Welcome to reportnowtv.in   Click to listen highlighted text! Welcome to reportnowtv.in
Saturday, December 14, 2024
HomeDistrictskarwarಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿಸೆಂಬರ್ 27 ರಿಂದ 29 ರವರೆಗೆ ಅಖಿಲ ಹವ್ಯಕ ಮಹಾಸಭೆಯಿಂದ "ತೃತೀಯ...

ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿಸೆಂಬರ್ 27 ರಿಂದ 29 ರವರೆಗೆ ಅಖಿಲ ಹವ್ಯಕ ಮಹಾಸಭೆಯಿಂದ “ತೃತೀಯ ವಿಶ್ವ ಹವ್ಯಕ ಸಮ್ಮೇಳನ”

ಕಾರವಾರ :ಈ ಕಾರ್ಯಕ್ರಮದಲ್ಲಿ , ಸಾಧಕರಿಗೆ ಸಮ್ಮಾನ, ಹವ್ಯಕರ ಸಂಸ್ಕೃತಿ ಬಿಂಬಿಸುವ ಕಾರ್ಯಗಳು ಸಂಯೋಜನೆಗೊಳ್ಳುತ್ತಿದ್ದು ಸಿದ್ಧತೆ ಪ್ರಾರಂಭವಾಗಿದೆ. ಎಲ್ಲಾ ಹವ್ಯಕರೂ ಹಾಗೂ ಇತರ ಸಮಾಜದ ಹವ್ಯಕ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸುವಂತೆ ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ ವಿನಂತಿಸಿದರು. ಉತ್ತರ ಕನ್ನಡ ಜಿಲ್ಲೆಯ ಕುಮಟಾ ಕೊಂಕಣ ಎಜುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾಕೇಂದ್ರದ ಪ್ರಾಥಮಿಕ ಶಾಲೆಯ ಪ್ರಾರ್ಥನಾ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.


ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಖಿಲ ಹವ್ಯಕ ಮಹಾಸಭೆಯಿಂದ “ತೃತೀಯ ವಿಶ್ವ ಹವ್ಯಕ ಸಮ್ಮೇಳನ” ನಡೆಯಲಿದ್ದು, ಹವ್ಯಕ ಮಹಾಸಭೆ ೮೧ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಹಸ್ರಚಂದ್ರದರ್ಶನದ ಸಂಭ್ರಮೋತ್ಸವವಾಗಿಯೂ ಹವ್ಯಕ ಸಮ್ಮೇಳನಕ್ಕೆ ವಿಶೇಷ ಮೆರುಗಿನೊಂದಿಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ ಎಂದು ಅವರು ವಿವರಿಸಿದರು.


೧೯೪೩ ರಲ್ಲಿ ಬ್ರಿಟೀಷರ ಆಳ್ವಿಕೆಯ ಕಾಲದಲ್ಲೇ ನೋಂದಾಯಿತವಾದ ಹವ್ಯಕ ಮಹಾಸಭೆಯು ದೇಶ-ವಿದೇಶಗಳು ಸೇರಿದಂತೆ ಒಟ್ಟಾರೆ 30,000 ಸದಸ್ಯ ಬಲಹೊಂದಿದೆ. ಸಮಾಜಕ್ಕೆ ಕ್ರಿಯೆಗಳನ್ನು ಅರ್ಥವಾಗಿಸುವ ದೃಷ್ಟಿಯಲ್ಲಿ, ಕೊಡಬೇಕಾದ ಪ್ರಾಮುಖ್ಯತೆಯ ಹಿನ್ನಲೆಯಲ್ಲಿ ಹವ್ಯಕ ಎಂದೂ ಹಿಂದೆ ಬಿದ್ದಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಹವ್ಯಕರ ಸಾಂಸ್ಕೃತಿಕ ಬದುಕನ್ನು ಸಮೃದ್ಧವಾಗಿ, ಸುಂದರವಾಗಿ ಕಟ್ಟಿಕೊಡುತ್ತಿರುವ ಯಶಸ್ಸು ಹವ್ಯಕಕ್ಕೆ ಸಲ್ಲುತ್ತದೆ. ಸಂಸ್ಕೃತಿಯನ್ನು ಉಳಿಸುವಲ್ಲಿ ಹಾಗೂ ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ವೈವಿಧ್ಯಮಯ ಸಂಸ್ಕಾರಗಳ ಬಾಗಿಲುಗಳನ್ನು ತೆರೆಯುತ್ತಾ, ಹವ್ಯಕತನವನ್ನು ಉಳಿಸುತ್ತಾ ಸಾಗಿರುವ ಒಂದೊಂದು ಕಾರ್ಯಕ್ರಮಗಳೂ ಹವ್ಯಕದ ಮೈಲುಗಲ್ಲುಗಳಾಗಿವೆ. ಎಂದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!