ಮಾನ್ವಿ ಪಟ್ಟಣದಿಂದ ತಹಸೀಲ್ದಾರ್ ಕಚೇರಿವರೆಗೂ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿರುವ ಒಂದು ಕೋಟಿ ವೆಚ್ಚದ ಕಾಮಗಾರಿ ವಿವಾದಾತ್ಮಕವಾಗಿದ್ದು, ಮಾಜಿ ಶಾಸಕ ಗಂಗಾಧರನಾಯಕ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಮಾನ್ವಿ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದ ಪ್ರಸಂಗ ನಡೆಯಿತು.
ಲೋಕೋಪಯೋಗಿ ಇಲಾಖೆಯ ಎಇಇ ಸಾಮುವೇಲಪ್ಪ ವಿರುದ್ಧ ಹಾಗು ಶಾಸಕ ಹಂಪಯ್ಯ ನಾಯಕ ವಿರುದ್ಧ ಬಿಜೆಪಿ ಕಾರ್ಯಕರ್ತರು ಗುಡುಗಿದರು.
ಒಟ್ಟಾರೆಯಾಗಿ ನೋಡಿದರೆ ಮಾನ್ವಿ ಪಟ್ಟಣದ ಬಸವ ವೃತ್ತದಿಂದ ನಡೆಯುತ್ತಿರುವ ಕಾಮಗಾರಿ ಕಾಂಗ್ರೆಸ್ ಹಾಗು ಬಿಜೆಪಿ ಮುಖಂಡರ ನಡುವೆ ಜಿದ್ದಾಜಿದ್ದಿ ಪೂಪೋಟಿ ನಡುವೆ ಕಾಮಗಾರಿ ನಡೆಯುತ್ತಿದೆ.
ಎಇಇ ಸಾಮುವೇಲಪ್ಪ ಮಾತ್ರ ನಮಗೆ ಮಾಹಿತಿ ನೀಡದೆ ಸತಾಯಿಸುತ್ತಿದ್ದು, ಎಇಇ ಸಾಮುವೇಲಪ್ಪ ಅವರ ಕುಮ್ಮಕ್ಕಿನಿಂದ ಕಳಪೆ ಕಾಮಗಾರಿ ಮಾಡಿ ಹಣ ಲೂಟಿ ಮಾಡುವ ದಂಧೆ ಇದು ಎಂದು ಬಿಜೆಪಿ ಮುಖಂಡರು ಸರಕಾರದ ವಿರುದ್ಧ ಗುಡುಗಿದರು.
ವರದಿ:R now TV ಶಫೀಕ್ ಹುಸೇನ್ ಮಾನವಿ