮೈನರ್ ನಿಂದ ಮೇಜರ್ ಆದ ಮೇಲೆ ಅವನ ಬುದ್ದಿ ಅವನಿಗೆ ಬರುತ್ತೆ
ಅವನಿಗೆ ಬೇಕಾದ ಕೋರ್ಸ್ ಗಳನ್ನ ಕಲಿಯಲು ಅವಕಾಶ ನೀಡಬೇಕು ಒತ್ತಾಯಪೂರ್ವಕವಾಗಿ ಪೊಷಕರು ಒತ್ತಡ ಹೇರಬಾರದು ಜೀತ ವಿಮುಕ್ತಿಗೊಂಡ ಮಕ್ಕಳಿಗೂ ಸರ್ಕಾರದಿಂದ ಪ್ರತ್ಯೇಕ ಸೌಲಬ್ಯಗಳು ಇವೆ ಎಂದರು
ಜೀವಿಕ ಸಂಘಟನೆಯ ರಾಜ್ಯ ಸಂಚಾಲಕರಾದ ಕಿರಣ್ ಕಮಲ್ ಪ್ರಸಾದ್, ಮತ್ತು ತಾಲೂಕು ಸಂಚಾಲಕರಾದ ಮೂರ್ತಿ, ತಾಲೂಕು ಸಹ ಸಂಚಾಲಕರಾದ ಈಶ್ವರ್, ಜಿಲ್ಲಾ ಸಂಚಾಲಕರಾದ ನಾರಾಯಣಸ್ವಾಮಿ, ಚನ್ನರಾಯಪ್ಪ, ಜಿಲ್ಲಾ ಮಹಿಳಾ ಸಂಚಾಲಕರಾದ ವೆಂಕಟನಾರಾಯಣಮ್ಮ, ನಟ ಶ್ರೀನಿವಾಸ್, ನರಸಿಂಹಪ್ಪ, ಸಂಜೆ ಶಾಲೆಯ ಶಿಕ್ಷಕಿ ಆದಂತಹ ತಮ್ಮನಾಯಕನಹಳ್ಳಿ ನಂದಿನಿ, ದೊಡ್ಡ ಕಿರುಗಂಬಿ ಗೀತಾ,ದೇವರಾಜ್, ಹಾಗೂ ಊರಿನ ಗ್ರಾಮಸ್ಥರು ಮುಖಂಡರುಗಳು ಈ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು.