ಮಾನ್ವಿ : ಸರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡ ಜನರ ಅಭಿವೃದ್ಧಿಗಾಗಿ ಕೋಟಿಗಟ್ಟಲೆ ಅನುದಾನ ಕೊಟ್ಟರೆ, ಸಿರವಾರ ತಾಲೂಕಿನ ಸೈದಾಪುರ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಜನರಿಲ್ಲದ ರಸ್ತೆಗೆ ಲಕ್ಷಾಂತರ ರುಪಾಯಿ ಎಸ್ಟಿ ಅನುದಾನ ದುರ್ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.
ವಾಲ್ಮೀಕಿ ನವಸಮಾಜ ಸಂಘದ ಉತ್ತರ ಕರ್ನಾಟಕ ವಿಭಾಗೀಯ ಅಧ್ಯಕ್ಷ ಲಿಂಗಯ್ಯ ನಾಯಕ ಅವರು ಮಾನ್ವಿ ಪರಿಶಿಷ್ಟ ಪಂಗಡ ಇಲಾಖೆಯ ತಾಲೂಕ ಅಧಿಕಾರಿ ಮಹಾಲಿಂಗಪ್ಪ ಅವರಿಗೆ ದೂರು ಕೊಟ್ಟರು ಕ್ಯಾರೆ ಅನ್ನುತ್ತಿಲ್ಲವಾಗಿದೆ.ಪರಿಶಿಷ್ಟ ಬಜನಾಂಗವನ್ನು ಅಭಿವೃದ್ಧಿ ಮಾಡಲು ಮಹಾಲಿಂಗಪ್ಪ ಇದ್ದಾರ ಅಥವಾ ದ್ರೋಹ ಮಾಡಲು ಇದ್ದಾರ ಎಂದು ತಿಳಿಯದಾಗಿದೆ ಎಂದು ಲಿಂಗಯ್ಯನಾಯಕ ಆರೋಪಿಸಿದ್ದಾರೆ.
ಸೈದಾಪುರ ಗ್ರಾಮವು ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತಿದ್ದು,ಶಾಸಕ ಹಂಪಯ್ಯ ನಾಯಕ ಅವರು ಈ ಬಗ್ಗೆ ಸಮಗ್ರವಾಗಿ ತನಿಖೆ ಮಾಡಿ ಪರಿಶಿಷ್ಟ ಪಂಗಡದ ಅನುದಾನವನ್ನು ದುರ್ಬಳಕೆ ಮಾಡಿದ ಲ್ಯಾಂಡ್ ಆರ್ಮಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಲಿಂಗಯ್ಯನಾಯಕ ಒತ್ತಾಯಿಸಿದ್ದಾರೆ.
ವರದಿ:R now tv ಶಫೀಕ್ ಹುಸೇನ್ ಮಾನವಿ