Welcome to reportnowtv.in   Click to listen highlighted text! Welcome to reportnowtv.in
Thursday, December 26, 2024
Homechikkaballapuraಚಿಕ್ಕಬಳ್ಳಾಪುರದಲ್ಲಿ ಸಂಸದ ಡಾ ಸುಧಾಕರ್ ರಿಂದ ಬಡವರ ನಿವೇಶನ ಹಂಚಿಕೆಗೆ ಒಟ್ಟಾಗಲು ಕರೆ ಸಭೆಯಲ್ಲಿ ಬಿಸಿ...

ಚಿಕ್ಕಬಳ್ಳಾಪುರದಲ್ಲಿ ಸಂಸದ ಡಾ ಸುಧಾಕರ್ ರಿಂದ ಬಡವರ ನಿವೇಶನ ಹಂಚಿಕೆಗೆ ಒಟ್ಟಾಗಲು ಕರೆ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ.

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ನಗರಸಭೆ ಮುಂದಿನ ಅವದಿಗೆ ನೂತನವಾಗಿ ಆಯ್ಕೆಯಾಗಿರುವ ಎ ಗಜೇಂದ್ರ ಅಧ್ಯಕ್ಷತೆಯಲ್ಲಿ ಇದೆ ಮೊದಲ ಸಾಮಾನ್ಯ ಸಭೆ ಹಮ್ಮಿಕೊಳ್ಳಲಾಗಿತ್ತು ನೀರಿಕ್ಷೆಯಂತೆ ಮಾಜಿ ಸಚಿವ ಡಾ ಕೆ.ಸುಧಾಕರ್ ಕಾಲದ ನಿವೇಶನ ಹಂಚಿಕೆ ವಿಷಯ ಚರ್ಚೆಯಲ್ಲಿ ಸಂಸದರ ಮುಂದೆಯೆ ಪರ ವಿರೋದ ಪಕ್ಷದ ಸದಸ್ಯರ ಬಿಸಿ ಬಿಸಿ ಚರ್ಚೆಯಾಯಿತು ಎಲ್ಲ ಸದಸ್ಯರ ವಾರ್ಡುಗಳಲ್ಲಿ ನವರಿಗೆ ಸೈಟು ಕೊಡಿಸಲು ಮುಂದಾಗಿ ಇಗಾಗಲೆ ಮಾಡಿರುವ ಪಟ್ಟಿಯಲ್ಲಿ ಇನ್ನಾರನ್ನಾದ್ರೂ ಸೇರಿಸಬೇಕಿದ್ರೆ ಸೇರಿಸಿ ತೆಗೆಯುವಂತವರಿದ್ರೆ ತೆಗೆಯಿರಿ ಆದ್ರೆ ಬಡವರಿಗಾಗಿ ನೀಡಿರುವ ಹಕ್ಕುಪತ್ರಗಳನ್ನ ಊರ್ಜಿತಗೊಳಿಸಿ ಎಂದು ಮನವಿ ಮಾಡಿದ್ರು.

ಚಿಕ್ಕಬಳ್ಳಾಪುರ ನಗರ ಸಭೆಯ ಸಾಮನ್ಯ ಸಭೆ ಇಂದು ನಡೆಯಿತು ಎ ಗಜೇಂದ್ರ ಅಧ್ಯಕ್ಷರಾದ ಮೇಲೆ ಇದೆ ಮೊದಲ ಸಭೆಯಾಗಿದ್ದು ಸಬೆಗೂ ಮುನ್ನ ಚರ್ಚೆಗೆ ಕೆಲವು ವಿಷಯಗಳನ್ನ ತರಬಾರದು ಎಂಬುದರ ಬಗ್ಗೆ ಬಾರಿ ಚರ್ಚೆಯಾಗಿತ್ತು ಇಂದಿನ ಸಭೆಗೆ ಸಂಸದ ಡಾ ಕೆ.ಸುಧಾಕರ್ ಹಾಜರಾಗಿ ಜನರಿಗೆ ಇಗಾಗಲೆ ವಿತರಿಸಿರುವ ಹಕ್ಕುಪತ್ರಗಳಂತೆ ನಿವೇಶನಕ್ಕೆ ಜಮೀನು ವಶಪಡಿಸಿಕೊಂಡು ಅಭಿವೃದ್ದಿ ಪಡಿಸಲು ನಗರಸಭೆ ಮುಂದಾಗಬೇಕು ಎಲ್ಲಾ ವಾರ್ಡುಗಳ ಬಡವರಿಗೂ ಅನುಕೂಲವಾಗುತ್ತೆ ಅದಕ್ಕಾಗಿ ಪಕ್ಷಾತೀತವಾಗಿ ಬೆಂಬಲಿಸಿ ಬಡವರಿಗೆ ಸೈಟು ಕೊಡಿಸಿ ಎಂದು ಮನವಿ ಮಾಡಿದರು.ಈ ವೇಳೆ ಮಾತಿಗೆ ಮುಂದಾದ ವಿರೋದ ಪಕ್ಷದ ಸದಸ್ಯ ಅಂಬರೀಷ್,ನರಸಿಂಹಮೂರ್ತಿ ನಿವೇಶನ ಮುಂಜೂರಾತಿಗೆ ಟೆಕ್ನಿಕಲ್ ಇಲಾಖೆಯಿಂದ ಕೆವಲ ಒಪ್ಪಿಗೆ ಆಗಿದೆ ಆದ್ರೆ ಜಮೀನು ಎಲ್ಲಿದೆ ಅದು ನಮಗೆ ವಶೀಕರಣವಾಗಿಲ್ಲ ಇದೆಲ್ಲಾ ಸಮಸ್ಯೆ ಇದೆ ಅಷ್ಟು ಬೇಗ ಹೇಗೆ ಸಾದ್ಯ ಎಂದರು ಅದಕ್ಕೆ ಮಾಜಿ ಅಧ್ಯಕ್ಷ ಆನಂದಬಾಬುರೆಡ್ಡಿ ಉಪಾಧ್ಯಕ್ಷ ಗ್ಯಾಸ್ ನಾಗರಾಜ್ ಆಕ್ಷೇಪ ತೆಗೆದರು ಆಗ ಎಂಟ್ರಿ ಆದ ಹಿರಿಯ ಸದಸ್ಯ ಎಸ್ ಎಂ ರಪೀಕ್ ಆಯಿತು ಜನರಿಗೆ ಅದರಲ್ಲೂ ಬಡವರಿಗೆ ಸೈಟು ಕೋಡೋ ವಿಚಾರದಲ್ಲಿ ರಾಜಿಯಾಗೋಣ ನಮ್ಮ ವಾರ್ಡುಗಳಲ್ಲಿರುವ ಬಡವರಿಗೆ ಕೊಡಿಸೊಣ ಎಂದರು ಕೆಲವರು ಪಟ್ಟಿಯಲ್ಲಿ ಬಡವರಿಲ್ಲ ಪ್ರಬಾವಿಗಳು ಇಗಾಗಲೆ ಮನೆ ಸೈಟು ಇರುವವರ ಹೆಸರುಗಳಿವೆ ಎಂದರು ಆಗ ಇನ್ನೂ ಹೊಸ ಹೆಸರುಗಳು ಹೆಸರಿಸಲು ಅವಕಾಶ ಇದೆ ಇನ್ನಷ್ಟು ಜನರ ಪಟ್ಟಿಕೊಡಿ ಎಂದು ಹೇಳಿ ಒಟ್ನಲ್ಲಿ ಹೊರಗಿಟ್ಟಿದ್ದ ವಿಷಯವನ್ನ ಒಳಗೆಳಲೆದು ಒಕೆ ಮಾಡಿಬಿಟ್ಟರು ಇನ್ನುಳಿದಂತೆ ಒಳ ಚರಂಡಿ,ನೀರು ಸ್ವಚ್ಚತೆ ಬಗ್ಗೆ ಚರ್ಚೆ ನಡೆಯಿತು ಅಗಾಗ ವಿರೋದ ಪಕ್ಷದ ಸದಸ್ಯರು ನಮ್ಮ ಸಮಸ್ಯೆಗಳನ್ನ ಪರಿಗಣಿಸಿಲ್ಲ ಎಂದು ಮದ್ಯಪ್ರವೇಶಿಸಿದರು ಅವರನ್ನ ಅಧ್ಯಕ್ಷರು ಸಮಾಧಾನ ಮಾಡಿ ನಿಮ್ಮೆಲ್ಲ ಕಲಸಗಳನ್ನೂ ಮಾಡಿಕೊಡಲಾಗುವುದು ಎಂದು ಸುಮ್ಮನಾಗಿಸಿದರು. 

ಸಭೆ ಮುಗಿದ ನಂತರ ಮಾತನಾಡಿದ ಅಧ್ಯಕ್ಷ ಎ ಗಜೇಂದ್ರ ಮೊದಲ ಸಭೆ ಸುಸೂತ್ರವಾಗಿ ನಡೆದಿದೆ ಪ್ರಮುಖವಾಗಿ ಬಡವರಿಗೆ ನಿವೇಶನ ಹಂಚಿಕೆ ವಿಚಾರದಲ್ಲಿ ಆರೋಗ್ಯಕರ ಚರ್ಚೆ ನಡೆದಿದ್ದು ಸಂಸದರಾದ ಡಾ.ಕೆ.ಸುಧಾಕರ್ ಸೈಟುಗಳ ಅಭಿವೃದ್ಧಿ ಪಡಿಸಲು ವಿಶೇಷ ಅನುದಾನ ತರುವುದಾಗಿ ಭರವಸೆ ನೀಡಿದ್ದಾರೆ ಇನ್ನು ನಗರದಲ್ಲಿ ಸ್ವಚ್ಛತೆ ಬೀದಿ ದೀಪಗಳ ವ್ಯವಸ್ಥೆ ರಸ್ತೆ ಅಭಿವೃದ್ಧಿ,ಮೂಲ ಸೌಕರ್ಯ ಕಲ್ಪಿಸುವ ಸಂಭಂದಪಟ್ಟಾಗಿ ಚರ್ಚೆ ನಡೆದದ್ದು ಎಲ್ಲ ನಗರ ಸಭೆಯ ಸದಸ್ಯರು ಅಭಿವೃದ್ಧಿ ವಿಚಾರವಾಗಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಕಾಳಜಿಯಿಂದ ಕೆಲಸ ಮಾಡಲಾಗುವುದು ಜನರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳ ಜೊತೆಗೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಇನ್ನು ಖಾತೆಗಳ ಸಮಸ್ಯೆ ಬಗೆಹರಿಸಲು ಪ್ರತಿ ವಾರ್ಡ್ನನಲ್ಲಿ ಖಾತಾ ಅದಾಲತ್ ನಡೆಸಲಾಗುವುದು ಎಂದ ಅವರು 

ಇನ್ನಷ್ಟು ವಿಷಯಗಳ ಚರ್ಚೆಗೆ ಅವಕಾಶ ಇಲ್ಲದ ಕಾರಣ ಮುಂದಿನ ಸಭೆಗಳಲ್ಲಿ ಒಂದೊಂದಾಗಿ ಚರ್ಚಿಸಿ ಅಭಿವೃದ್ದಿಗೆ ಮುಂದೆಜ್ಜೆ ಇಡುತ್ತೇವೆ ಇವತ್ತಿನ ಸಭೆಗೆ ಬಂದು ಹಲವು ಮಹತ್ತರ ವಿಷಯಗಳ ಬಗ್ಗೆ ಸಲಹೆ ಸೂಚನೆ ನೀಡಿದ ಸಂಸದ ಡಾ ಕೆ.ಸುಧಾಕರ್ ಗೆ ಹಾಗು ಪರ ವಿರೋದ ಪಕ್ಷದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಈ ವೇಳೆ ಉಪಾಧ್ಯಕ್ಷ ಜೆ ನಾಗರಾಜ್,ಪೌರಾಯುಕ್ತ ಮನ್ಸೂರ್ ಆಲಿ

ಸದಸ್ಯರಾದರಫೀಕ್,ಅನಂದಬಾಬುರೆಡ್ಡಿ,ಯತೀಶ್,ಸುಬ್ರಮಣ್ಯಚಾರಿ,ಅಂಬರೀಶ್,ನರಸಿಂಹಮೂರ್ತಿ,ಕಣಿತಳ್ಳಿ ವೆಂಕಟೇಶ್,ಚಂದ್ರಶೇಖರ್,ಜಾಫರ್,ಅಫ್ಜಲ್,ಭಾರತಿ ದೇವಿ,ಆರ್ ಮಟಮಪ್ಪ,ನಿರ್ಮಲಾ ಪ್ರಭು ಇತರರು ಇದ್ದರು.

ವರದಿ: ಮೋಹನ್ ಕುಮಾರ್ ಆರ್. ನೌ.ಟಿವಿ ಚಿಕ್ಕಬಳ್ಳಾಪುರ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!