Welcome to reportnowtv.in   Click to listen highlighted text! Welcome to reportnowtv.in
Thursday, December 26, 2024
HomeBengaluru Citybengaluruದೇವನಹಳ್ಳಿ ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಕೆ.ಹೆಚ್.ಮುನಿಯಪ್ಪ ಗುದ್ದಲಿಪೂಜೆ. ಗ್ರಾಮ ಪಂಚಾಯತಿ ವೃತ್ತದಲ್ಲಿ ಸರ್ಕಾರಿ ಶಾಲೆಗಳನ್ನು...

ದೇವನಹಳ್ಳಿ ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಕೆ.ಹೆಚ್.ಮುನಿಯಪ್ಪ ಗುದ್ದಲಿಪೂಜೆ. ಗ್ರಾಮ ಪಂಚಾಯತಿ ವೃತ್ತದಲ್ಲಿ ಸರ್ಕಾರಿ ಶಾಲೆಗಳನ್ನು ನಿರ್ಮಿಸಲು ಚಿಂತನೆ.

ದೇವನಹಳ್ಳಿ ತಾಲ್ಲೂಕು ವಿಜಯಪುರ ಹೋಬಳಿಯ ಗ್ರಾಮಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಕೆ.ಹೆಚ್.ಮುನಿಯಪ್ಪ ಗುದ್ದಲಿಪೂಜೆ ನೆರವೇರಿಸಿದರು.

ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನ ಯೋಜನೆಯಡಿ ವಿಜಯಪುರ ಹೋಬಳಿಯ ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾರಾಯಣಪುರ, ಚಿನುವಂಡನಹಳ್ಳಿ, ಭಟ್ರೇನಹಳ್ಳಿ, ಎ.ರಂಗನಾಥಪುರ, ಚಂದೇನಹಳ್ಳಿ, ಗೊಡ್ಲುಮುದ್ದೇನಹಳ್ಳಿ, ಗ್ರಾಮಗಳಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಸಚಿವ ಕೆ.ಹೆಚ್.ಮುನಿಯಪ್ಪ ಗುದ್ದಲಿ ಪೂಜೆ ನೆರವೇರಿಸಿದರು.

ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ, ಮೂಲಭೂತ ಅಭಿವೃದ್ಧಿ ಗೆ ನಮ್ಮ‌ಸರ್ಕಾರ ಹೆಚ್ಚು ಒತ್ತು ನೀಡಿದೆ, ಪ್ರತಿ ಗ್ರಾಮದಲ್ಲಿ ಒಂದಲ್ಲಾ ಒಂದು ಅಭಿವೃದ್ಧಿ ಕಾಮಗಾರಿ ನಡೆಯತ್ತದೆ , ಗ್ರಾಮ ಪಂಚಾಯತಿ ವೃತ್ತದಲ್ಲಿ ಸರ್ಕಾರಿ ಶಾಲೆಗಳನ್ನು ನಿರ್ಮಿಸಿ ಅದಕ್ಕೆ ಆಟದ ಮೈದಾನ, ಶೌಚಾಲಯ, ಆಟದ ಪರಿಕರಗಳು ಇನ್ನು ಹಲವು ಸೌಕರ್ಯಗಳನ್ನು ನೀಡಿ ಖಾಸಗಿ ಶಾಲೆಗಳ‌ಸೌಲಭ್ಯಗಳನ್ನು ನೀಡಲು ಚಿಂತನೆ ಇಟ್ಟುಕೊಂಡಿದ್ದು ಬಹು ಕಂಪನಿಗಳು ಸಿ.ಎಸ್.ಆರ್ ಅನುದಾನದಲ್ಲಿ ನೀಡಲು ಮುಂದಾಗಿದ್ದು ಅದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ನೀಡಲು ಅವಕಾಶ ಮಾಡಿಕೊಡುವುದಾಗಿ ಹಾಗೂ ಅಧಿಕಾರಿಗಳು ನಮ್ಮ ಜೊತೆಯಲ್ಲಿ ಬಂದಾಗ ಸಾರ್ವಜನಿಕರ ಕುಂದುಕೊರತೆಗಳನ್ನು ಆದಷ್ಟು ಬೇಗ ಬಗೆಹರಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಬೇಕು ಎಂದು ತಿಳಿಸಿಸರು.

ಈ ಸಂದರ್ಭದಲ್ಲಿ ಬಯಪ್ಪ ಅಧ್ಯಕ್ಷ ಶಾಂತಕುಮಾರ್, ಸದಸ್ಯರಾದ ಮಂಜುನಾಥ್, ಪ್ರಸನ್ನಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ರಾಜಣ್ಣ, ತಾಲ್ಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಜಗನ್ನಾಥ್, ವಿಜಯಪುರ ಹೋಬಳಿ ಅಧ್ಯಕ್ಷ ವೀರೇಗೌಡ, ಇನ್ನು ಹಲವು ಮುಖಂಡರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!