ಮುಡಾ ಹಗರಣದಲ್ಲಿ ಸಿಎಂ ಅವರೇ ಎ೧ ಆರೋಪಿ ಆದ್ರೂ ಸಹ ಇಲ್ಲಿಯವರೆಗೆ ರಾಜೀನಾಮೆ ನೀಡುತ್ತಿಲ್ಲ. ಇದರಲ್ಲಿ ಉಪ್ಪು ತಿಂದವರು, ನೀರು ಕುಡಿಯಲೇಬೇಕು ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯನವರಿಗರ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜೆಯೇಂದ್ರ ಹುಬ್ಬಳ್ಳಿಯಲ್ಲಿ ಕಾರವಾಗಿ ಪ್ರತಿಕ್ರಿಯೆ ನೀಡಿದರು.
ನಗರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರೆಯೆ ನೀಡಿದ ಅವರು, ಸಿಎಂ ಸಿದ್ದರಾಮಯ್ಯನವರ ಪಾಪದ ಕೊಡ ತುಂಬಿದೆ. ಅವರು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾವ ಪುರುಷಾರ್ಥಕ್ಕೆ ಸೈಟ್ ವಾಪಾಸ್ ನೀಡಿದ್ದೀರಿ ಎಂದು ಪ್ರಶ್ನಿಸಿದ ಅವರು, ಮುಡಾ ಸೈಟ್ ಪ್ರಕರಣ ಎಲ್ಲಾ ರೂವಾರಿ ಸಿಎಂ ಅವರೇ, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜ್ಞಾನೋದಯವಾಗಿದೆ. ಭಂಡತನದಿಂದ ಹೊರಗೆ ಬಂದು ಗೌರವಯುತವಾಗಿ ರಾಜೀನಾಮೆ ನೀಡಬೇಕು. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಹಗರಣದ ತನಿಖಾ ಭಾಗವಾಗಿ ಇಡಿ ಮುಡಾ ಕಚೇರಿ ಮೇಲೆ ಹಾಗೂ ಅಧಿಕಾರಿಗಳ ಮೇಲೆ ದಾಳಿ ನಡೆಸಿದೆ ಎಂದರು, ಇನ್ನೂ ಹಳೇ ಹುಬ್ಬಳ್ಳಿ ಗಲಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಹಳೇ ಹುಬ್ಬಳ್ಳಿ ಗಲಭೆ ಕೇಸು ವಾಪಾಸ್ ಪಡೆದಿರುವುದು ಹುಡುಗಾಟಿಕೆ ವಿಚಾರವಲ್ಲಾ. ಸರ್ಕಾರದ ಈ ನಿರ್ಧಾರದಿಂದ ಜನತೆಯಲ್ಲಿ ಪೊಲೀಸ್ ವ್ಯವಸ್ಥೆ ಬಗ್ಗೆ ಅಪನಂಬಿಕೆ ಉಂಟಾಗಿದೆ. ಎನ್ಎಐ ತನಿಖೆ ನಡೆಸುತ್ತಿದ್ದರು ಕೇಸ್ ವಾಪಸು ಪಡೆದಿದ್ದಾರೆ. ಇವರು ಎಂತಹ ದುಷ್ಟರು ಎಂದು ಕಿಡಿಕಾರಿದ ಅವರು, ನಾವು ಈ ಪ್ರಕರಣವನ್ನು ತಾರ್ಕಿಕ ಹಂತಕ್ಕೆ ತಗೆದುಕೊಂಡು ಹೋಗುತ್ತೇವೆಂದು ಸ್ಪಷ್ಟವಾಗಿ ಹೇಳಿದರು. ಜತೆಗೆ
ಉಪಚುನಾವಣೆ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಉಪಚುನಾವಣೆ ಎಲ್ಲಾ ಕ್ಷೇತ್ರದ ಗೊಂದಲ ಇನ್ನೂ ಎರಡು ದಿನಗಳಲ್ಲಿ ಎಲ್ಲಾ ಬಗೆಹರಿಸಲಾಗುತ್ತದೆ. ನಾನು ಸಹ ಆದಷ್ಟು ಬೇಗಾ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಲಿದ್ದೇನೆ. ನಂತರ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಶಿಗ್ಗಾಂವಿಯಲ್ಲಿ ಎಷ್ಟೇ ಆಕಾಂಕ್ಷಿಗಳು ಇದ್ದರು ಕೂಡಾ ಸಂಸದರಾದ ಬಸವರಾಜ್ ಬೊಮ್ಮಾಯಿ ಮನಸ್ಸಿನಲ್ಲಿ ಏನಿದೆ ಎಂಬುದು ಮುಖ್ಯ, ಅಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂದು ಬೊಮ್ಮಾಯಿ ಅವರ ಅಭಿಪ್ರಾಯ ಕೂಡಾ ಪ್ರಮುಖವಾದದ್ದಾಗಿದೆ. ಇನ್ನೂ ಚನ್ನಪಟ್ಟಣ ಟಿಕೆಟ್ ಆಯ್ಕೆಯಲ್ಲಿ ಹೈಕಮಾಂಡ್ ಸಂಸದ ಕುಮಾರಸ್ವಾಮಿ ಅವರ ಅಭಿಪ್ರಾಯ ಪ್ರಮುಖ ಎಂದಿದೆ. ಹೀಗಾಗಿ ಅಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.