ಕಾರವಾರ ಕ್ಷೇತ್ರದಲ್ಲಿ ಉತ್ತಮ ಶಿಕ್ಷಕರ ತಂಡ ಇದೆ, ಉತ್ತಮ ಶೈಕ್ಷಣಿಕ ವಾತಾವರಣ ಇದೆ. ಪ್ರತಿಭಾವಂತ ಮಕ್ಕಳಿದ್ದಾರೆ. ಶೈಕ್ಷಣಿಕ ಉನ್ನತಿಗೆ ಬೇಕಾದ ನನ್ನ ಎಲ್ಲ ಸೌಲಭ್ಯಗಳನ್ನು ಮಕ್ಕಳು ಪಡೆದು ಬೆಳಗಬೇಕು. ಸುಶಿಕ್ಷಿತರ ಸಂಖ್ಯೆ ಹೆಚ್ಚಾಗಲಿ ಎಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ಶಾಸಕ ದಿನಕರ ಶೆಟ್ಟಿ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ದ ನೆಲ್ಲಿಕೇರಿ ಕೆಪಿಎಸ್ ಶಾಲಾ ಆವಾರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದ ಬಗ್ಗೆ ನನಗೂ ವಿಶೇಷವಾದ ಕಾಳಜಿ ಇದೆ. ನೆಲ್ಲಿಕೇರಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಅಗತ್ಯತೆಗಳನ್ನು ಕಾಲಕಾಲಕ್ಕೆ ಮಾಡಿಕೊಟ್ಟಿದ್ದೇನೆ. ಎಂದರು.
ಶಿಕ್ಷಣ ಮಾತ್ರವಲ್ಲದೇ ಇತರ ಆರೋಗ್ಯ, ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಯಾವ ಕ್ಷೇತ್ರದಲ್ಲೂ ರಾಜಕೀಯ ಹಸ್ತಕ್ಷೇಪ ನನ್ನಿಂದ ಆಗಿಲ್ಲಎಂದರು.
ಡಯಟ್ ಪ್ರಾಚಾರ್ಯ ಶಿವರಾಮು ಎಂ.ಆರ್., ಕೆಪಿಎಸ್ ಪ್ರಾಚಾರ್ಯ ಸತೀಶ ನಾಯ್ಕ, ಬಿಇಒ ಹಾಗೂ ಪ್ರಭಾರ ತಾಪಂ ಇಒ ರಾಜೇಂದ್ರ ಭಟ್, ರೇಖಾ ನಾಯ್ಕ, ಶಿಕ್ಷಕರ ಸಂಘದ ಆನಂದ ನಾಯಕ ಇತರರು ಇದ್ದರು. ಬಳಿಕ ಮಕ್ಕಳಿಂದ ವಿವಿಧ ಹಂತಗಳಲ್ಲಿ ಸಾಂಸ್ಕೃತಿಕ ಹಾಗೂ ನಿಗದಿತ ಕಲಾ ಪ್ರಕಾರಗಳ ಸ್ಪರ್ಧಾ ಕಾರ್ಯಕ್ರಮ ನಡೆಯಿತು.