ಚಿಕ್ಕಬಳ್ಳಾಪುರ : ರಾಜ್ಯ ಕಂಡ ಧೀಮಂತ ನಾಯಕ ಎಸ್. ಎಂ. ಕೃಷ್ಣ ನಿಧನರಾಗಿದ್ದು ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಅವರ ಆತ್ಮಕ್ಕೆ ಶಾಂತಿ ಸಿಗಲಿ,ಅವರಿಲ್ಲದ ದುಖಃವನ್ನ ಬರಿಸುವ ಶಕ್ತಿ ಅವರ ಕುಟುಂಬಕ್ಕೆ ಭಗಂತ ನೀಡಲಿ ಎಂದು ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ ದುಖಃ ವ್ಯಕ್ತಪಡಿಸಿದ್ದಾರೆ.
ಮಾಜಿ ಸಿಎಂ ,ಮಾಜಿ ಕೇಂದ್ರ ಮಂತ್ರಿ ಹಾಗು ಮಾಜಿ ರಾಜ್ಯಪಾಲರಾಗಿದ್ದ ಎಸ್ ಎಂ ಕೃಷ್ಣ ನಮ್ಮನ್ನ ಅಗಲಿದ್ದಾರೆ ಅವರ ಅಗಲಿಕೆಗೆ ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಶ್ರದ್ದಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು ಅವರ ಭಾವಚಿತ್ರಕ್ಕೆ
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಕಣಜೇನಹಳ್ಳಿ ಜಯರಾಮ್, ರಾಜೇಶ್,ಪ್ರಧಾನ ಕಾರ್ಯದರ್ಶಿ ಸುರೇಶ್,ಯುವ ಮುಖಂಡ ಜನಾರ್ದನ್, ಶಹೀದ್ ಅಬ್ಬಾಸ್ ಮಹಿಳಾ ನಾಯಕಿ ಮಮತಾಮೂರ್ತಿ,ಕಾರ್ಮಿಕ ಮುಖಂಡ ರಾಜ್ ಬಾಬು ಇತರರು ಪುಷ್ಪ ನಮನ ಸಲ್ಲಿಸಿದರು
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಣ ಕೆ ಎನ್ ಕೇಶವರೆಡ್ಡಿ ಕಾಂಗ್ರೇಸ್ ಪಕ್ಷದ ಕಟ್ಟಾಳು ದೀಮಂತ ನಾಯಕ ತನ್ನ ಆಡಳಿತಾವದಿಯಲ್ಲಿ ಎಷ್ಟೆ ಕಷ್ಟಗಳು ಎದುರಾದರೂ ದಿಟ್ಟವಾಗಿ ಎದುರಿಸಿದರು ಮುಖ್ಯವಾಗಿ ಕಾಡುಗಳ್ಳ ವೀರಪ್ಪನ್ ವರನಟ ಡಾ ರಾಜ್ ಕುಮಾರ್ ರನ್ನ ಕಿಡ್ನಾಪ್ ಮಾಡಿದಾಗ ಯಾವುದೆ ಆತಂಕವಿಲ್ಲದೆ ಸಮಸ್ಯೆ ಬಗೆಹರಿಸಿದರು ಕಾವೇರಿ ಜಲವಿವಾದನ್ನ ಸಂದಾನದ ಮೂಲಕ ಬಗೆಹರಿಸಿದರು ಮಳೆ ಇಲ್ಲದೆ ಬರಗಾಲ ಬಂದು ರೈತರು ಆಹಾಕಾರ ಎದುರಿಸುವಾಗ ಮೊದಲ ಬಾರಿಗರ ಮೋಡ ಬಿತ್ತನೆ ಮಾಡಿಸಿದರು ಹೀಗೆ ಹತ್ತಾರು ಸವಾಲುಗಳನ್ನ ಎದುರಿಸದರು ಕೇಂದ್ರ ಮಂತ್ರಿಗಳಾಗಿ ರಾಜ್ಯಪಾಲರಾಗಿ ಸಾಕಷ್ಟು ಅನುಭವ ಹೊಂದಿದ್ದ ಮುತ್ಸದ್ದಿ ತೀರಿಕೊಂಡಿರುವುದು ನಮಗೆಲ್ಲಾ ದುಖಧ ಸಂಗತಿ ಎಂದಿದ್ದಾರೆ.