Welcome to reportnowtv.in   Click to listen highlighted text! Welcome to reportnowtv.in
Saturday, December 14, 2024
Homechikkaballapuraನಿಲ್ಲದ ಪ್ಲೆಕ್ಸ ಬೋರ್ಡಗಳ ಗಲಾಟೆ ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಬ್ಯಾನರ್ ಕಿತ್ತೆಸೆದ ಪೌರ ಕಾರ್ಮಿಕರು.

ನಿಲ್ಲದ ಪ್ಲೆಕ್ಸ ಬೋರ್ಡಗಳ ಗಲಾಟೆ ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಬ್ಯಾನರ್ ಕಿತ್ತೆಸೆದ ಪೌರ ಕಾರ್ಮಿಕರು.

ಚಿಕ್ಕಬಳ್ಳಾಪುರ : ನಿನ್ನೆ ಕನಕದಾಸ ಜಯಂತಿಗೆ ಸಂಸದರ ಪೋಟೋ ಹಾಕಿಸಿ ಶುಭಾಷಯ ಕೊರಿದ್ದ ನಗರಸಭಾ ಆದ್ಯಕ್ಷರ ಬ್ಯಾನರ್ಗಳಿಗೆ ನಗರಸಭೆ ಅನುಮತಿ ಪಡೆದಿಲ್ಲ ಎಂದು ಆಯುಕ್ತರೆ ಪೊಲೀಸ್ ರಕ್ಷಣೆಯೊಂದಿಗೆ ತೆರವುಗೊಳಿಸಿದ್ದರು ಅದರ ಬೆನ್ನಲ್ಲೆ ಇಂದು ಪ್ರದೀಪ್ ಈಶ್ವರ್ ಅಮ್ಮಾ ಆಂಬುಲೆಲ್ಸ್ ಜಾಹಿರಾತು ಹಾಕಿದ್ದ ಬೋರ್ಡ ಗಳಿಗೂ ಅನುಮತಿ ತೆಗೆದುಕೊಂಡಿಲ್ಲ ಅಂತ ಗಜೇಂದ್ರ ಮುಂದೆ ನಿಂತು ಬೋರ್ಡ ಗಳನ್ನ ತರವುಗೊಳಿಸಿದ್ದ ವೇಳೆ ಶಾಸಕರ ಸಹೋದರ ಮತ್ತು ಅಧ್ಯಕ್ಷರ ನಡುವೆ ಮಾತಿನ ಚಕಮುಕಿ ತಳ್ಳಾಟ ನೂಕಾಟ ಆಯಿತು

ಹೌದು ಚಿಕ್ಕಬಳ್ಳಾಪುರ ನಗರದಲ್ಲಿ ಇದೆ‌ ಮೊದಲಬಾರಿಗೆ ಪ್ಲೆಕ್ಸ ಗಳ ಗಲಾಟೆ ನಡೆದಿದೆ ಗಣ್ಯರ ಜಯಂತಿಗೆ ಎಲ್ಲ ರಾಜಕೀಯ ಪಕ್ಷದ ಮುಖಂಡರುಗಳು ಶುಭಾಷಯಕೋರಿ ಬ್ಯಾನರ್ ಅಳವಡಿಸುತ್ತಾರೆ ನಗರಸಭಾ ಅಧ್ಯಕ್ಷರು ತಮ್ಮ ನಾಯಕ ಸಂಸದ ಸುಧಾಕರ್ ಪೋಟೋ ಹಾಕಿಕೊಂಡು ಕನಕಜಯಂತಿಗೆ ಶುಭಾಷಯಕೊರಿದ್ಸರು ಆ ಪ್ಲೆಕ್ಸ್ ಗಳಿಗೆ ಅನುಮತಿ ಪಡೆದಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಕಮೀಷನರ್ ಗೆ ಹೇಳಿ ತೆಗೆಸಿದ್ದರು ಎಂದು ಪುಕಾರ್ ಆಗಿತ್ತು ಅದೆ ಕೋಪದಲ್ಲಿ ಗಜೇಂದ್ರ ತಮ್ಮ ಅಧಿಕಾರಿಗಳ ಬಳಿ ಪಟ್ಟಿ ತರೆಸಿ ಪ್ರದೀಪ್ ಈಶ್ವರ್ ಯಾವ್ಯಾವ ಬೋರ್ಡ ಗಳಿಗೆ ಅನುಮತಿ ಪಡೆದಿಲ್ಲ ಪಡೆದು ಅವದಿ ಮುಗಿದಿರುವ ಎಷ್ಟು ಬೋರ್ಡ್ಗಳಿವೆ ಎಲ್ಲವನ್ನೂ ತೆರವು ಗೊಳಿಸಿವಂತೆ ಸೂಚಿಸಿದ್ದರು ತಾನೆ ಮುಂದೆ ನಿಂತು ತೆರವು ಗೋಳಿಸುವ ವೇಖೆ ಪ್ರದೀಫ್ ಈಶ್ವರ್ ಸಹೋದರ್ ಚೇತನ ಪಗರತ್ಯಕ್ಷವಾಗಿ ಗಜೇಂದ್ರ ಜತೆ ಜಗಳಿಕ್ಕಿಳಿದರು ತೆಗೆದಿದರುವ ಬ್ಯಾನರ್ ಮತ್ತೆ ಹಾಕುವಂತೆ ತಾಕೀತು ಮಾಡಿದರು ಅದಕ್ಕೆ ಗಜೇಂದ್ರ ಅನುಮತಿ ಪಡೆದಿಲ್ಲ ಅಂತ ಅಧಿಕಾರಿಗಳೆ ಸೂಚಿಸಿದ್ದಾರೆ ಅದಕ್ಕೆ ತೆರವುಗೊಳಿಸ್ಸಿದ್ದಾರೆ ಎಂದು ಏರುದ್ವನಿಯಲ್ಲಿ ಕೂಗಾಡಿದರು

ಪ್ರದೀಪ್ ಈಶ್ಬರ್ ಅಧಿಕಾರಕ್ಕೆ ಬಂದ ಕೂಡಲೆ ನಗರದಲ್ಲಿ ಅನಾವಶ್ಯಕವಾಗಿರುವ ಬೋರ್ಡಗಳನ್ನ ತೆಗೆಸುತ್ತೇನೆ ಎಂದು ಶಪತ ಮಾಡಿದ್ದರು ಆ ವಾಕ್ಯ ಈಗ ಅವರಿಹೆ ತಿರುಗುಬಾಣವಾದಂತೆ ಕಾಣುತ್ತಿದೆ ನೋಡಬೇಕು ಈ ಪ್ಲೆಕ್ಸ್ ದಂಗಲ್ ಎಲ್ಲಿಗೆ ಹೋಗಿ ಮುಟ್ಟುತ್ತೋ ಅಲ್ವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!