ಮುಂಡರಗಿ:ಇದು ಸಂತೆ ಮಾರುಕಟ್ಟೆ ಅಲ್ಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರಗತಿ ಪರಿಶೀಲನಾ ಸಭೆ ಸಭೆಗೆ ಬರಿ ಕೈಯಲ್ಲಿ ಬಂದ ಅಧಿಕಾರಿಗಳಿಗೆ ಸಖತ್ ಕ್ಲಾಸ್ಎಸ್ ಸಿ ಪಿ./ ಟಿ ಎಸ್ ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಮುಖ್ಯಾಧಿಕಾರಿಗಳ ಗೈರು ಬದಲಾಗಿ ಬಂದ ಸಿಬ್ಬಂದಿಯವರನ್ನು ಸಭೆಯಿಂದ ಹೊರ ಹಾಕಿದ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಯ ಅಧ್ಯಕ್ಷರಾದ ವಿಶ್ವನಾಥ್ ಎಚ್
ಗದಗ್ ಜಿಲ್ಲಾ ಮುಂಡರಗಿ ತಾಲೂಕಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಯೋಗ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಪ್ರಗತಿ ಪರಿಶೀಲನ ಸಭೆಯನ್ನು ಮಾಡಲಾಯಿತು
ಪ್ರಗತಿಪರಶೀಲನ ಸಭೆಗೆ ಸತತ ಗೈರಾದ ಅಧಿಕಾರಿಗಳ ಪರವಾಗಿ ಬಂದ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು ನಿಮ್ಮ ಅಧಿಕಾರಿಗಳಿಗೆ ಸಭೆಗೆ ಬರಲು ಆಗುವುದಿಲ್ಲ ಎಂದರೆ ಬೇರೆ ಕಡೆ ಹೋಗಲಿ ಇಲ್ಲಿ ನೌಕರಿ ಮಾಡುವ ಅವಶ್ಯಕತೆ ಇಲ್ಲ ಎಂದು ಎಚ್ಚರಿಕೆ ನೀಡಿದರು
ಪುರಸಭೆ ಮುಖ್ಯಾಧಿಕಾರಿಗಳು ಮತ್ತು ಕಪ್ಪತ್ತ ಹಿಲ್ಸ್ ಅರಣ್ಯ ಇಲಾಖೆ ಮುಖ್ಯ ಅಧಿಕಾರಿಗಳು ಎಸ ಸಿ ಪಿ/ ಟಿ ಎಸ್ ಪಿ ಸಭೆಗೆ ಡೋಂಟ್ ಕೇರ್ ಒಂದು ಬಾರಿ ಸಹ ಬಾರದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭಿವೃದ್ಧಿಯ ಪ್ರಗತಿ ಸಭೆಗೆ ಅಗೌರವ ನೀಡುತ್ತಿದ್ದಾರೆ ಅವರಿಗೇ ಸೋಕೇಶ್ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದರು ಈ ಸಂದರ್ಭದಲ್ಲಿ ಸಿಂಗಟಾಲೂರು ಏತ ನೀರಾವರಿ ಇಲಾಖೆಯ ಸಿಬ್ಬಂದಿ ಒಬ್ಬರು ಸಭೆಯ ಯಾವುದೇ ಪ್ರಗತಿ ವರದಿಯನ್ನು ತರೆದೆ ಬರಿ ಕೈಯಲ್ಲಿ ಬಂದಿದ್ದನ್ನು ಕಂಡು ಇದೇನು ಸಂತೆ ಮಾರುಕಟ್ಟೆಯಲ್ಲ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿರುವ ಸಭೆ ಸಂತೆ ಮಾರುಕಟ್ಟೆಯಲ್ಲ ಹೊರನಡಿ ಎಂದು ವಿವಿಧ ಇಲಾಖೆಯ ಸಿಬ್ಬಂದಿಗಳನ್ನು ಹೊರಹಾಕಿದರು ನಂತರ ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ಮತ್ತು ವಿದ್ಯುತ್ ಸರಬರಾಜು ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಮ್ಮ ಪ್ರಗತಿಯನ್ನು ತಿಳಿಸಿದರು ಸಭೆ ಕುರಿತು ಮಾತನಾಡಿದ ವಿಶ್ವನಾಥ್ ಎಚ್ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಅಭಿವೃದ್ಧಿಯಾಗಿ ಆರ್ಥಿಕವಾಗಿ ಸದೃಢರಾಗಲು ಈ ಅನುದಾನವಿದು ಅದನ್ನು ಸಮರ್ಪಕವಾಗಿ ಬಳಕೆ ಮಾಡಿ ನಿಜವಾದ ಫಲಾನುಭವಿಗಳಿಗೆ ಸೂಕ್ತ ಸಮಯಕ್ಕೆ ತಲುಪಿಸಬೇಕು ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಮುಂದಿನ ಸಭೆಗೆ ಕಡ್ಡಾಯವಾಗಿ ಎಲ್ಲ ಇಲಾಖೆಯ ಮುಖ್ಯ ಅಧಿಕಾರಿಗಳು ಹಾಜರಾಗಬೇಕು ಎಂದರು ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಅರುಣ ಸೊರಬಾವಿ ಅವರು ಮುಂದಿನ ಬಾರಿ ಈ ರೀತಿ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು