ಚಿಕ್ಕಬಳ್ಳಾಪುರ: ಮಾಸಿಕ ಗೌರವಧನ 15 ಸಾವಿರಕ್ಕೇ ಹೇರಿಕೆ ಮಾಡಿ,ಸಿಎಂ ಸಿದ್ದರಾಮಯ್ಯ ವರ್ಷದ ಹಿಂದೆ ಬರವಸೆ ನೀಡಿದ್ದು ಇದುವರೆಗೂ ನಮ್ಮಬೇಡಿಕೆಗಳನ್ನ ಗಮನ ಹರಿಸಿಲ್ಲ,ಬೆಳಗಾಂ ಅಧಿವೇಶನದಲ್ಲಾದರೂ ಆಶಾ ಕಾರ್ಯಕರ್ತರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಎಐಟಿಯುಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಒಕ್ಕೂಟ ದಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ವಾ/ಒ : ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತರಿಗೆ ತಿಂಗಳಿಗೆ 15 ಸಾವಿರ ಗೌರವಧನ ನೀಡಬೇಕು ಹದಿನೈದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ನಮ್ಮನ್ನ ಖಾಯಂಗೊಳಿಸಬೇಕು ನಮ್ಮ ಕಾರ್ಯವ್ಯಾಪ್ತಿಗೆ ಮೀರಿ ಕೆಲಸ ಮಾಡಿಕೊಳ್ಳುವ ಎಲ್ಲ ಕಾರ್ಯಕ್ರಮಗಳಿಗೂ ಹಚ್ವಿನ ಅನುಧಾನ ನೀಡಬೇಕೆಂದು ಒತ್ತಾಯಿಸಿ ಎಐಟಿಯುಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಒಕ್ಕೂಟದಿಂದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪಗರತಿಭಟನೆ ಹಮ್ಮಿಕೊಂಡಿದ್ದರು.
ಪ್ರತಿಭಟನೆ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮುಖಂಡೆ ಶಿಲ್ಪಾ ಒಂದು ವರ್ಷದ ಹಿಂದೆ ಹೋರಾಟವನ್ನ ಸ್ಥಗಿತಗೊಳಿಸಿದ್ದೇವೆ ಸಿಎಂ ಸಿದ್ದರಾಮಯ್ಯ ಬರವಸೆ ನೀಡಿದರೆ ಏನನ್ನೂ ಬಗೆ ಹರಿಸಿಲ್ಲ ಬೆಳಗಾಂ ಅಧಿವೇಶನದಲ್ಲಿಯಾದ್ರೂ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಈಡೇರಿಸಬೇಕು ಇಲ್ಲವಾದಲ್ಲಿ ಜನವರಿ 7 ರಿಂದ ಅನಿರ್ದಿಷ್ಟವಾದ ಹೋರಾಟವನ್ನ ಕೈಗೆತ್ತಿ ಕೊಳ್ಳಬೇಕಾಗುತ್ತದೆಂದು ಹೆಚ್ಚರಿಕೆ ನೀಡಿದರು.
ಈ ವೇಳೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಮುಖಂಡರು ಹಾಗು ಜಿಲ್ಲೆಯ ಎಲ್ಲಾ ತಾಲ್ಲೂಕು ಅಧ್ಯಕ್ಷರು ಬಾಗವಹಿಸಿದ್ದರು.
ವರದಿ: ಮೋಹನ್ ಕುಮಾರ್ ಆರ್.ನೌ. ಟಿವಿ ಚಿಕ್ಕಬಳ್ಳಾಪುರ