ರಾಜ್ಯ ಸರ್ಕಾರದ ವಕ್ಫ್ ಸಚಿವ ಜಮೀರ್ ಅಹಮದ್ ರವರು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿರವರ ಬಗ್ಗೆ ತುಚ್ಯವಾಗಿ ಮಾತನಾಡಿ ಮತ್ತು ದೇವೇಗೌಡರ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಜಾತ್ಯಾತೀತ ಜನತಾದಳ ಪಕ್ಷದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮತ್ತು ಜಿಲ್ಲಾಧ್ಯಕ್ಷ ಮುನೇಗೌಡರ ನೇತೃತ್ವದಲ್ಲಿ ಚಪ್ಪರಕಲ್ಲು ವೃತ್ತದಿಂದ ಜಮೀರ್ ಅಹಮದ್ ರವರ ಪ್ರತಿಕೃತಿ ಧಹನಗೊಳೊಸಿ ಧಿಕ್ಕಾರದ ಘೋಷಣೆ ಕೂಗುತ್ತಾ ಪ್ರತಿಭಟಿಸಿದರು.
ದೇವನಹಳ್ಳಿ ಕ್ಷೇತ್ರದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಗಳಾಗಿ ಜನಮನ್ನಣೆ ಗಳಿಸಿದ ಕುಮಾರಸ್ವಾಮಿ ರವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಜಮೀರದ ಅಹಮದ್ ರವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು, ಹಾಗೂ ಕುಮಾರಸ್ವಾಮಿ ರವರನ್ನು ವರ್ಣನೆ ಮಾಡಿ ಮಾತನಾಡಿರುವುದನ್ನು ಖಂಡಿಸುತ್ತೇವೆ. ಜನರು ಇಂತಹವರ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಚೀಮಾರಿ ಹಾಕುವ ಮೊದಲೇ ರಾಜೀನಾಮೆ ನೀಡಿದರೆ ಅಲ್ಪಸ್ವಲ್ಪ ಪಕ್ಚಕ್ಕೆ ಮರ್ಯಾದೆ ಉಳಿಯುತ್ತದೆ ಹಾಗು ದೇವೇಗೌಡರ ಕುಟುಂಬಕ್ಕೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ತಿಳಿಸಿದರು.
ಜಾತ್ಯಾತೀತ ಜನತಾದಳ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಮುನೇಗೌಡ ಮಾತನಾಡಿ, ಕೇಂದ್ರ ಸಚಿವರಾದ ಕುಮಾರಸ್ವಾಮಿ ರವರ ಬಣ್ಣವನ್ನು ವರ್ಣನೆ ಮಾಡಿರುವುದು ಹಾಗೂ ಅವರ ಕುಟುಂಬವನ್ನೆ ಖರೀದಿಸುತ್ತೇನೆ ಎನ್ನುವ ಮಾತು ಅವರ ಉದ್ದಟತನವನ್ನು ಪ್ರದರ್ಶಿಸುತ್ತದೆ. ಕಾಂಗ್ರೆಸ್ ಪಕ್ಷದ ಇಬ್ಬರು ಮಹಾನ್ ನಾಯಕರುಗಳು ಜಮೀರ್ ಅಹಮದ್ ರವರ ವಿರುದ್ದ ಕ್ರಮ ಜರುಗಿಸಬೇಕು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಸಮಯದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮುನೇಗೌಡ, ಪ್ರಧಾನ ಕಾರ್ಯದರ್ಶಿ ರವೀಂದ್ರ, ಯುವ ಜನತಾದಳ ಪದಾಧಿಕಾರಿಗಳು, ಮುಖಂಡರು ಇದ್ದರು.