Welcome to reportnowtv.in   Click to listen highlighted text! Welcome to reportnowtv.in
Sunday, January 19, 2025
HomeDistrictsGadagವಿಜಯಪುರದಲ್ಲಿ ಭಾರತ ರತ್ನ ಬಾಬಾಸಾಹೇಬ ಅಂಬೇಡ್ಕರ್ ಅವರ 68 ನೇ ಮಹಾಪರಿನಿರ್ವಾಣ ದಿನ ಆಚರಣೆ.

ವಿಜಯಪುರದಲ್ಲಿ ಭಾರತ ರತ್ನ ಬಾಬಾಸಾಹೇಬ ಅಂಬೇಡ್ಕರ್ ಅವರ 68 ನೇ ಮಹಾಪರಿನಿರ್ವಾಣ ದಿನ ಆಚರಣೆ.

ಗದಗ್ : ಜಿಲ್ಲೆಯ ಮುಂಡರಗಿ ತಾಲೂಕಿನ ರಾಮೆನಹಳ್ಳಿ ಗ್ರಾಮದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು 68 ನೇ ಮಹಾ ಪರಿನಿರ್ವಾಣ ದಿನ ಕಾರ್ಯಕ್ರಮವನ್ನು ಮೇಣದಬತ್ತಿ ಬೆಳಗಿಸುವ ಮೂಲಕ ಮತ್ತು ಮುದ್ದು ಮಕ್ಕಳಿಗೆ ನೋಟ್ಸ್ ಮತ್ತು ಪೆನ್ನು ವಿತರಣೆ ಮಾಡುವ ಮೂಲಕ ಆಚರಿಸಲಾಯಿತು

ಈ ಸಂದರ್ಭದಲ್ಲಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಮರಿಯಜ್ಜ ಎಚ್ ರವರು ಅಂಬೇಡ್ಕರ್ ಅವರ ಜೀವನದ ಕುರಿತು ಮಾತನಾಡಿ ಶಿಕ್ಷಣ ಸಂಘಟನೆ ಹೋರಾಟದ ಮೂಲಕ ದಲಿತ ಸಮುದಾಯವು ಮುಂದೆ ಬರಬೇಕು ಪ್ರತಿಯೊಬ್ಬರು ಕಡ್ಡಾಯವಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದರು ನಂತರ ಸಂದರ್ಭದಲ್ಲಿ ಮಾತನಾಡಿದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ದಲಿತ ಚಳುವಳಿಯ ತಾಲೂಕು ಅಧ್ಯಕ್ಷರಾದ ಲಕ್ಷ್ಮಣ ತಗಡಿನಮನಿ ಅವರು ಮಹಾ ಪರಿನಿರ್ವಣ ದಿನ ಎಂದರೆ ನಮ್ಮೆಲ್ಲರಿಗೂ ತುಂಬಾ ದುಃಖದ ಸಂಗತಿ ಯಾಕೆಂದರೆ ಈ ದೇಶದ ಪ್ರತಿಯೊಬ್ಬರಿಗೂ ಸಮಾನತೆಯ ಮೀಸಲಾತಿಯನ್ನು ನೀಡಿ

ಅಮೂಲ್ಯ ರತ್ನವಾದ ಅಂಬೇಡ್ಕರ್ ಅವರು ನಮ್ಮನ್ನೆಲ್ಲ ಅಗಲಿದ್ದಾರೆ ಆದರೆ ಅವರು ನೀಡಿರುವ ಸಂವಿಧಾನ ಒಂದು ಜಾತಿ ಜನಾಂಗಕ್ಕೆ ಸೀಮಿತವಾಗುವುದಲ್ಲ ಪ್ರತಿಯೊಬ್ಬರು ಸಂವಿಧಾನದ ಅಡಿಯಲ್ಲಿ ಶಿಕ್ಷಣ ರಾಜಕೀಯ ಸಾಮಾಜಿಕ ಸಮಾನತೆ ಮೂಲಕ ಬದುಕು ಕಟ್ಟಿಕೊಳ್ಳೋಣ ಎಂದರು ನಂತರ ಮಾತನಾಡಿದ ದಲಿತ ಸಂಘಟನೆಯ ಹೋರಾಟಗಾರರಾದ ಎಚ್ ಡಿ ಪೂಜಾರ್ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ

ಸಂವಿಧಾನ ಇಡೀ ಜಗತ್ತಿನಲ್ಲಿ ಮೆಚ್ಚುಗೆಯ ಸಂವಿಧಾನವಾಗಿದೆ ಹುಲಿ ಹಾಲು ಕುಡಿದವರು ಗರ್ಜಿಸಲೇಬೇಕು ಹಾಗೆ ಶಿಕ್ಷಣ ಕಲಿತು ನಮ್ಮ ಮಕ್ಕಳನ್ನ ಗರ್ಜಿಸುವಂತೆ ಮಾಡೋಣ ಎಂದರು ಈ ಸಂದರ್ಭದಲ್ಲಿಸಹದೇವಪ್ಪ ಡಂಬಳ, ಬಸವರಾಜ ತಿಗರಿ, ದೇವಕ್ಕ ದಂಡೀನ್, ಯಲ್ಲಪ್ಪ ಸಂಗಟಿ, ಕೋಟೆಪ್ಪ ಗುಡಿ, ನೀಲಪ್ಪ ಹರಿಜನ, ಮೈಲಾರಪ್ಪ ಪೂಜಾರ, ಅಶೋಕ ಕೋಳಿ, ಮಂಜುನಾಥ ತಳಗೇರಿ, ಕರಬಸಪ್ಪ ಹರಿಜನ್, ಹುಚ್ಚಪ್ಪ ಹಾರೋಗೇರಿ, ಮರಿಯಜ್ಜ ಹರಿಜನ್ ಗ್ರಾಮದ ಹಿರಿಯರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!