ದೇವನಹಳ್ಳಿ: ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯು ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಸುಮಾರು ೩ ವರ್ಷಗಳಿಂದ ಧರಣಿ ಮಾಡುತ್ತಲಿದ್ದು, ಇತ್ತೀಚಿಗಷ್ಟೇ ಮುಖ್ಯಮಂತ್ರಿಗಳು ಸಭೆ ನಡೆಸಿ ರೈತರ ಪರವಾದ ತೀರ್ಮಾನ ಮಾಡುವುದಾಗಿ ತಿಳಿಸಿದ್ದಾರೆ .
ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯು ಸುಮಾರು ೩ ವರ್ಷಗಳಿಂದ ಧರಣಿ ಮಾಡುತ್ತಲೇ ಬಂದಿದೆ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದೆ ಸರ್ಕಾರಗಳು ಜಾಣ ಕುರುಡುತನದಿಂದ ರೈತರ ಧರಣಿಯನ್ನು ನಿರ್ಲಕ್ಷಿಸುತ್ತಾ ಮುಂದೂಡಿಕೊಂಡೇ ಬಂದರೆ ಆದರೆ ಪಟ್ಟು ಬಿಡದ ರೈತರು ಅನಿರ್ದಿಷ್ಟಾವಧಿ ಧರಣಿ ಮಾಡುತ್ತಿದ್ದಾರೆ ಈ ಕುರಿತಾಗಿ ಮೊನ್ನೆ ಮುಖ್ಯಮಂತ್ರಿಗಳು ಸಭೆ ನಡೆಸಿ ರೈತರ ಪರವಾದ ತೀರ್ಮಾನ ಮಾಡುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ಸಮಿತಿ ಸಂಚಾಲಕ ನಂಜಪ್ಪ ಮಾತನಾಡಿ, ರೈತರ ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರು ಭೂಮಿ ಬಿಡಲು ತಯಾರಿಲ್ಲ ಆದ್ದರಿಂದ ಕಾನೂನಾತ್ಮಕವಾಗಿ ಏನು ಮಾಡಬಹುದು ಎಂದು ಸಭೆಯಲ್ಲಿ ಹಾಜರಿದ್ದ ಕೆ ಐ ಎ ಡಿ ಬಿ ಅಧಿಕಾರಿಗಳನ್ನು ಕೇಳಿದಾಗ, 1777 ಎಕರೆಯ ಪೈಕಿ, 430 ಎಕರೆ ಜಮೀನು ಭೂಸ್ವಾಧೀನಕ್ಕೆ ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಆದ್ದರಿಂದ ಅಂತಿಮ ಅಧಿಸೂಚನೆ ಆಗಿರುವ ಜಮೀನು ಕೈಬಿಡುವುದು ಸ್ವಲ್ಪ ಕಷ್ಟವಾಗಬಹುದು ಎಂದು ಅಧಿಕಾರಿಗಳು ತಿಳಿಸಿದರು. ತಕ್ಷಣವೇ ಅಧಿಕಾರಿಗಳ ಮಾತಿಗೆ ನಾವೆಲ್ಲಾ ಇಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಲಾಯಿತು.ನಂತರ ಪ್ರತಿಕ್ರಿಸಿದ ಮುಖ್ಯಮಂತ್ರಿಗಳು ಸರ್ಕಾರ ರೈತರ ಪರವಾಗಿದ್ದು ಈ ವಿಷಯದ ಕುರಿತು ಹಿರಿಯ ಅಧಿಕಾರಿಗಳು ಕಾನೂನು ತಜ್ಞರು ಮತ್ತು ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ತಿಳಿಸುತ್ತೇವೆ ಎಂದರು. 30 ರಂದು ಕಾಲ್ನಡಿಗೆ ಜಾಥಾವನ್ನು ಮುಂದೂಡಿ ಹೋರಾಟದ ಸ್ಥಳದಲ್ಲೇ ಬೃಹತ್ ಸಮಾವೇಷ ನಡೆಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭೂಸ್ವಾಧೀನ ವೊರೋಧಿ ಹೋರಾಟ ಸಮಿತಿಯ ಮುಖಂಡರಾದ ಕಾರಹಳ್ಳಿ ಶ್ರೀನಿವಾಸ್, ಜಯರಾಮಗೌಡ, ಮಾರೇಗೌಡ, ಮಾರೇಗೌಡ, ಅಶ್ವಥ್, ತಿಮ್ಮರಾಯಪ್ಪ, ವೆಂಕಟೇಶ್, ಮುನೇಗೌಡ, ರೈತ ಸಂಘದ ರಮೇಶ್, ನಾರಾಯಣಸ್ವಾಮಿ, ಇನ್ನು ಹಲವು ರೈತರ ಮುಖಂಡರು ಇದ್ದರು.