Welcome to reportnowtv.in   Click to listen highlighted text! Welcome to reportnowtv.in
Monday, December 2, 2024
HomeDistrictsBelgaumಬೆಳಗಾವಿ : ಅಥಣಿ ತಾಲೂಕಿನ ಅರಟಾಳ ಕ್ರಾಸ್ ಬಳಿ ಅಮ್ಮಾಜೇಶ್ವರಿ - ಕೊಟ್ಟಲಗಿ ಏತನೀರಾವರಿ ಯೋಜನೆಯ...

ಬೆಳಗಾವಿ : ಅಥಣಿ ತಾಲೂಕಿನ ಅರಟಾಳ ಕ್ರಾಸ್ ಬಳಿ ಅಮ್ಮಾಜೇಶ್ವರಿ – ಕೊಟ್ಟಲಗಿ ಏತನೀರಾವರಿ ಯೋಜನೆಯ S M ಪೈಪುಗಳ ಜೋಡಣೆಯ ಪೂಜಾ ಉದ್ಘಾಟನೆ ಕಾರ್ಯಕ್ರಮ.

ಬೆಳಗಾವಿ : ಮುಂದಿನ ವರ್ಷದ ಒಳಗಾಗಿ ನೀರು ಒದಗಿಸುವ ಕಾರ್ಯ ಮಾಡಲಾಗುವುದು, 17100HP ಸಾಮರ್ಥ್ಯದ ಮೂರು ಮೋಟರು ಕೂಡಿಸಿ 14 ತಿಂಗಳಿನಲ್ಲಿ 07 ಗ್ರಾಮಗಳಿಗೆ ನೀರು ಪೂರೈಸಲಾಗುವುದು, ಕೃಷ್ಣಾ ನದಿಯ ಪ್ರವಾಹ ಮಹಾಪೂರ ಬಂದರೂ ಕೂಡ ತೊಂದರೆ ಯಾಗದಂತಹ ಉನ್ನತ ತಂತ್ರಜ್ಞಾನದ ವ್ಯವಸ್ಥೆಯನ್ನು ಅಳವಡಿಸಿಕೊಂಡು ರಾಜ್ಯದಲ್ಲೆ ಮಾದರಿ ಯೋಜನೆಯನ್ನಾಗಿಸಲಾಗಿದೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಹೇಳಿದರು.

ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಕ್ರಾಸ್ ಹತ್ತಿರ ಜರುಗಿದ ಅಮ್ಮಾಜೇಶ್ವರಿ – ಕೊಟ್ಟಲಗಿ ಏತನೀರಾವರಿ ಯೋಜನೆಯ ಎಮ್ ಎಸ್ ಪೈಪುಗಳ ಜೋಡನೆಯ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಈ ಭಾಗದ ರೈತರ ಬಹುದಿನದ ಕನಸು ಜಾತಕ ಪಕ್ಷಿಯ ಹಾಗೆ ನೀರಿಗಾಗಿ ಕಾಯುತ್ತಾ ಇದ್ದರು ಈ‌ ಅಮ್ಮಾಜೇಶ್ವರಿ ಏತ ನೀರಾವರಿಯ ಮೂಲಕ ಕೆರೆ ತುಂಬುವ ಯೋಜನೆ ಜೊತೆಗೆ ಗ್ರಾಮದ ಎಲ್ಲರಿಗೂ ನೀರು ಕೊಡಲಾಗುವುದು ಎಂದರು.

ತುಬಚಿ ಬಬಲೇಶ್ವರಿ ಏತ ನೀರಾವರಿ ಮಂಜೂರು ಮಾಡುವ ವೇಳೆ ನಮ್ಮ ಭಾಗದ 07 ಹಳ್ಳಿಗಳಿಗೆ ಆಡಳಿತಾತ್ಮಕ ಮಂಜೂರು ಮಾಡಲಾಗಿತ್ತು, ಸರಕಾರ ಬದಲಾದ ವೇಳೆ ಈ ಹಳ್ಳಿಗಳು ಯೋಜನೆಯಿಂದ ವಂಚನೆಯಾಗಿದ್ದವು ಇದೀಗ ಈ 07 ಹಳ್ಳಿಗಳಿಗೆ ಸುವರ್ಣಕಾಲ ಬಂದಿದೆ ತಾವೆಲ್ಲ ಸದುಪಯೋಗ ಪಡೆಸಿಕೊಳ್ಳಿ ಎಂದರು.

ಅನಂತರ ಎಸ್ ಕೆ ಬುಟಾಳಿ, ಶೇಖರ ನೇಮಗೌಡ, ಶಿವಾನಂದ ಗುಡ್ಡಾಪೂರ ಅವರು ಮಾತನಾಡಿ ಬರದ ನಾಡಿಗೆ ಅತೀ ಶೀಘ್ರದಲ್ಲಿ ಏತ ನೀರಾವರಿ ಮೂಲಕ ನೀರನ್ನು ಒದಗಿಸಿ ರೈತರ ಮುಖದಲ್ಲಿ ಸಂತಸವನ್ನು ಉಂಟು ಮಾಡುತ್ತಿರುವ ಶಾಸಕರ ಕಾರ್ಯ ಶ್ಲಾಘನೀಯ ಎಂದರು.

ಈ ವೇಳೆ ಸಿದರಾಯ ಯಲಡಗಿ, ಶಾಂತಿನಾಥ ನಂದೇಶ್ವರ, ಚಂದ್ರಕಾಂತ ಇಮ್ಮಡಿ, ಗುರಪ್ಪ ದಾಶ್ಯಾಳ, ಶ್ಯಾಮ ಪೂಜಾರಿ, ರಾಮನಗೌಡ ಪಾಟೀಲ, ಶಿವಾನಂದ ಗುಡ್ಡಾಪೂರ, ಅಮೋಘ ಕೊಬ್ರಿ, ಪ್ರವೀಣ ಹುಣಸಿಕಟ್ಟಿ ಸೇರಿದಂತೆ ಅನೇಕರಿದ್ದರು‌

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!