ದೇವನಹಳ್ಳಿ : ಪಟ್ಟಣದ ಸೂಲಿಬೆಲೆ ರಸ್ತೆಯ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಮುಂಭಾಗದ ಬನ್ ಕೇಕ್ ಬೇಕರಿಯಲ್ಲಿ ಹೊಸ ವರ್ಷಾಚರಣೆಗೆ ಬಗೆಬಗೆಯ ಕೇಕ್ ನ್ನು ತಯಾರಿಸಿದ್ದರು.
ಹೊಸ ವರ್ಷದ ಆಚರಣೆಗೆ ಉತ್ಸಾಹಿ ಯುವಕರು ಎನ್ನದೇ ಎಲ್ಲಾ ವಯೋಮಿತಿಯ ಜನರು ಸಡಗರ ಸಂಭ್ರಮದಿಂದ ನೂತನ ವರ್ಷಾಚರಣೆಯನ್ನು ಮಾಡಲು ಕಾಯುತ್ತಿದ್ದಾರೆ ವಿವಿಧ ರೀತಿಯಲ್ಲಿ ಆಚರಿಸುತ್ತಾರೆ ಹಣವಂತರು ಪಾರ್ಟಿ ಪಬ್ಬು ಎಂತೆಲ್ಲಾ ಹೋಗಿ ದುಂದು ವೆಚ್ಚ ಮಾಡಿ ಹೊಸವರ್ಷವನ್ನು ಬರಮಾಡಿಕೊಳ್ಳುತ್ತಾರೆ ಕೆಲವರು ಯಾವುದೇ ಆಡಂಬರವಿಲ್ಲದೇ ಮನೆಯಲ್ಲೆ ಸ್ನೇಹಿತರೊಂದಿಗೆ ಕೇಕ್ ಕಟ್ ಮಾಡಿ ಸಂಭ್ರಮಿಸುವರು ಅದಕ್ಕೆ ದೇವನಹಳ್ಳಿ ಪಟ್ಟಣದ ಸೂಲಿಬೆಲೆ ರಸ್ತೆಯಲ್ಲಿನ ಬನ್ ಕೇಕ್ ಬೇಕರಿಯಲ್ಲಿ ಹೊಸ ವರ್ಷಾಚರಣೆಗೆ ಬಗೆಬಗೆಯ ಕೇಕ್ ನ್ನುತಯಾರು ಮಾಡಿದ್ದರು.
ಗ್ರಾಹಕರಾದ ಧನುಶ್ ಮಾತನಾಡಿ, ಇಲ್ಲಿನ ಬನ್ ಕೇಕ್ ಬೇಕರಿಯಲ್ಲಿ ಗುಣ ಮಟ್ಟದ ಕೇಕ್ ತಯಾರಿಸುತ್ತಾರೆ ಹಾಗೂ ಶುಚಿತ್ವದಲ್ಲಿ ಮತ್ತು ಗ್ರಾಹಕರಿಗೆ ಇಷ್ಟವಾಗುವ ಬಗೆಬಗೆಯ ಕೇಕ್ ಗಳನ್ನು ತಯಾರು ಮಾಡುತ್ತಾರೆ ಕಳೆದ 6 ತಿಂಗಳಿನಿಂದಲೂ ನಾವು ಇಲ್ಲೇ ಖರೀದಿಸುತ್ತೇವೆ ದರದಲ್ಲೂ ಬೇರೆ ಬೇಕರಿಗಳಿಗೆ ಹೋಲಿಸಿದರೆ ಕಡಿಮೆ ಇದೆ ಹೊಸ ವರ್ಷಕ್ಕೆ ಮೂರು ದಿನಗಳು ಶೇಖಡಾ 10 ರಿಯಾಯಿತಿ ದರದಲ್ಲಿ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಮಕ್ಕಳಿಗಂತು ಕಣ್ಣು ಕುಕ್ಕುವಂತೆ ಕೇಕ್ ಡಿಜೈನ್ ಮಾಡಿದ್ದಾರೆ ಮತ್ತು ಯಾವುದೇ ರಾಸಾಯನಿಕ ಬಳಸದೇ ಬಣ್ಣ ಬೆರೆಸದೇ ಮಾಡಿರುವುದು ಈ ಬನ್ ಕೇಕ್ ಬೇಕರಿಯ ವೈಶಿಷ್ಟ್ಯ ವಾಗಿದೆ.