ಚಿಕ್ಕಬಳ್ಳಾಪುರ : ತಾಲೂಕಿನ ಕುಡುವತಿ ಗ್ರಾಮವೂ ಸೇರಿದಂತೆ ಚಿಕ್ಕಬಳ್ಳಾಪುರ ನಗರದ ೧೨ನೇ ವಾರ್ಡ್ ಸಾಧುಮಠದಿಂದ ಗೌತಮಬುದ್ಧ ವೃತ್ತದವರೆಗೆ ೩.೫ಕೋಟಿ ವೆಚ್ಚದ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಶಾಸಕ ಪ್ರದೀಪ್ ಈಶ್ವರ್ ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು.
ಈವೇಳೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ತಾಲೂಕಿನ ಸರ್ವಾಂಗೀಣ ಅಭಿವೃದ್ದಿಗೆ ಕಟಿಬದ್ದನಾಗಿದ್ದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನೆರವಿನಿಂದ ಕ್ಷೇತ್ರವನ್ನು ಮಾದರಿಯಾಗಿ ಕಟ್ಟಲು ಮುಂದಾಗಿದ್ದೇನೆ.ನಗರದ ಅಭಿವೃದ್ಧಿಗೆ ನಮಸ್ತೆ ಚಿಕ್ಕಬಳ್ಳಾಪುರ ಎಂಬ ಕಾರ್ಯಕ್ರಮ ಹಾಕಿಕೊಂಡಿದ್ದೇನೆ.ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಕೂಡ ಬೇಟಿ ನೀಡಲು ಅನುಕೂಲ ಆಗುವಂತೆ ನಮ್ಮ ಶಾಸಕ ನಮ್ಮ ಊರಿಗೆ ಕಾರ್ಯಕ್ರಮ ಮುಂದುವರೆದಿದೆ.ಈ ಮೂಲಕ ಜನರನ್ನು ನೇರವಾಗಿ ಭೇಟಿ ಮಾಡುತ್ತಿದ್ದು ಅಲ್ಲಿ ಅವರ ತಾಲೂಕು ಆಡಳಿತವನ್ನು ಹಳ್ಳಿಗಳಿಗೆ ಕರೆಸಿ ಅಧಿಕಾರಿಗಳ ಸಮಕ್ಷಮ ಕಷ್ಟಸುಖವನ್ನು ಆಲಿಸಿ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ವ್ಯವಸ್ಥೆ ಮಾಡುತ್ತಿದ್ದೇನೆ ಎಂದರು.
ಚಿಕ್ಕಬಳ್ಳಾಪುರ ನಗರದ ಅಭಿವೃದ್ದಿಗೆ ೪೦ ಕೋಟಿ ಅನುದಾನದ ಬೇಡಿಕೆಯಿಟ್ಟಿದ್ದೇನೆ.ಅಧಿವೇಶನ ಮುಗಿದ ನಂತರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗುತ್ತೇನೆ.ದಿನ್ನೇಹೊಸಹಳ್ಳಿ, ಮುಷ್ಟೂರು,ಕಂದವಾರ ಬಾಗಿಲು ರಸ್ತೆಗಳ ಅಭಿವೃದ್ದಿಗೆ ೨೦ ಕೋಟಿಗೂ ಹೆಚ್ಚಿನ ಅನುದಾನ ಬೇಕಿದ್ದು ಈ ಎಲ್ಲಾ ಅಭಿವೃದ್ದಿ ಕಾರ್ಯಕ್ರಮಗಳಿಗೆ ೨೦೨೫ರ ಜನವರಿಯಲ್ಲಿ ಗುದ್ದಲಿಪೂಜೆ ಮಾಡುವುದಾಗಿ ತಿಳಿಸಿದರು
ನಗರದಲ್ಲಿನ ಜನರ ಕಷ್ಟ ಆಲಿಸಲು ದಿನಕ್ಕೆ ೧೦೦ ಮನೆಗಳಂತೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿದ್ದೇನೆ.ಮಹಾರಾಷ್ಟçದಲ್ಲಿ ಹಿಂದಿ ಮಾತನಾಡಿದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ರಾಷ್ಟç ರಾಜಕಾರಣಕ್ಕೆ ಹಿಂದಿ ಇಂಗ್ಲೀಷ್ ಭಾಷೆಯ ಮೇಲೆ ಹಿಡಿತ ಇರಬೇಕು.ನಾನು ಶಿರಡಿಯಲ್ಲಿ ವ್ಯಾಸಾಂಗ ಮಾಡಿದ್ದರಿಂದ ಮರಾಠಿ ಕೂಡ ಕಲಿಯಲು ಸಾಧ್ಯವಾಯಿತು.ಅವಕಾಶ ದೊರೆತರೆ ಭಾರತೀಯ ಎಲ್ಲಾ ಭಾಷೆಗಳನ್ನು ಕಲಿಯಲು ಮುಕ್ತಮನಸ್ಸನ್ನು ಹೊಂದಿದ್ದೇನೆ ಎಂದರು.
ಉಚಿತ ನಿವೇಶನಗಳ ಹಂಚಿಕೆ ವಿಚಾರದಲ್ಲಿ ಶಾಸಕ ಸಂಸದರ ನಡುವಿನ ಮಾತಿನ ಸಮರ ನಿಲ್ಲುವ ಸೂಚನೆ ಕಾಣುತ್ತಿಲ್ಲ.ಈಬಗ್ಗೆ ಮಾತನಾಡಿದ ಶಾಸಕರು ಸಂಸದ ಸುಧಾಕರ್ ಚುನಾವಣೆ ಗೆಲ್ಲುವ ಕಾರಣಕ್ಕಾಗಿಯೇ ನೀಡಿದ್ದ ಉಚಿತ ನಿವೇಶದ ಹಕ್ಕುಪತ್ರಗಳು ನಕಲಿಯಾಗಿವೆ.ರಾಜೀವ್‌ಗಾಂಧಿ ವಸತಿನಿಗಮದವರೇ ಇವು ಬೋಗಸ್ ನಿವೇಶನ ಪತ್ರಗಳಾಗಿವೆ ಎಂದು ಹೇಳಿದ್ದಾರೆ.ಆದ್ದರಿಂದ ಜನತೆ ಇವರ ಮಾತನ್ನು ನಂಬಬೇಡಿ ಎಂದಷ್ಟೇ ಹೇಳುತ್ತೇನೆ. ನಾನು ನಗರ ಗ್ರಾಮೀಣ ಪ್ರದೇಶದ ಬಡವರಿಗೆ ಸೂರು ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು ಸರಕಾರ ಮತ್ತು ಅಧಿಕಾರಿಗಳೊಟ್ಟಿಗೆ ಚರ್ಚೆ ಮಾಡುತ್ತಿದ್ದೇನೆ.ತಿಂಗಳಲ್ಲಿ ಎರಡುಮೂರು ಬಾರಿ ಇದೇ ಕೆಲಸಕ್ಕಾಗಿ ವಸತಿ ಸಚಿವರನ್ನು ಭೇಟಿ ಮಾಡಿ ಮನೆಗಳನ್ನು ತರಲು ಹೋರಾಟ ನಡೆಸಿದ್ದೇನೆ.ಇದನ್ನು ಪ್ರಚಾರ ಮಾಡಿಕೊಂಡು ಮಾಡಲು ಸಾಧ್ಯವಿಲ್ಲ ಎನ್ನುವ ಮೂಲಕ ನನಗೂ ಅಭಿವೃದ್ದಿ ಬಗ್ಗೆ ಕಾಳಜಿಯಿದೆ ಎಂಬುದನ್ನು ಹೇಳಿದರು.ಶಿನ್ನು
ನಗರಸಭೆ ಅಧ್ಯಕ್ಷರು ಉಪಾಧ್ಯಕ್ಷರು ಕೇವಲ ಪ್ರಚಾರಕ್ಕಾಗಿ ನಗರದ ಪೋಟೋಗಳನ್ನು ಬಳಸಿಕೊಳ್ಳುತ್ತಿದ್ದಾರಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು ಫೇಸ್‌ಬುಕ್ ವಾಟ್ಸ್ಪ್ ಗ್ರೂಫ್‌ಗಳಲ್ಲಿ ಹಾಕುತ್ತಿದ್ದರೆ ಅದನ್ನು ಬಿಟ್ಟು ನಿಜವಾದ ಅಭಿವೃದ್ಧಿಯತ್ತ ಗಮನ ನೀಡಲಿ.ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರಲ್ಲಿ ಮನವಿ ಮಾಡುತ್ತೇನೆ. ದೇವರ ದಯೆಯಿಂದ ಅಧಿಕಾರ ಸಿಕ್ಕಿದೆ,ಇದನ್ನು ಬಳಸಿಕೊಂಡು ಜನರ ಕಷ್ಟಗಳಿಗೆ ನೆರವಾಡೀ ನಿಟ್ಟಿನಲ್ಲಿ ನನ್ನ ಸಹಕಾರ ಕೂಡ ನಿಮಗಿರಲಿದೆ ಎಂದು ಅಭಯ ನೀಡಿದ ಅವರು ಇವರಿಬ್ಬರು ಕೂಡಿ ನಗರವನ್ನು ಅಭಿವೃದ್ಧಿಗೊಳಿಸುವ ಬಗ್ಗೆ ನನಗೆ ವಿಶ್ವಾಸವಿದೆ ಎಂದರು.
ಈ ವೇಳೆ ನಗರಸಭಾ ಸದಸ್ಯ ಕಣಿತಳ್ಳಿ ವೆಂಕಟೇಶ್,ಅAಬರೀಶ್,ನರಸಿAಹಮೂರ್ತಿ,ಜಾಫರ್,ಪೌರಾಯುಕ್ತ ಮನ್ಸೂರ್ ಅಲಿ,ಮುಖಂಡರಾದ ಹೆನ್ರಿ ಪ್ರಸನ್ನ,ವೆಂಕಟ್,ಮುಬಾರಕ್,ಗೋಪಾಲ, ಗೋವಿಂದ,ಮೌಲ,ಬಾಲು ಮತ್ತಿತರರು ಇದ್ದರು.
ವರದಿ ಮೋಹನ್ ಕುಮಾರ್ ಆರ್ ನೌ ಟಿವಿ ಚಿಕ್ಕಬಳ್ಳಾಪುರ