ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಗೃಹ ರಕ್ಷಕ ದಳ ವತಿಯಿಂದ ಜಿಲ್ಲಾ ಬೋಧಕರ ಅಧ್ಯಕ್ಷತೆಯಲ್ಲಿ ಅಭಿನಂದನಾ ಕಾರ್ಯಕ್ರಮ ನಿಯೋಜಿಸಲಾಗಿತ್ತು, ಈ ಕಾರ್ಯಕ್ರಮವನ್ನು ಶಾಸಕ ರಾಜಾ ವೇಣುಗೋಪಾಲ ನಾಯಕರವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ರಾಜಾ ವೇಣುಗೋಪಾಲ ನಾಯಕರಿಂದ ಸಮವಸ್ತ್ರ ವಿತರಣೆ ಮಾಡಲಾಯಿತು ಹಾಗು ಚುನಾವಣೆಯಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ ಹುಣಸಗಿ ಘಟಕಾಧಿಕಾರಿ ಹಾಗೂ 50 ಜನ ಗೃಹ ರಕ್ಷಕರಿಗೆ ಪ್ರಶಂಸ ಪ್ರಮಾಣಪತ್ರ ವಿತರಿಸಿದರು. ನಂತರ ಗೃಹ ರಕ್ಷಕ ಸಿಬ್ಬಂದಿಗಳ ತರಬೇತಿ ಕೇಂದ್ರಕ್ಕೆ ನಿವೇಶನ ಹಾಗೂ ಇನ್ನೀತರ ಕುಂದು ಕೊರತೆಗಳನ್ನು ಕಲ್ಪಿಸಿಕೊಡುವಂತೆ
ಶಾಸಕ ರಾಜಾವೇಣುಗೋಪಾಲ ನಾಯಕ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹುಣಸಗಿ ಪೊಲೀಸ್ ಠಾಣಾ ಪಿಎಸ್ಐ ಚಂದ್ರಶೇಖರ, ಮುಖಂಡರಾದ ಶರಣಗೌಡ ದಂಡಿನ್,ನಿಂಗರಾಜ್ ಬಾಚಿಮಟ್ಟಿ, ಸಿದ್ದರಾಮ ಮಲಗಲದಿನ್ನಿ, ಚಂದ್ರಶೇಖರ್ ದಂಡಿನ್,ಚನ್ನಯ್ಯ ಮುತ್ಯಾ,ಬಸವರಾಜ ಸಾಹುಕಾರ್,ಬಾಪುಗೌಡ ಸದಬ್, ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಗೃಹ ರಕ್ಷಕ ದಳ ಅಧಿಕಾರಿ ವರ್ಗ & ಸಿಬ್ಬಂದಿಗಳು ಉಪಸ್ಥಿತರಿದ್ದರು.