ಕಾರವಾರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ತಲೆದೊರಿರುವ ರೇತಿ ಅಭಾವದ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಪ್ರತಿಭಟನೆಯನ್ನು ಇಂದು ಹಮ್ಮಿಕೊಳ್ಳಲಾಗಿತ್ತು.
ಆಟೋ ಚಾಲಕರ ಗಣೇಶೋತ್ಸವದ ಮೈದಾನದಲ್ಲಿ ಸಾವಿರಾರು ಕಾರ್ಮಿಕರು ಜಮಾವಣೆಗೊಂಡು. ಪ್ರತಿಭಟನಾ ಮೆರವಣಿಗೆ ಕೈಗೊಂಡರು. ಮುಖ್ಯವೃತ್ತದವರೆಗೂ ಸಾಗಿದ ಮೆರವಣಿಗೆ ಬಳಿಕ ಆಡಳಿತ ಸೌಧವನ್ನು ತಲುಪಿತು.
ಮೆರವಣಿಗೆಯುದ್ದಕ್ಕೂ ಜಿಲ್ಲಾಡಳಿತ ಹಾಗೂ ಸಚಿವರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲು ಪ್ರತಲಯತ್ನಿಸಿದರು. ಪೋಲಿಸರು ಮದ್ಯಪ್ರವೇಶಿಸಿ ಮೆರವಣಿಗೆ ಮುಂದೆ ಸಾಗುವ ನಿಟ್ಟಿನಲ್ಲಿ ಪ್ರಯತ್ನಿಸಿದರು. ಈ ಹಂತದಲ್ಲಿ ಪೋಲಿಸರು ಹಾಗೂ ಪ್ರತಿಭಟನಾಕಾರ ನಡುವೆ ವಾಗ್ವಾದ ನಡೆದೆ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಯಿತು.
ಕಳೆದ ಆರು ತಿಂಗಳಿಂದ ರೇತಿ ಅಭಾವದಿಂದ ನಿರ್ಮಾಣ ಕಾರ್ಯಗಳು ಕುಂಠಿತಗೊಂಡಿದೆ, ದರಿಂದಾಗಿ ಬಡ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಕಾರ್ಮಿಕರು ತಮ್ಮ ಸಂಕಷ್ಟವನ್ನು ತೋಡಿಕೊಂಡರು.
ಒಂದು ಹಂತದಲ್ಲಿ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡು ಕಾರ್ಮಿಕರು, ಕಾರ್ಮಿಕ ಮುಖಂಡರ ವಿರುದ್ಧವೆ ಹರಿಹಾಯ್ದರು. ಕೂಡಲೆ ಜಿಲ್ಲಾಧಿಕಾರಿಗಳು ಅಥವಾ ಉಸ್ತುವಾರಿ ಸಚಿವರು ಪ್ರತಿಭಟನಾನಿರತ ಸ್ಥಳಕ್ಕೆ ಆಗಮಿಸುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದು ಕೂತರು.
ಸಂಘಟಕರು ಹಾಗೂ ಪ್ರತಿಭಟನಾಕಾರರ ನಡುವೆ ಸಮನ್ವಯತೆ ಕೊರತೆ ನಡುವೆ ಸಹಾಯಕ ಆಯುಕ್ತರಿಗೆ ರೇತಿ ಅಭಾವ ಸಮಸ್ಯೆಯನ್ನು ನೀಗಿಸುವಂತೆ ಕೊರಿ ಮನವಿಯನ್ನು ನೀಡಲಾಯಿತು.