ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ವತಿಯಿಂದ ನಗರದ ಜೈ ಭೀಮ್ ಹಾಸ್ಟೆಲ್ ಆವರಣದಲ್ಲಿ ಅದ್ದೂರಿಯಾಗಿ ಒನಕೆ ಓಬವ್ವ ಜಯಂತೋತ್ಸವ ಆಚರಿಸಲಾಯಿತು ಕಾರ್ಯಕಮ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಒನಕೆ ಓಬವ್ವ ಸಮಿತಿ ಸಂಚಾಲಕರಾದ ವೆಂಕಟರಮಣಪ್ಪ ವೀರ ವನಿತೆ ಒನಕ ಓಬಮ್ಮನ ಜಯಂತಿ ಒಟ್ಟಾರೆಯಾಗಿ ಅರ್ಥಪೂರ್ಣ ವಿಜ್ರಂಭಣೆಯಿಂದ ನಡೆಯಿತು
ಆದರೆ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಾದ ಶಾಸಕರು ಉಸ್ತುವಾರಿ ಸಚಿವರು ಕಾರ್ಯಕ್ರಮದಲ್ಲಿ ಗೈರು ಹಾಜರಿ ಬಹಳಷ್ಟು ನೋವುಂಟು ಮಾಡಿದೆ ಚಿಕ್ಕಬಳ್ಳಾಪುರದಲ್ಲಿ ಕಳೆದ ಮೂರು ವರ್ಷಗಳಿಂದ ಒನಕೆ ಓಬವ್ವ ಜಯಂತೋತ್ಸವ ಆಚರಿಸಲಾಗುತ್ತಿದ್ದು ಜನಪ್ರತಿನಿಧಿಗಳು ಈ ಕಾರ್ಯಕ್ರಮದಿಂದ ದೂರ ಉಳಿಯುವುದು ನೋವಿನ ಸಂಗತಿ
ಎಂದರು.ಇನ್ನು ಓಬಮ್ಮನ ಜಯಂತಿಗೆ ಸಹಸ್ರಾರು ಸಂಖ್ಯೆಯಲ್ಲಿ ಚಿಕ್ಕಬಳ್ಳಾಪುರ ಜನರು ಭಾಗವಹಿಸಿ ಒನಕೆ ಓಬವ್ವ ಯಾವುದೇ ಒಂದು ಜಾತಿಗೆ ಸೀಮಿತರಾದವರಲ್ಲ ಎಂದು ತೂರಿಸಿದ್ದಾರೆ ಓಬವ್ವ ದ ಕೊಡುಗೆ ರಾಜ್ಯ ಹಾಗೂ ದೇಶಕ್ಕೆ ಅಪಾರವಾದದ್ದು ಜಯಂತಿ ಅಂಗವಾಗಿ ನಗರದಲ್ಲಿ ಇಂದು ನಡೆದ ಹೂವಿನ ಪಲ್ಲಕ್ಕಿ ಮೆರವಣಿಗೆಯಲ್ಲಿ ಜಾತಿ ಭೇದವಿಲ್ಲದೆ ಒಗ್ಗಟ್ಟು ಪ್ರದರ್ಶಿಸಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮೆರವಣಿಗೆಯಲ್ಲಿ ನಗರದ ನಿವಾಸಿಗಳು ಪಾಲ್ಗೊಂಡಿದ್ದು ಒನಕೆ ಓಬವ್ವ ಮೇಲೆ ಅಭಿಮಾನ ಪ್ರೀತಿ ತೂರಿಸಿದ್ದಾರೆ ಎಂದರು.ಮೆರವಣಿಗೆಯಲ್ಲಿ ಒನಕೆ ಓಬವ್ವ ಸಮಿತಿ ಮಹಿಳಾ ಮುಖಂಡರಾದ ಮಮತಾಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.
ವರದಿ :ಮೋಹನ್ ಕುಮಾರ್ ಆರ್. ನೌ. ಟಿ.ವಿ ಚಿಕ್ಕಬಳ್ಳಾಪುರ