ಕಾರವಾರ ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿ ಹೆಣ್ಣು ಮಕ್ಕಳು ತಮ್ಮ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುವ ಸನ್ನಿವೇಶವನ್ನು ನಾವು ಕಾಣುತ್ತೇವೆ. ಆರ್ಥಿಕ ತೊಂದರೆಯ ಕಾರಣವೆನ್ನುವುದು ಮುಖ್ಯವಾದ ವಿಚಾರ. ಇಂತಹ ಸಮಸ್ಯೆಯನ್ನು ಮನಗಂಡ ಶಿಕ್ಷಕರೊಬ್ಬರು, ಹೆಣ್ಣು ಮಕ್ಕಳ ತಮ್ಮ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಶಾಲಾ ಶುಲ್ಕ ಭರಿಸಲು, ಪಠ್ಯ ಪುಸ್ತಕ ಖರೀದಿಸಲು, ಸಾರಿಗೆ ವೆಚ್ಚ, ಪಾಸ್ ಪಡೆಯಲು, ಉನ್ನತಶಿಕ್ಷಣಕ್ಕೆ ಅನುಕೂಲವಾಗುವಂತೆ ಆಯಾ ಊರಿನ ಸುತ್ತಮುತ್ತಲಿನ ವಿದ್ಯಾರ್ಥಿಗಳನ್ನು ಸೇರಿಸಿ
ಸ್ವ ಸಹಾಯ ಸಂಘದ ಮಾದರಿಯಲ್ಲಿ ಬಡಕುಟುಂಬದ ವಿನೂತನ ಚಿಂತನೆ ಅ ಚಿಂತನೆಯೇ ಶಕ್ತಿ ಎನ್ನುವoತೆ ವಿದ್ಯಾರ್ಥಿನಿಯರಿಗಾಗಿಯೇ ಸಂಘವನ್ನು ತೆರೆಯುವ ಪರಿಕಲ್ಪನೆಯನ್ನು ಹರಿಬಿಟ್ಟು “ಆತ್ಮ ನಿರ್ಭರ ಬಾಲಿಕಾ” ಎಂಬ ಹೆಸರಿನ ಮೂಲಕ ಪಸರಿಸಿದವರು, ಉತ್ತರ ಕನ್ನಡ ಜಿಲ್ಲೆಯಭಟ್ಕಳ ತಾಲೂಕಿನ ಕೊಡ್ಸುಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪರಮೇಶ್ವರ ನಾಯ್ಕ.
ತನ್ನ ಮನೆಯಲ್ಲಿ ಆರ್ಥಿಕ ತೊಂದರೆಯ ಕಾರಣ ತನ್ನ ಸಹೋದರಿಯ ಶಿಕ್ಷಣ ಮೊಟಕುಗೊಂಡದ್ದ ಮನಸ್ಸಿಗೆ ನೋವಾಗಿತ್ತು.ಅದೇ ರೀತಿಯಲ್ಲಿ ಮತ್ತೊಬ್ಬರ ಮನೆಯ ಹೆಣ್ಣು ಮಕ್ಕಳಿಗೆ ಆರ್ಥಿಕ ತೊಂದರೆ ಆಗಬಾರದು ಎಂಬ ಉದಾತ್ತ ಮನಸ್ಸಿನಲ್ಲಿ ಈ ಯೋಜನೆ ಸಂಘದ ರೂದಲ್ಲಿ ಹುಟ್ಟು ಹಾಕುವಂತೆ ಮಾಡಿತು.
2016 ರಲ್ಲಿ ಈ ಯೋಜನೆಗೆ ಚಾಲನೆ ನೀಡಿದ ಇವರು ತಮ್ಮ ಮನೆಯ ಸುತ್ತಮುತ್ತಲಿನ 13 ವಿದ್ಯಾರ್ಥಿನಿಯರನ್ನು ಸೇರಿಸಿ ಸಂಘವನ್ನು ತೆರೆದರು, ವಿದ್ಯಾರ್ಥಿನಿಯರು ಸೇರಿ ಸಂಘ ನಡೆಸಲು ಬೇಕಾದ ಮಾರ್ಗದರ್ಶನವನ್ನು ನೀಡಿದರು. 5 ರೂಪಾಯಿ ಉಳಿತಾಯದ ಮೊತ್ತವನ್ನಾಗಿಸಿ ವಾರದ ರಜಾ ದಿನಗಳಲ್ಲಿ ಸಂಘ ನಡೆಸಲು ಸೂಚಿಸಿದರು. ಇದರಿಂದಾಗಿ ಈ ಮೊತ್ತ ಬೆಳೆಂದಂತೆ ಕನಿಷ್ಟ ಬಡ್ಡಿದರದಲ್ಲಿ ಅವಶ್ಯಕತೆ ಇರುವ ವಿದ್ಯಾರ್ಥಿನಿಗೆ ಹಣವನ್ನು ಸಾಲದ ರೂಪದಲ್ಲಿ ನೀಡಿ ಮರುಭರಣವನ್ನು ಮಾಡಿಕೊಳ್ಳುತ್ತಾ ಬಂದಿದ್ದು ಇದರಿಂದಾಗಿ ಅನೇಕ ವಿದ್ಯಾರ್ಥಿನಿಯರು ಸಂಘದ ಪ್ರಯೋಜನ ಪಡೆದುಕೊಂಡಂತಾಗಿದೆ.
ಒಟ್ಟಿನಲ್ಲಿ ಯೋಜನೆಯ ರೂಪದಲ್ಲಿ ನಾಡಿನಾದ್ಯಂತ ಪಸರಿಸುವಂತಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ.