ರಾಯಚೂರು ಜಿಲ್ಲೆಯ ಮಾನ್ವಿ ಕಲ್ಮಠ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಯಾವುದೆ ಮೂಲ ಸೌಲಭ್ಯಗಳಿಲ್ಲ, ಲೇಟಾಗಿ ಫೀ ಕಟ್ಟಿದರೆ ಬಡ್ಡಿ ವಸೂಲಿ ಸಹ ಮಾಡುತ್ತೀದ್ದೀರೇ ಇದನ್ನು ಪ್ರಶ್ನೆ ಮಾಡಿದರೆ ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆಂದು ವಿದ್ಯಾರ್ಥಿಗಳು ಕಿಡಿಕಾರಿದರು.
ಮೂರನೆ ಮಹಡಿಯಲ್ಲಿರುವ ವಿದ್ಯಾಥಿಗಳು ಬಳಸೋದಕ್ಕೆ ತಾವೇ ನೀರು ತಂದುಕೊಳ್ಳಬೇಕಾಗಿದೆ,ನಾಮಕವಸ್ತೆ ಶಿಕ್ಷಣ ಪಡೆದು ಪದವಿ ಪಡೆಯಬೇಕಾಗಿದೆ ಮತ್ತು ಕನಿಷ್ಠ ಸೌಲಭ್ಯ ಕೊಡದೆ ಹಣ ವಸೂಲಿ ದಂಧೆ ಮಾಡುತ್ತಿದ್ದರಿಂದ ನಮ್ಮ ಆಕ್ರೋಶ ಇದೆ ಎಂದು ಪೋಷಕರು ಸಹ ಧಿಕ್ಕಾರ ಕೂಗಿದರಲ್ಲದೆ, ಈ ಸಮಸ್ಯೆ ಗೆ ಪರಿಹಾರ ಯಾವಾಗ ಎಂದು ಪ್ರಶ್ನಿಸಿದರು.