ರಾಯಚೂರು: ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇನೆಂದು ಮತ ಪಡೆದ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಹರನಹಳ್ಳಿ ಗ್ರಾಮಕ್ಕೆ ರಸ್ತೆ ನಿರ್ಮಿಸದ ಕಾರಣ ದುರ್ನಾತದ ನಡುವೆಯೆ ಜೀವನ ಕಳೆಯುತ್ತಿದ್ದಾರೆ, ಬಸನಗೌಡ ದದ್ದಲ್ ಅವರ ಕ್ಷೇತ್ರದ ಅಭಿವೃದ್ಧಿ ಇದೆ ನೋಡಿ ಎಂದು ಛೀ ಮಾರಿ ಹಾಕಿದ್ದಾರೆ.
ಮಾನ್ವಿ ತಾಲೂಕಿನ ಹರನಹಳ್ಳಿ ಗ್ರಾಮವು ಶಾಸಕ ಬಸನಗೌಡ ದದ್ದಲ್ ಸ್ವಗ್ರಾಮ ದದ್ದಲ್ ಬಳಿ ಇದ್ದರು, ಇದೆ ಮಾರ್ಗವಾಗಿ ಕಾರಲ್ಲಿ ಸಂಚಾರ ಮಾಡಿದರು ಅಭಿವೃದ್ಧಿ ಮಾಡಬೇಕು ಎನ್ನುವ ಇಚ್ಛಾಸಕ್ತಿ ಶಾಸಕ ಬಸನಗೌಡ ದದ್ದಲ್ ಗೆ ಇಲ್ಲವಾಗಿದೆ ಎಂದು ಕ್ಷೇತ್ರದ ಮತದಾರರೆ ಆರೋಪಿಸಿದ್ದಾರೆ.
ಶಾಸಕ ಬಸನಗೌಡ ದದ್ದಲ್ ಅವರೆ ನಿಮಗೆ ಎರಡು ಭಾರಿ ಮತದಾರರು ಗೆಲ್ಲಿಸಿರುವುದು ನಿಮ್ಮನ್ನು ಅಭಿವೃದ್ಧಿ ಮಾಡಲೆಂದು.ಆದರೆ ಕ್ಷೇತ್ರದ ಜನರು ದುರ್ನಾತದಲ್ಲಿ ಬಿದ್ದು ಸತ್ತರು ನಿಮಗೆ ಸ್ವಲ್ಪನಾದರು ಕಾಳಜಿ ಇಲ್ಲವೆಂದರೆ ನೀವು ಕೆಲಸ ಮಾಡುತ್ತಿರುವುದಾದರು ಏನಕ್ಕೆ ಎಂದು ರಾಯಚೂರು ಗ್ರಾಮೀಣ ಕ್ಷೇತ್ರದ ಜನರ ಕೂಗಾಗಿದೆ.
ವರದಿ:R now tv ಶಫೀಕ್ ಹುಸೇನ್ ಮಾನವಿ