ಕಂಪ್ಯೂಟರ್ ಶಿಕ್ಷಣ ಕೇವಲ ನಗರ ಪಟ್ಟಣ ವಾಸಿಗಳಿಗೆ ಮಾತ್ರ ಸೀಮಿತವಾಗದೆ ಗ್ರಾಮೀಣ ಬಾಗದ ಮಕ್ಕಳಿಗೂ ಬೇಕಾಗಿದೆ ರೈತರು ಮಕ್ಕಳೆ ನಾಳಿನ ಪ್ರಗತಿಪರ ರೈತರಾಗುತ್ತಾರೆ ಅವರಿಗೆ ಕಂಪ್ಯೂಟರ್ ಶಿಕ್ಷಣವಿಲ್ಲದಿದ್ದರೆ ವಿವಿದ ಕಂಪನಿಗಳು ಮಾಡುವ ಮೋಸವನ್ನ ಬೇದಿಸಲು ಸಾದ್ಯವಾಗೋದಿಲ್ಲ ಅದಕ್ಕಾಗಿ ಪ್ರಾಥಮಿಕ ಶಾಲಾ ಶಿಕ್ಷಣದಿಂದಲೇ ಕಂಪ್ಯೂಟರ್ ಬೇಸಿಕೆ ನಾಲೆಜ್ ಅವಶ್ಯಕತೆ ಇದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಹೆಚ್ ಆರ್ ನಾರಾಯಣರೆಡ್ಡಿ ಅಬಿಪ್ರಾಯ ಪಟ್ಟರು.
ಚಿಕ್ಕಬಳ್ಳಾಪುರ ತಾಲ್ಲೂಕು ದೊಡ್ಡಪೈಲಗುರ್ಕಿ ಪಂಚಾಯ್ತಿ ವ್ಯಾಪ್ತಿಯ ಹರಿಸ್ಥಳ ಮತ್ತು ಗೌಡನಹಳ್ಳಿ ಜಂಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಪೂಜೆ ಮತ್ತು ಕಂಪ್ಯೂಟರ್ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.ಗೋಪೂಜೆ ನೆರವೇರಿಸಿದ ನಂತರ ಗ್ರಾಮದ ಜನರು ಹಾಗು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತದ ಉಪಾಧ್ಯಕ್ಷ ಹಾಗು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್ ಆರ್ ನಾರಾಯಣರೆಡ್ಡಿ ಮಾತನಾಡಿ ನಮ್ಮೂರ ಶಾಲೆಗೆ ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ ಸದಸ್ಯರು ಹೊಟೆಲ್ ರಾಮಣ್ಣ,ಕೆ.ಎಸ್.ನಾರಾಯಣಸ್ವಾಮಿ ಅವರ ಪದಾದಿಕಾರಿಗಳು ಕಂಪ್ಯೂಟರ್ ಒದಗಿಸಿಕೊಟ್ಟು ರೈತರ ಮಕ್ಕಳೂ ಕಂಪ್ಯೂಟರ್ ಕಲಿಕೆಗೆ ಅವಕಾಶ ಒದಗಿಸಿಕೊಟ್ಟಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ನಮ್ಮ ಎರಡೂ ಗ್ರಾಮದಲ್ಲಿ ನೂರಕ್ಕೆ ನೂರು ರೈತರ ಮಕ್ಕಳೆ ಇದ್ದಾರೆ ಈ ಶಾಲೆಯ ಮುಖ್ಯೋಪಾಧ್ಯಾಯ ಸತ್ಯನಾರಾಯಣಮೂರ್ತಿ ಆಸಕ್ತಿಯಿಂದಾಗಿ ಶಾಲಾ ವಾತಾವರಣ ಅತ್ಯಂತ ಸುಂದರವಾಗಿ ರೂಪುಗೊಂಡಿದೆ ರೈತರ ಮಕ್ಕಳಿಗೂ ಕಂಪ್ಯೂಟರ್ ಶಿಕ್ಷಣ ಅಗತ್ಯವಿದೆ ರೈತರ ಮಕ್ಕಳಿಗೂ ಉನ್ನತ ಶಿಕ್ಷಣ ಬೇಕಿದೆ ಇಲ್ಲದಿದ್ದರೆ ಈಗಿನ ಕಾಲದಲ್ಲಿ ಗಂಡು ಮಕ್ಕಳಿಗೆ ಹೆಣ್ಣುಕೊಡುವವರೆ ಇಲ್ಲದಂತಾಗಿದೆ ಕಂಪ್ಯೂಟರ್ ಶಿಕ್ಷಣ ಇಲ್ಲದಿದ್ದರೆ ರೈತರಿಗೆ ಪೂರಕವಾಗಿ ಕಲಸ ಮಾಡುತ್ತಿರುವ ಪೆಸ್ಟಿಸೈಡ್ಸ್ ಕಂಪನಿಗಳು,ಮಾಡುವ ಮೋಸ ಕಂಡು ಹಿಡಿಯಲಾಗುವುದಿಲ್ಲ ರೈತ ಕೃಷಿಯಲ್ಲೀಗ ಇಂಜನಿಯರುಗಳು ಬೇಕು ಉನ್ನತ ಮಟ್ಟದ ತಂತ್ರಜ್ಞಾನವೂ ಬೇಕಾಗಿದೆ ಹಾಗಾಗಿ ಕೇವಲ ಪ್ಯಾಕ್ಟರಿಗಳಲ್ಲಿ ಮಾತ್ರ ಕಂಪ್ಯೂಟರ್ ಬಳಕೆ ಅನ್ಮೋದಿಲ್ಲ ಗ್ರಾಮೀಣ ಬಾಗದ ಪಂಚಾಯಿತಿಯಿಂದ ಹಿಡಿದು ಪ್ರತಿಯೊಂದು ಮನೆಯಲ್ಲೂ ತಂತ್ರಜ್ಞಾನ ಮಾಹಿತಿ ಬೇಕಾಗಿದೆ ಆದ್ದರಿಂದ ಸಮಾನನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ ಪದಾದಿಕಾರಿಗಳು ಜಿಲ್ಲೆಯ ಸರ್ಕಾರಿ ಶಾಲೆಗಳನ್ನ ಗುರ್ತಿಸಿ ಕಂಪ್ಯೂಟರ್ ಗಳನ್ನ ಒದಗಿಸುತ್ತಿರಯವುದಕ್ಕೆ ಅವರಿಗೆ ಜಿಲ್ಲೆಯ ರೈತರಪರವಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು
ಹೆಚ್ ಆರ್ ನಾರಾಯಣರೆಡ್ಡಿ ಭಾರತೀಯ ಕಿಸಾನ್ ಸಂಘದ ಉಪಾಧ್ಯಕ್ಷರು
ಹರಿಸ್ಥಳ ಗೌಡನಹಳ್ಳಿ ಸರ್ಕಾರಿ ಶಾಲೆಯಲ್ಲಿ ನಡೆದ ಕಂಪ್ಯೂಟರ್ ವಿತರಣೆಗೂ ಮುನ್ನ ಶಾಲೆಗೆ ಆಗಮಿಸಿದ ಅಥಿತಿ ಗಣ್ಯರನ್ನ ವೇದಿಕೆ ಕರೆತಂದ ಶಾಲಾ ಬ್ಯಾಂಡ್ ಸೆಟ್ ಮಕ್ಕಳು ಮೊದಲು ರೈತ ಸ್ನೇಹಿ ಹಸುಗಳಿಗೆ ಪೂಜೆ ಸಲ್ಲಿಸಿ ಗೋ ಪೂಜೆ ಮುಗಿಸಿ ವಿಬಿನ್ನ ಆಚರಣೆ ಮುಖಾಂತರ ಕಾರ್ಯಕ್ರಮ ನಡೆಸಿಕೊಟ್ಟರು
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣಮೂರ್ತಿ ಶಾಲೆಯ ವಿಷೇಷತೆ ಬಗ್ಗೆ ತಿಳಿಸದರು ಕೇವಲ ಇಪ್ಪತೈದು ಮಕ್ಕಳಿದ್ದ ಶಾಲೆಯಲ್ಲೀಗ ಐವತೈದು ಮಕ್ಜಳು ಪ್ರವೇಶ ಹೊಂದುವಂತೆ ಮಾಡಿದ್ದೂ ಮುಂದಿನ ವರ್ಷದ ವೇಳೆಗೆ ಸುತ್ತಮುತ್ತಲಿನ ಗ್ರಾಮಗಳಿಂದ ಹೊರಗಡೆ ಖಾಸಗಿ ಶಾಲೆಗಳಿಗೆ ಹೋಗುತ್ತಿರುವ ಮಕ್ಕಳನ್ನೆಲ್ಲಾ ನಮ್ಮ ಶಾಲೆಗೆ ಸೆಳೆದು ಕನಿಷ್ಟ ನೂರು ಮಕ್ಕಳು ಈ ಶಾಲೆಯಲ್ಲಿ ಅಭ್ಯಾಸ ಮಾಡುವಂತೆ ಶ್ರಮಹಾಕುತಿದ್ದೇವೆ ಅದಕ್ಕೆ ಈ ಗ್ರಾಮದ ಹಿರಿಯರು ಹಳೇ ವಿದ್ಯಾರ್ಥಿಗಳು ಎಸ್ ಡಿ ಎಂ ಸಿ ಹಾಗು ಪಂಚಾಯಿತಿ ಸದಸ್ಯರ ಸಹಾಯ ಬೇಡುತಿದ್ದೇವೆ ಎಂಬ ವಿಶ್ವಾಸದ ಮಾತುಗಳನ್ನಾಡಿದರು
ಕಾರ್ಯಕ್ರಮದಲ್ಲಿ ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ ಗೌರವಾಧ್ಯಕ್ಷರು ಹೊಟೆಲ್ ರಾಮಣ್ಣ ಗ್ರಾಮಪಂಚಾಯಿತಿ ಅಧ್ಯಕ್ಷೆ ಗಾಯಿತ್ರಮ್ಮ, ಬಿಕೆಸ್ ಪದಾದಿಕಾರಿಗಳು ಶಿವಪ್ಪ, ಪೆರೇಸಂದ್ರ ಕೃಷ್ಣಾರೆಡ್ಡಿ,ಜಿ ಎ ವೆಂಕಟರೆಡ್ಡಿ ಟಿಎಟಿಸಿಎಂ ಮಾಜಿ ನಿರ್ದೇಶಕ ಗೌಡನಹಳ್ಳಿ ಗ್ರಾಮ ಪಂಚಾಯತಿ ಸದಸ್ಯೆ ಅನಿತ, ಎಚ್‌ಜಿ ವೆಂಕಟರೆಡ್ಡಿ, ಹರಿಸ್ಥಳನಾರಾಯಣಸ್ವಾಮಿ, ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷ ಕೃಷ್ಣಾರೆಡ್ಡಿ,ಬ್ಯಾಂಕ್ ಆಪ್ ಇಂಡಿಯಾ ಮ್ಯಾನೇಜರ್ ಚಂದ್ರಕಲಾ
ಎಸ್ ಡಿ ಎಂ ಸಿ ಅಧ್ಯಕ್ಷ ವೆಂಕಟೇಶ್,ದೀನದಯಾಳು ನಾರಾಯಣಪ್ಪ ಇತರರು ಇದ್ದರು.