ಗದಗ್ ಜಿಲ್ಲೆಯ ಮುಂಡರಗಿ ತಾಲೂಕಿನ ಮಕ್ತೂಂಪುರ ಗ್ರಾಮದ ಮಂಜಪ್ಪ ಹರಿಕೇರಿ ಎಂಬ ವ್ಯಕ್ತಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮೂವರು ಮಕ್ಕಳನ್ನು ತುಂಗಭದ್ರಾ ನದಿಗೆ ಎಸೆದು ತಾನು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಡೆದಿದೆ.
ಕೌಟುಂಬಿಕ ಕಲಹಕ್ಕೆ ಬೇಸತ್ತು 41 ವರ್ಷದ ಮಂಜಪ್ಪ ಹರಿಕೇರಿ ಎಂಬ ವ್ಯಕ್ತಿ ತನ್ನ ಇಬ್ಬರು ಮಕ್ಕಳಾದ ಧನ್ಯ 04 ವರ್ಷ ಮತ್ತು ಅಳಿಯ ಮಂಜಪ್ಪನ ಮಗನಾದ 03 ವರ್ಷ ವೇದಾಂತ್ ನನ್ನ ಬ್ರಿಡ್ಜ್ ಮೇಲಿಂದ ನದಿ ನೀರಿಗೆ ಎಸೆದು ತಾನು ನದಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 05.11.2024 ರಂದು ರಾತ್ರಿ 07:30 ರ ಸುಮಾರಿಗೆ ಮುಂಡರಗಿ ತಾಲೂಕು ಕೊರ್ಲಹಳ್ಳಿ ಬಳಿ ತುಂಗಭದ್ರಾ ನದಿಗೆ ನಿರ್ಮಿಸಿದ ಸೇತುವೆ ಮೇಲಿಂದ ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷ್ಯ ತಿಳಿದ ತಕ್ಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಪತ್ತೆ ಕಾರ್ಯ ಪ್ರಾರಂಭಿಸಿದ್ದಾರೆ.