ಮಾನ್ವಿ : ಶರೀಯತ್ ಮತ್ತು ವಕ್ಫ್ ಸಂರಕ್ಷಣೆಯ ಕುರಿತು ಪ್ರತಿಯೊಬ್ಬ ನಾಗರೀಕರಿಗೆ ತಿಳಿಯುವ ಸಲುವಾಗಿ ಅಕ್ಟೋಬರ್ 13ರಂದು ಸಂಜೆ 6 ಗಂಟೆಗೆ ಖಾದ್ರಿ ಫಂಕ್ಷನ್ ಹಾಲ್ ನಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮುಸ್ಲಿಂ ಧರ್ಮದ ಗುರು ಸೈಯದ್ ಹಸನ್ ಜೀಶಾನ್ ಖಾದ್ರಿ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಖಾದ್ರಿ ಫಂಕ್ಷನ್ ಹಾಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶರಿಯತ್ ಸಂರಕ್ಷಣೆಯ ಜೊತೆಗೆ ಧಾರ್ಮಿಕ ಆಸ್ತಿಗಳ ಉಪಯೋಗ ಮತ್ತು ಕಾನೂನಾತ್ಮಕ ವಿಷಯಗಳನ್ನು ಬುದ್ಧಿ ಜೀವಿಗಳು ಆಗಮಿಸಲಿದ್ದಾರೆ ಎಂದರು.
ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾನೂನಿನ ವಿಷಯ ತಿಳಿದುಕೊಂಡು ಅದರಂತೆ ನಡೆಯಬೇಕು.ಹಾಗೆಯೇ ಏನಾದರು ಗೊಂದಲ ಮತ್ತು ಪ್ರಶ್ನೆಗಳಿದ್ದರೆ ಕೇಳುವುದಕ್ಕೆ ಅವಕಾಶ ಇದೆ ಎಂದರು.
ವರದಿ: R now TV ಶಫೀಕ್ ಹುಸೇನ್ ಮಾನವಿ