ಬಳ್ಳಾರಿ ತಾಲೂಕಿನ ಎಂ ಗೋನಾಹಾಳು ಗ್ರಾಮದಲ್ಲಿ ಸೇತುವೆ ದುರಸ್ಥಿ ಮತ್ತು ಬಸ್ ಅವ್ಯವಸ್ಥೆ ಕುರಿತು ಕಳೆದ ಕೆಲ ದಿನಗಳ ಹಿಂದೆ ನಮ್ಮ ರಿಪೋರ್ಟ್ ನೌ ಕನ್ನಡ ವಾಹಿನಿ ವರದಿ ಮಾಡಿತ್ತು ಅದರ ಇಂಪ್ಯಾಕ್ಟ್ ಸ್ಟೋರಿ ಎಲ್ಲಿದೆ ನೋಡಿ
ಬಳ್ಳಾರಿ ತಾಲೂಕಿನ ಎಂ ಗೋನಾಹಾಳು ಗ್ರಾಮದಲ್ಲಿ ಗ್ರಾಮದ ಬಳಿ ಹಾದು ಹೋಗುವ ತುಂಗಭದ್ರಾ LLC ಕಾಲುವೆಯ ಸೇತುವೆ ಮಧ್ಯಭಾಗದಲ್ಲಿ ಮುರುದು ಬಿದ್ದು ಹಾಳಾಗಿತ್ತು. ಈ ಸೇತುವೆಯೇ ಗ್ರಾಮದ ಜನರ ಸಂಚಾರಕ್ಕೆ ಮುಖ್ಯ ಮಾರ್ಗವಾಗಿತ್ತು ಇನ್ನು ಈ ಸೇತುವೆ ಹಾಳಾದ ಕಾರಣಕ್ಕೆ ಗ್ರಾಮಕ್ಕೆ ಸರಿಯಾಗಿ ಬಸ್ ಕೂಡ ಬರ್ತಾ ಇರ್ಲಿಲ್ಲ ಇದರಿಂದ ಜನರ ನಿತ್ಯ ಸಂಚಾರಕ್ಕೆ ತೊಂದರೆ ಉಂಟಾಗತಿತ್ತು. ಈ ವಿಷಯ ತಿಳಿದ ನಮ್ಮ ರಿಪೋರ್ಟ್ ನೌ ಕನ್ನಡ ವಾಹಿನಿ ಸೇತುವೆ ಮತ್ತು ಬಸ್ ಅವ್ಯವಸ್ಥೆಯ ಕುರಿತು ವರದಿ ಮಾಡಿತ್ತು.
ವಿಷಯದ ಕುರಿತು ಅಧಿಕಾರಿಗಳ ಗಮಕ್ಕೆ ಕೂಡ ತಂದಿತ್ತು ಹೀಗಾಗಿ ಅದರ ಪರಿಣಾಮ ಈಗ ತುಂಗಭದ್ರಾ LLC ಕಾಲುವೆಯ ಅಧಿಕಾರಿಗಳು ಸೇತುವೆಯನ್ನು ತಾತ್ಕಾಲಿವಾಗಿ ಸರಿ ಪಡಿಸಿದ್ದು ಬಸ್ ಸೇರಿದಂತೆ ಇತರೆ ಲಘು ವಾಹನಗಳ ಸಂಚಾರಕ್ಕೆ ಅನುಕೂಲವಾಗಿದೆ ಇದರಿಂದ ಗ್ರಾಮಕ್ಕೆ ಇದ್ದಂಥ ಸಂಚಾರಕ್ಕೆ ತಾತ್ಕಾಲಿಕವಾಗಿ ಪರಿಹಾರ ಸಿಕ್ಕಿದೆ. ಇನ್ನು ಈ ಸೇತುವೆಯ ಸಂಪೂರ್ಣ ನಿರ್ಮಾಣವನ್ನು ಬೇಸಿಗೆ ಸಮಯದಲ್ಲಿ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಬಂಧ ಪಟ್ಟ ಅಧಿಕಾರಿಗಳು ಹೇಳಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.