ಗದಗ :ಹೌದು ಗದಗ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಇವರ ಹೇಸರಿನಲ್ಲಿ ಸೈಬರ್ ವಂಚಕರು ಫೇಸ್‌ಬುಕ್, ಮೆಸೆಂಜರ್ ಹಾಗೂ ವಾಟ್ಸಾಪ್ ನಲ್ಲಿ ನಕಲಿ ಖಾತೆಯನ್ನು ತೆರೆದು ಅವರ ಫೋಟೊ ಬಳಸಿಕೊಂಡು ವಂಚನೆಗೆ ಮುಂದಾಗಿರುವುದು ಬುಧವಾರ ಬೆಳಕಿಗೆ ಬಂದಿದೆ….!
ಎಲ್ಲರಿಗೂ ತಿಳಿದಿರುವ ಹಾಗೆ ಸೈಬರ್ ವಂಚಕರು ಈಗಾಗಲೆ ಹಲವು ಸಾರ್ವಜನಿಕರಿಗೆ ಹಲವು ರೀತಿಯಲ್ಲಿ ಮೋಸ ಮಾಡಿದ್ದಾರೆ, ಅದು ನಕಲಿ ಫೆಸ್ ಬುಕ್ ಅಕೊಂಟ್ ಮೂಲಕವಾಗಲಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ ಮಾಡಿರುವ ಫೋಟೊ ಬಳಸಿ ಅಶ್ಲೀಲ ಫೋಟೊ ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕವಾಗಲಿ, ಆನಲೈನ್ ಡೆಲಿವರಿಯ ನೆಪದಲ್ಲಿ “ಒಟಿಪಿ” ಕೆಳಿ ಬ್ಯಾಂಕ್ ಖಾತೆಯಲ್ಲಿನ ಹಣ ಲೂಟಿ ಮಾಡುವ ಮೂಲಕವಾಗಲಿ, ಹೀಗೆ ಅನೇಕ ರೀತಿಯಲ್ಲಿ ಆನಲೈನ್ ವಂಚನೆ ಮಾಡುವುದು ಸಹಜವಾಗಿದೆ,
ಇದರ ಕುರಿತು ಪೋಲಿಸರು ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿರುವುದು ಉಂಟು,
ಆದರೆ ಸೈಬರ್ ಖದಿಮರು ಪೋಲಿಸರ ಬಲೆಗೆ ಸಿಕ್ಕಿರುವುದು ಎಲ್ಲೊ ಒಂದೆರೆಡು. ಮಾತ್ರ
ಆದರೆ ಇಲ್ಲಿ ಗದಗ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಇವರ ಹೇಸರಿನಲ್ಲಿ ಯಾರೋ ಸೈಬರ್ ಖದಿಮರು ನಕಲಿ ಫೇಸ್‌ಬುಕ್ ಅಕೌಂಟ್ ಸೃಷ್ಟಿಸಿ, ಅವರ ಹೆಸರಿನಲ್ಲಿ ವಂಚಿಸಲು ಮುಂದಾಗಿರುವುದು ನೋಡಿದರೆ ಇವರಿಗೆ ಕಡಿವಾಣ ಹಾಕುವುದು ಕಷ್ಟಕರ ಎನಿಸುತ್ತಿದೆ…!.
ಪೋಲಿಸರನ್ನೆ ಬಿಡದ ಸೈಬರ್ ವಂಚಕರು ಸಾರ್ವಜನಿಕರಿಗೆ ಮೋಸಮಾಡುವುದು ಇನ್ಯಾವ ಲೆಕ್ಕ..?
ಈ ಕುರಿತು ಪೋಲಿಸರು ಸೈಬರ್ ವಂಚಕರನ್ನು ಹೀಡಿದು ಸೂಕ್ತ ಕ್ರಮ ಕೈಗೊಂಡು ಮುಂದೆ ಈ ರೀತಿ ಆಗದಿರಲಿ ಎಂದು ಸಾರ್ವಜನಿಕರ ಒತ್ತಾಯವಾಗಿದೆ