ಮಾನ್ವಿ : ಪಟ್ಟಣದ ಕಾಕತೀಯ ವಿದ್ಯಾಸಂಸ್ಥೆ ಆವರಣದಲ್ಲಿ ತಾಲೂಕು ಕಮ್ಮವಾರಿ ಸಂಘದ ವತಿಯಿಂದ ನಡೆದ ಕಾರ್ತಿಕ ಮಾಸದ ನಿಮಿತ್ತ ಸತ್ಯನಾರಾಯಣ ಸ್ವಾಮಿಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್.ಬೋಸರಾಜು ಪೂಜೆ ಸಲ್ಲಿಸಿದರು.
ನಂತರ ಮಾತನಾಡಿ, ಕಾರ್ತಿಕ ಮಾಸ ಅತ್ಯಂತ ಪವಿತ್ರವಾದ ಮಾಸವಾಗಿದ್ದು ಈ ಮಾಸದಲ್ಲಿ ಭಗವಂತನನ್ನು ಪೂಜಿಸಿ ಸುದರವಾದ ಗಿಡ ಮರಗಳಿರುವ ಪ್ರದೇಶದಲ್ಲಿ ಸಮುದಾಯದವರೆಲ್ಲರೂ ಸೇರಿಕೊಂಡು ವನಭೋಜನವನ್ನು ಮಾಡುವುದರಿಂದ ಉತ್ತಮ ಆರೋಗ್ಯ ದೊರೆಯುತ್ತದೆ ಎಂದರು.
ಪ್ರತಿ ವರ್ಷ ತಾಲೂಕು ಕಮ್ಮವಾರಿ ಸಂಘದ ವತಿಯಿಂದ ಕಾರ್ತಿಕ ಮಾಸ ವನಭೋಜನ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿರುವುದು ಮೆಚ್ಚುವಂತದ್ದು ಎಂದರು.
ಯಲವರ್ತಿ ರವಿಚಂದ್ರ ಗುರೂಜಿ ಉಪನ್ಯಾಸ ನೀಡಿ, ಸೃಷ್ಟಿಯಲ್ಲಿ ಮಾನವ ಜನ್ಮ ಅತ್ಯಂತ ಪವಿತ್ರವಾಗಿದ್ದು ಇಂತಹ ಮಾನವ ಜನ್ಮ ಸಾರ್ಥಕವಾಗಬೇಕಾದಲ್ಲಿ ಪ್ರತಿಯೊಬ್ಬರು ಭಗವಂತನ ನಾಮಸ್ಮರಣೆ ಮಾಡಬೇಕು ಎಂದರು.
ವರದಿ: ಶಫೀಕ್ ಹುಸೇನ್ ಮಾನವಿ