ಕೋಲಾರ: ಸರ್ಕಾರಿ ಆಸ್ಪತ್ರೆ ಎಂದರೆ ಸಾರ್ವಜನಿಕರು ಏಕೆ ಮೂಗು ಮುರಿಯುತ್ತಾರೆ ಎನ್ನೋದಕ್ಕೆ ಇಲ್ಲಿದೆ ತಾಜಾ ಉದಾಹರಣೆ ಕೋಲಾರ ನಗರದ ಎಸ್.ಎನ್.ಆರ್.ಆಸ್ಪತ್ರೆಯ ಎಲ್ಲಾ ವಾರ್ಡ್ ಗಳಲ್ಲಿ ಬೀದಿ ನಾಯಿಗಳದೇ ದರ್ಬಾರ್ ಆಗಿದ್ದು ಆಸ್ಪತ್ರೆಯ ಸಿಬ್ಬಂದಿ ಕಣ್ಣಿದ್ದೂ ಕುರುಡರಂತ್ತಿದ್ದಾರೆ
ಸರ್ಕಾರಿ ಆಸ್ಪತ್ರೆ ಎಂದರೆ ಸಾರ್ವಜನಿಕರು ಏಕೆ ಮೂಗು ಮುರಿಯುತ್ತಾರೆ ಎನ್ನೋದಕ್ಕೆ ಇಲ್ಲಿದೆ ತಾಜಾ ಉದಾಹರಣೆ ಕೋಲಾರ ನಗರದ ಎಸ್.ಎನ್.ಆರ್.ಆಸ್ಪತ್ರೆಯ ಎಲ್ಲಾ ವಾರ್ಡ್ ಗಳಲ್ಲಿ ಬೀದಿ ನಾಯಿಗಳದೇ ದರ್ಬಾರ್ ಆಗಿದೆ.ಅಲ್ಲಿನ ಆಸ್ಪತ್ರೆಯ ಸಿಬ್ಬಂದಿ ಕಣ್ಣಿದ್ದೂ ಕುರುಡರಂತೆ ಆಸ್ಪತ್ರೆಯಲ್ಲಿ ಓಡಾಡುತ್ತಾ ಇರುತ್ತಾರೆ ಹೊರತು ನಾಯಿಗಳನ್ನು ಓಡಿಸುವ ಅಥವ ಅವು ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊರುವುದಿಲ್ಲ.
ಇನ್ನು ಡಿ ನೌಕರರ ಮೇಲೆ ಹಿಡಿತ ಇಲ್ಲದ ಡಿ.ಹೆಚ್.ಓ ಪ್ರತಿದಿನ ಆಸ್ಪತ್ರೆಯ ರೌಂಡ್ಸ್ ಮಾಡುತ್ತಾರೋ ಇಲ್ಲವೋ ದೇವರಿಗೇ ಗೊತ್ತು,ಬೀದಿನಾಯಿಗಳು ಒಂದು ವೇಳೆ ಮಕ್ಕಳನ್ನು,ಸಾರ್ವಜನಿಕರನ್ನು, ವೃದ್ಧರನ್ನು ಕಚ್ವಿದರೆ ಜವಾಬ್ದಾರಿ ಯಾರು !. ಎಂಬ ಆತಂಕ ಆತಂಕ ಕಾಡ್ತಿದೆ. ಯಾವುದೇ ಅಹಿತಕರ ಘಟನೆಗಳು ನಡೆಯುವ ಮುನ್ನ, ಆಸ್ಪತ್ರೆಯ ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳಬೇಕು . ಬೆಳ್ಳಿಗ್ಗೆ ರಾತ್ರಿ ಎನ್ನದೇ ತಮ್ಮದೇ ವಾಸಸ್ಥಳ ಎಂಬಂತೆ ರಾಜಾರೋಷವಾಗಿ ಓಡಾಡುವ ಇಂತಹ ಬೀದಿ ನಾಯಿಗಳಿಗೆ ಕಡಿವಾಣ ಹಾಕುವ ಕೆಲಸ ಆಸ್ಪತ್ರೆಯ ಸಿಬ್ಬಂದಿ ಮಾಡುತ್ತಾರೆಯೇ,ಡಿ.ಎಚ್.ಓ.ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಿದೆ.