ಕೆರೆಗೆ ಸೇರಿದ ಈ ಭೂಮಿಯನ್ನು ತುಮಕೂರು ಮೂಲದ ಕೃಷ್ಣಕುಮಾರ್ ಎಂಬುವರ ಹೆಸರಿನಲ್ಲಿ ಈ ಹಿಂದೆ ಪಹಣಿ ಮಾಡಲಾಗಿಡೇ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿತು ಸಂಭಂದ ಪಟ್ಟ ಅಧಿಕಾರಿಗಳ ಬಳಿ ಸ್ಫಷ್ಟನೇ ಕೇಳಿದಾಗಲೂ ಯಾವುದೇ ಸ್ಪಂದನೆ ಸಿಗದೇ ಇರುವುದು ಮತ್ತಷ್ಟು ಗೊಂದಲ ಸೃಷ್ಟಿಸಿದೆ.
ಕೆರೆಯನ್ನು ಉಳಿಸಿಕೊಡಿ ಎಂದು ಪ್ರತಿನಿತ್ಯ ಎಸಿ .ಡಿಸಿ .ತಾಲೂಕು ಕಚೇರಿಗೆ .ಅಲೆಯುತ್ತಿರುವ ಸ್ಥಳೀಯ ರೈತರಿಗೆ ಈ ವಿಷಯ ಬಗೆಹರಿಯದ ತಲೆನೋವಾಗಿದೆ. ಈ ಕೆರೆಯ ಮೂಲ ಕಡತ ಎಲ್ಲಿದೆ ಎಂಬುದು ಯಾರಿಗೂ ತಿಳಿದಿಲ್ಲ, ಹಿಗಿದ್ದರೂ ಇದೆ ಕೆರೆಯ ಅಭಿವೃದ್ಧಿಗೆ ಸರ್ಕಾರದಿಂದ ಹಣ ಬಿಡುಗಡೆ ಮಾಡಲಾಗಿದ್ದು, ಪ್ರಗತಿ ಕಾರ್ಯಗಳು ನಡೆದಿದೆ ಎಂದು ಉಲ್ಲೇಖಿಸಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಸಲಿಗೆ ಕೆರೆ ಭಾಗವನ್ನು ಖಾಸಗಿ ವ್ಯಕ್ತಿ ಹೆಸರಿಗೆ ಮಾಡಿಕೊಟ್ಟವರ್ಯಾರು ಎಂಬುದಕ್ಕೆ ಅಧಿಕಾರಿಗಳೇ ಉತ್ತರಿಸ ಬೇಕಿದ್ದು,
ಇದೆ ವೇಳೆ ಕೆರೆ ಮುಂದೆ ಪ್ರತಿಭಟಿಸಿದ ಗ್ರಾಮಸ್ಥರು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಈ ಕುರಿತು ಗಮನ ಹರಿಸಿ ಈ ಭಾ ಗದ ಏಳು ಹಳ್ಳಿಗಳ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲ ಮಾಡಿಕೊಡಬೇಕೆಂದು ಹಾಗೂ ಕೆರೆ ಉಳಿಸಿ ಎಂಬ ಘೋಷಣೆ ಕೂಗಿದರು