ಮುಂಡರಗಿ ಪಟ್ಟಣದ ಬಿದರಹಳ್ಳಿ ಗ್ರಾಮದಲ್ಲಿ 33 ಲಕ್ಷ ರೂಪಾಯಿ ವೆಚ್ಚದ ಮೂರು ಶಾಲಾ ಕೊಟ್ಟಡಿಗಳ ಉದ್ಘಾಟನೆ ಹಾಗೂ 10 ಲಕ್ಷ ರೂಪಾಯಿ ವೆಚ್ಚದ ಕೊಠಡಿಗಳ ದುರಸ್ತಿ ಕಾಮಗಾರಿಗೆ ಭೂಮಿ ಪೂಜೆಯನ್ನು ಶಾಸಕ ಚಂದ್ರು ಲಮಾಣಿ ನೆರವೇರಿಸಿದರು.
ಮುಂಡರಗಿ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿ ಪೂಜೆಯನ್ನು ಶಾಸಕ ಚಂದ್ರು ಲಮಾಣಿ ನೆರವೇರಿಸಿದರು, ಈ ವೇಳೆ ಮಾತನಾಡಿದ ಶಾಸಕ ಸರ್ಕಾರದಲ್ಲಿ ಅನುದಾನದ ಕೊರತೆಯಿಂದಾಗಿ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಬರುವ ಅನುದಾನದಲ್ಲಿ ಹಂಚಿಕೆ ಮಾಡಿ ಕ್ಷೇತ್ರದ ಅಭಿವೃದ್ಧಿ ಮಾಡಲಾಗಿದೆ ಎಲ್ಲರು ಸಹಕರಿಸಬೇಕೆಂದು ಮನವಿ ಮಾಡಿದರು.
ಮುಂಡರಗಿ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿ 33 ಲಕ್ಷ ರೂಪಾಯಿ ವೆಚ್ಚದ ಮೂರು ಶಾಲಾ ಕೊಟ್ಟಡಿಗಳ ಉದ್ಘಾಟನೆ ಹಾಗೂ 10 ಲಕ್ಷ ರೂಪಾಯಿ ವೆಚ್ಚದ ಕೊಠಡಿಗಳ ದುರಸ್ತಿ ಕಾಮಗಾರಿ ಭೂಮಿ ಪೂಜೆ ನೆರವೇರಿಸಲಾಯಿತು .
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಂಡರಗಿ ಮಂಡಳದ ಅಧ್ಯಕ್ಷ ಹೆಮಗಿರೀಶ ಹಾವಿನಾಳ ಬಹುದಿನದ ಬೇಡಿಕೆಯಾದ ರೇಣುಕಾಂಬ ದೇವಿ ದೇವಸ್ಥಾನದ ತಡೆಗೋಡೆ ನಿರ್ಮಾಣ, ಗ್ರಾಮಕ್ಕೆ ಬಿಸಿಎಂ ವಸತಿ ನಿಲಯ ಮತ್ತು ಕಾಲೇಜು ನೀಡಬೇಕು ಎಂದು ಗ್ರಾಮಸ್ಥರು ಪರವಾಗಿ ಮನವಿ ಮಾಡಿದರು, ಏನೇ ಸಮಸ್ಯೆ ಇದ್ದರೂ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ತಿಳಿಸಬಹುದು ಎಂದು ಭರವಸೆ ನೀಡಿದರು.