ದೇವನಹಳ್ಳಿ: ತಾಲ್ಲೂಕು ಅಣ್ಣೇಶ್ವರ ಗ್ರಾಮ ಪಂಚಾಯಿತಿ ವತಿಯಿಂದ ಅಣೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯ ಭೂವನಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಓವರ್ ಹೆಡ್ ಟ್ಯಾಂಕ್, ಸರ್ಕಾರಿ ಶಾಲಾ ಕಟ್ಟಡ, ಬೈಚಾಪುರ ಮಹಿಳಾ ವರ್ಕ್ ಶೆಡ್ ಉದ್ಘಾಟನಾ ಕಾರ್ಯಕ್ರಮ, ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟ್ಯಾಪ್ ವಿತರಣೆ, ಅಂಗವಿಕಲರಿಗೆ ಸಾಧನ ಸಲಕರಣೆ ಹಾಗೂ ನಗದು ವಿತರಣೆ ಕಾರ್ಯಕ್ರಮ ಹಾಗೂ 2024-25ನೇ ಸಾಲಿನ ಮೊದಲಹಂತದ ಗ್ರಾಮಸಭೆಯನ್ನು ಸಚಿವ ಕೆ.ಹೆಚ್.ಮುನಿಯಪ್ಪನವರ ಉದ್ಘಾಟಿಸಿದರು.
ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ, ರಾಜ್ಯದಲ್ಲೆ ಶ್ರೀಮಂತ ಮತ್ತು ಮಾದರಿ ಪಂಚಾಯತಿ ಅಣ್ಣೇಶ್ವರ ಗ್ರಾಮ ಪಂಚಾಯತಿ ಗಾಂಧೀಜಿಯವರ ಕನಸಿನಂತೆ ಅಣ್ಣೇಶ್ವರ ಗ್ರಾಮ ಪಂಚಾಯತಿ ಹೆಜ್ಜೆ ಇಡುತ್ತಿದೆ, ಇದರಲ್ಲಿನಸದಸ್ಯರು ಒಗ್ಗಟ್ಟಾಗಿ ಗ್ರಾಮಗಳ ಅಭಿವೃದ್ಧಿಗೆ ಕೈಜೋಡಿಸಿರುವುದು ಶ್ಲಾಘನೀಯ.16 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆದಿದೆ ಗುಣಮಟ್ಟದ ಕೆಲಸ ಮಾಡಿದ ಕಾರಣ ಉತ್ತಮ ಹೆಸರುಪಡೆಯಲು ಸಾಧ್ಯವಾಗಿದೆ ಎಂದು ಪ್ರಶಂಸಿದರು.
ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ.ಸಿ.ಮಂಜುನಾಥ್ ಮಾತನಾಡಿ, ಗ್ರಾಮ ಪಂಚಾಯತಿಗೆ ತೆರಿಗೆ ರೂಪದಲ್ಲಿ ಬಂದ ಹಣದಿಂದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ, ಕೆಲವೊಂದು ಪಂಚಾಯತಿ ಗಳಲ್ಲಿ ಸಂಬಳ ನೀಡಲು ಹಣ ಕ್ರೂಡೀಕರಣಕ್ಕೆ ತೊಂದರೆಯಿದೆ ಆದರೆ ಅಣ್ಣೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಮಕ್ಕಳಿಗೆ ಗುಣಮಟ್ಟದ ಲ್ಯಾಪ್ ಟಾಪ್ ವಿತರಣೆ, ವಿಕಲಚೇತನರಿಗೆ ಸಲಕರಣೆ ಇತ್ಯಾದಿಗಳನ್ನು ನೀಡುತ್ತಿರುವುದನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕು. ಹಿಂದಿನ ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಕೃಷ್ಣಭೇರೇಗೌಡರ ಮಾರ್ಗದರ್ಶನದಲ್ಲಿ ಕೆ.ಸಿ.ವ್ಯಾಲಿ ಮತ್ತು ಎನ್.ಸಿ.ವ್ಯಾಲಿ ನೀರು ಬಾರದಿದ್ದರೆ ಈ ಭಾಗದಲ್ಲಿ ನೀರಿಗೆ ತುಂಬಾ ತೊಂದರೆಯಾಗುತ್ತಿತ್ತು ಎಂದು ಈ ಸಮಯದಲ್ಲಿ ನೆನೆದರು.
ಕಾರ್ಯಕ್ರಮದಲ್ಲಿ ಅಣ್ಣೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಉಮಾ ಮುನಿರಾಜು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ರಾಜಣ್ಣ, ತಾಲ್ಲೂಕು ಪಂಚಾಯತಿ ಇ.ಓ ಶ್ರೀನಾಥ್ ಗೌಡ, ಮುಖಂಡರಾದ ಚಂದ್ರಶೇಖರ್, ಗ್ರಾಮ ಪಂಚಾಯತಿ ಸದಸ್ಯರು, ಗುತ್ತಿಗೆದಾರ ರಾಜಣ್ಣ ಹಾಗು ಮುಖಂಡರು ಇದ್ದರು .