ಚಿಕ್ಕಬಳ್ಳಾಪುರ : ನಗರದ ಒಂದನೇ ವಾರ್ಡ್ನ ಬಿಜೆಪಿ ಮುಖಂಡರಾದ ಶಶಿಶೇಖರ್ ರವರು ಸರ್ಕಾರಿ ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ(ಟ್ರ್ಯಾಕ್ ಸೂಟ್)ವಿತರಣೆಕಾರ್ಯಕ್ರಮವನ್ನು ಮುಂದುವರೆಸಿದ್ದು ಶನಿವಾರ ನಗರದ ವಾಪಸಂದ್ರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಟ್ರ್ಯಾಕ್ ಸೂಟ್ ವಿತರಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿಭಾಗವಹಿಸಿದ್ದ ಟ್ರಾಫಿಕ್ ಸಬ್ ಇನ್ಸ್‌ಪೆಕ್ಟರ್ ಎಸ್ ಆರ್ ಮಂಜುಳಾ ರವರು ಮಾತನಾಡಿ ನಾನು ಕೂಡ ಸರ್ಕಾರಿ ಶಾಲೆಯಲ್ಲೆ ಓದಿದ್ದು ಸರ್ಕಾರಿ ಶಾಲೆಗಳೆಂದರೆ ನನಗೆ ಅಭಿಯಾನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದವರು ಇಂದು ಉನ್ನತ ಹುದ್ದೆಗಳನ್ನು ಅಲಂಕರಿಸಲಿದ್ದಾರೆ ಎಂದ ಅವರು ವಿಧ್ಯಾರ್ಥಿಗಳು ಮೊದಲಿಗೆ ಶಿಸ್ತನ್ನು ಪಾಲಿಸಬೇಕು ಚನ್ನಾಗಿ ಓದಿ ಪೋಷಕರಿಗೆ ಒಳ್ಳೆಯ ಹೆಸರು ತಂದು ಕೂಡುವ ಜೊತೆಗೆ ದೇಶಕ್ಕೆ ಕೀರ್ತಿ ತರುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.ವಾರ್ಡಿನ ಮುಖಂಡರು ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ವಿತರಣೆ ಮಾಡಿರುವುದು ಶ್ಲಾಘನೀಯ,ಇಂತಹ ಕಾರ್ಯಗಳಿಂದ ಮಕ್ಕಳಿಗೆ ಓದಿನ ಕಡೆ ಇನ್ನೂ ಆಸಕ್ತಿ ಹೆಚ್ಚಾಗುತ್ತೆ ಇನ್ನಷ್ಟು ದಾನಿಗಳು ಕಲಿಕಾ ಸಾಮಗ್ರಿ ವಿತರಣೆಗೆ ಮುಂದಾಗಬೇಕು ಎಂದರು.ಇದೇ ಸಂದರ್ಭದಲ್ಲಿ ಸಂಚಾರಿ ನಿಯಮಗಳ ಹಾಗೂ ಚಾಲನೆ ವೇಳೆ ವಹಿಸಬೇಕಾದಂತಹ ಜಾಗೃತಿಗಳ ಬಗ್ಗೆ ಕೂಡ ರವರು ಮಾಹಿತಿ ನೀಡಿದರು.
ವಾರ್ಡಿನ ಬಿಜೆಪಿ ಮುಖಂಡರಾದ ದಾನಿ ಶಶಿಶೇಖರ್ ಮಾತನಾಡಿ ದೈಹಿಕ ಸಾಮರ್ಥ್ಯ ಪಡೆಯಲು ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ ವಿಧ್ಯಾರ್ಥಿಗಳು ವಿಧ್ಯಾಭ್ಯಾಸದ ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸಬೇಕು ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ದೇಶಕ್ಕೆ ಕೀರ್ತಿ ತರಬೇಕು ಎಂದ ಅವರು ಮಕ್ಕಳಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಉತ್ತೇಜಿಸುವ ಸಲುವಾಗಿ ನಿರಂತರವಾಗಿ ಕ್ರೀಡಾ ಸಮವಸ್ತ್ರ ವಿತರಿಸಿದ್ದೇವೆ ಇಂದು 250 ಹೆಚ್ಚು ಮಕ್ಕಳಿಗೆ ಸಮವಸ್ತ್ರ ವಿತರಿಸಿದ್ದು ಅವರ ಮುಖದಲ್ಲಿ ಮಂದಹಾಸ ಮೂಡಿಸುವುದು ಮನಸ್ಸಿಗೆ ತೃಪ್ತಿ ತಂದಿದೆ ಎಂದರು.
ಸರ್ಕಾರಿ ನೌಕರರ ಸಂಘದ ಪ್ರಾಥಮಿಕ ಶಾಲೆಗಳ ವಿಭಾಗದ ನಿರ್ದೇಶಕ ಸುನಿಲ್ ಮಾತನಾಡಿ ಕ್ರೀಡೆಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳಿಗೆ ಟ್ರ್ಯಾಕ್ ಸೂಟ್ ಅತ್ಯವಶ್ಯಕ ವಾರ್ಡಿನ ಮುಖಂಡರಾದ ದಾನಿ ಶಶಿಶೇಖರ್ ಇದನ್ನರಿತು ಮಕ್ಕಳಿಗೆ ಸೂಟ್ ವಿತರಿಸಿದ್ದು ಶ್ಲಾಘನೀಯ,ಕಲಿಕೆ ಸಂಭಂದಪಟ್ಟಾಗಿ ಮಕ್ಕಳಿಗೆ ಪೂರಕವಾದ ವಾತಾವರಣ ಬೇಕಿದೆ ಉತ್ತಮವಾದ ಕೊಠಡಿ ವ್ಯವಸ್ಥೆ,ಮಕ್ಕಳಿಗೆ ಟ್ರ್ಯಾಕ್ ಸೂಟ್ ವಿತರಣೆ ಇವೆಲ್ಲ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚು ಮಾಡುವ ಅಂಶಗಳು ಎಂದರು.ಇದೇ ಸಂದರ್ಭದಲ್ಲಿ ಶಾಲೆಯ ವತಿಯಿಂದ ಶಶಿಶೇಖರ್ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ,ಸರ್ಕಾರಿ ನೌಕರರ ಸಂಘದ ಪ್ರಾಥಮಿಕ ಶಾಲೆಯ ವಿಭಾಗದ ನಿರ್ದೇಶಕರಾದ,ಅಮರ,ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷೆ ಶಾಂತಮ್ಮ,ಮುಖ್ಯ ಶಿಕ್ಷಕಿ ಉಮಾವತಿ,ಗಿರಿಜಾದೇವಿ,ನೂತನ,ರತ್ನಮ್ಮ,ಶ್ರೀನಿವಾಸ್,ಸನಾಉಲ್ಲಾ,ಕುಮಾರಿ ರಾಧ,ಅನ್ಸುಯಮ್ಮ,ರಾಧ, ಮುಖಂಡರಾದ ನಾರಾಯಣಸ್ವಾಮಿ,ಮಂಜುನಾಥ್,
ಇತರರು ಹಾಜರಿದ್ದರು.
ವರದಿ :ಮೋಹನ್ ಕುಮಾರ್ ಅರ್. ನೌ.ಟಿವಿ ಚಿಕ್ಕಬಳ್ಳಾಪುರ