Welcome to reportnowtv.in   Click to listen highlighted text! Welcome to reportnowtv.in
Saturday, December 14, 2024
HomeDistrictsTumakuruಕೊರಟಗೆರೆ ತಾಲ್ಲೂಕಿನ ತುಂಬಾಡಿ ಗ್ರಾಮದಲ್ಲಿ ಕೆರೆ ನೋಡಲು ಹೋದ ತಂದೆ ಮಗಳು ಕಾಲುಜಾರಿ ಕೆರೆಯಲ್ಲಿ ಮುಳುಗಿ...

ಕೊರಟಗೆರೆ ತಾಲ್ಲೂಕಿನ ತುಂಬಾಡಿ ಗ್ರಾಮದಲ್ಲಿ ಕೆರೆ ನೋಡಲು ಹೋದ ತಂದೆ ಮಗಳು ಕಾಲುಜಾರಿ ಕೆರೆಯಲ್ಲಿ ಮುಳುಗಿ ಸಾವು.

ತುಮಕೂರು : ತುಂಬಾಡಿ ಕೆರೆಗೆ ಕಾಲುಜಾರಿ ಮುಳುಗುತ್ತಿದ್ದ ಮಗಳನ್ನು ಕಾಪಾಡಲು ಹೋದ ತಂದೆ ನೀರುಪಾಲಾದ ಘಟನೆ.ಇವರನ್ನು ಕಾಪಾಡಲು ಹೋದ ತಾಯಿಯು ಕೂಡ ಮುಳುಗುವಷ್ಟರಲ್ಲಿ ತಾಯಿಯನ್ನ ಸ್ಥಳೀಯರು ಕಾಪಾಡಿದ್ದಾರೆ..

ಕೊರಟಗೆರೆ ತಾಲ್ಲೂಕಿನ ತುಂಬಾಡಿ ಗ್ರಾಮದ ಕೆರೆ ನೋಡಲು ಹೋಗಿದ್ದ ಒಂದೇ ಕುಟುಂಬದ ತಂದೆ ಮಗಳು ಇಬ್ಬರು ಕಾಲು ಜಾರಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಾಲೂಕಿನ ಕಸಬಾ ಹೋಬಳಿಯ ತುಂಬಾಡಿ ಗ್ರಾಮ ಹೊಸ ಕೆರೆ ಬಳಿ ಬೆಂಗಳೂರಿನ ಶಿವಾಜಿನಗರ ನಿವಾಸಿಗಳಾದ ಫೀರ್ ದೋಸ್ (45) ವರ್ಷ ಮಗಳು ಅಹಿಶಾ (6) ವರ್ಷದ ಬಾಲಕಿ ಮೃತಪಟ್ಟ ದುರ್ದೈವಿ.ಕೊರಟಗೆರೆ ಪಟ್ಟಣದ ಗಿರಿನಗರದ ಸಂಬಂದಿಕರ ಮನೆಗೆ ಬಂದಿದ್ದಾರೆ. ತುಂಬಾಡಿ ಹೊಸಕೆರೆ ಕೋಡಿ ಬಿದ್ದಿರುವುದನ್ನ ನೋಡಲು ಹೋಗಿದ್ದಾರೆ. ಮಗಳು ಕಾಲು ಜಾರಿ ಬೀಳುತ್ತಿದ್ದ ಸಂದರ್ಭದಲ್ಲಿ ತಂದೆ ಫಿರ್ ದೋಸ್ ಮಗಳನ್ನ ಉಳಿಸಲು ಹೋಗಿ ತಂದೆಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ನಂತರ ಸ್ಥಳೀಯರು ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಇಬ್ಬರ ಶವವನ್ನ ಹೊರ ತೆಗೆದಿದ್ದಾರೆ.

ಸ್ಥಳಕ್ಕೆ ಸಿಪಿಐ ಅನಿಲ್ ಪಿಎಸ್ಐ ಚೇತನ್ ಕುಮಾರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!