ಕಾರವಾರ:ಭಗವಾದ್ಗೀತೆಯಿಂದ ಜೀವನದಲ್ಲಿ ಸ್ಫೂರ್ತಿ, ಸಾಫಲ್ಯ, ಚೈತನ್ಯ ಉಂಟಾಗಲಿದೆ ಎಂದು ಹೊನ್ನಾವರದ ಶ್ರೀ ರಾಘವೇಂದ್ರ ಸೌoಕ್ರತ ಅಧ್ಯಯನ ಕಾಲೇಜಿನ ಪ್ರಾಚಾರ್ಯ ಡಾ. ನಾಗಾಪತಿ ಭಟ್ಟ ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ಡಾ, ಎ. ವಿ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಭಾಗವದ್ಗೀತ ಅಭಿಯಾನದ ಸಪ್ತಾಹ ಸಮಾರಂಭ ಉದ್ಘಾಟನೇ ನಡೆಸಿ ಮಾತನಾಡಿದ ಅವರು ಭಗವಾದ್ಗೀತೆ ಓದುವದರಿಂದ ಭಯ, ದ್ವಂದ್ವ, ಗೊಂದಲ ನಿವಾರಣೆ ಯಾಗುತ್ತದೆ. ಭಗವಾದ್ಗೀತೆ ಎಂದರೆ ಜ್ಞಾನ, ವಿಜ್ಞಾನ, ಚೈತನ್ಯ, ಆನಂದ, ಆತ್ಮ ಸಾಕ್ಷಾತ್ಕಾರ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಪ್ರಾಚಾರ್ಯ ಡಾ, ರೇವತಿ ನಾಯ್ಕ್ ಮಾತನಾಡಿ ಉತ್ತಮ ಸಮಾಜಕ್ಕೆ ಗೀತೆ ಉಪಯುಕ್ತ ವಾದುದು ಎಂದು ತಿಳಿಸಿದರು.
ಪಿ. ಯು. ಪ್ರಾಚಾರ್ಯ ಎನ್. ಜಿ. ಹೆಗಡೆ. ನಿವ್ರತ್ತ ಪ್ರಾಚಾರ್ಯ ಪ್ರೊ. ಜೈ ರಾಮ ಭಟ್ಟ. ಡಾ. ಅರವಿಂದ ನಾಯಕ. ವಿದ್ವಾನ ಗಣಪತಿ ಭಟ್ಟ ಉಪಸ್ಥಿತರಿದ್ದರು.