Welcome to reportnowtv.in   Click to listen highlighted text! Welcome to reportnowtv.in
Thursday, December 26, 2024
HomeDistrictskarwarಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ನಾವು ಒಂದಿಷ್ಟು ಕನಸು ಕಂಡಿದ್ದೇನೆ - ಉತ್ತರ ಕನ್ನಡ ಜಿಲ್ಲೆಯ...

ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ನಾವು ಒಂದಿಷ್ಟು ಕನಸು ಕಂಡಿದ್ದೇನೆ – ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ನಾವು ಒಂದಿಷ್ಟು ಕನಸು ಕಂಡಿದ್ದೇವೆ..

ಕಾರವಾರ ಉತ್ತರ ಕನ್ನಡ ಜಿಲ್ಲೆಯ ಕುಮಟಾ ರೋಟರಿ ಕ್ಲಬ್ ಅಯೋಜಿಸಿದ್ದ ಉಚಿತ ಅರೋಗ್ಯ ಪರೀಕ್ಷಾ ಶಿಬಿರವನ್ನು ಖ್ಯಾತ ಶಸ್ತ್ರವೈದ್ಯರಾದ ಡಾ.ಸಚ್ಚಿದಾನಂದ ನಾಯಕರು ಉದ್ಘಾಟನೇ ಮಾಡಿದ್ದಾರೆ.

ಹುಬ್ಬಳ್ಳಿ ರೋಟರಿ ಕ್ಲಬ್ಬಿನವರ ಅತ್ಯಂತ ಸುಸಜ್ಜಿತ ಆರೋಗ್ಯ ವಾಹಿನಿಯಲ್ಲಿ ಪರಿಣಿತ ತಜ್ಞರು ಉಚಿತ ಆರೋಗ್ಯ ಪರೀಕ್ಷೆಯನ್ನು ನಡೆಸಿ ಸಲಹೆಗಳನ್ನು ನೀಡಿದರು. ನೂರಕ್ಕಿಂತ ಅಧಿಕ ಸಾರ್ವಜನಿಕರು ಈ ಶಿಬಿರದ ಉಪಯೋಗ ಪಡೆದುಕೊಂಡ ಬಗ್ಗೆ ಅಧ್ಯಕ್ಷರಾದ ಅತುಲ ವಿ ಕಾಮತ್ ಸಂತಸ ವ್ಯಕ್ತಪಡಿಸಿದರು. ಕೆನರಾ ಕಾಲೇಜ ಸೊಸೈಟಿ ಹಾಗೂ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಸಹಕಾರದೊಂದಿಗೆ ನಡೆದ ಈ ಜನೋಪಕಾರಿ ಶಿಬಿರದಲ್ಲಿ ಫ್ಯಾಮಿಲಿ ಪ್ಲಾನಿಂಗ ಅಸೋಸಿಯೇಷನ್ನಿನ ಸಿಬ್ಬಂದಿಗಳು ಕೂಡ ಸಕ್ರಿಯರಾಗಿ ಪಾಲ್ಗೊಂಡರು.


ತಾಲೂಕಾ ವೈದ್ಯಾಧಿಕಾರಿ ಡಾ.ಆಜ್ಞಾ ನಾಯಕ ಮಾರ್ಗದರ್ಶನ ನೀಡಿದರು.


ಪ್ರಾಯೋಜಕರಾಗಿ ಎಚ್ ಡಿ ಎಫ್ ಸಿ ಎರ್ಗೋ ಹಾಗೂ ಗೌರವಾನ್ವಿತ ಪೋಷಕರಾಗಿ ಫ್ಲೆವಿಯನ್ ಫರ್ನಾಂಡಿಸ್, ಉದಯ ಮಡಿವಾಳ ಹಾಗೂ ನವೀನ ನಾಯ್ಕ ಸಹಕರಿಸಿದರು.


ರೋಟರಿ ಅಧ್ಯಕ್ಷರಾದ ಅತುಲ ವಿ ಕಾಮತ ಸ್ವಾಗತಿಸಿದರು. ಕಾರ್ಯದರ್ಶಿ ವಿನಾಯಕ ಹೆಗಡೆ, ಕಾರ್ಯಕ್ರಮ ಸಂಯೋಜಕ ಸಂದೀಪ ನಾಯಕ,ಕೆನರಾ ಕಾಲೇಜ ಕಾರ್ಯಾಧ್ಯಕ್ಷ ಹನುಮಂತ ಶ್ಯಾನಭಾಗ, ಡಾ.ಪ್ರೀತಿ ಭಂಡಾರ್ಕರ, ನಿವೃತ್ತ ಪೋಲಿಸ ವರಿಷ್ಟಾಧಿಕಾರಿ ಪ್ರಮೋದ ರಾವ್, ರೋಟರಿ ಖಜಾಂಚಿ ಪವನ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!