ದೇವನಹಳ್ಳಿ: ಜಯಕರ್ನಾಟಕ ಸಂಘಟನೆ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ನಾಕೌಟ್ ಮಾದರಿಯ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಯು ದೇವನಹಳ್ಳಿ ಪಟ್ಟಣದ ಹೊರವಲಯದ ಬ್ರಿಗೇಡ್ ಆರ್ಚಡ್ಸ್ ನಲ್ಲಿ ನಡೆಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರವಿ ಮಾತನಾಡಿ, ನಮ್ಮ ಜಯಕರ್ನಾಟಕ ಕುಟುಂಬದ ಸದಸ್ಯರಿಗಳಿಗೆ ಮನೋರಂಜನಾತ್ಮಕಹಾಗೂ ಸ್ನೇಹ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಿದ್ದು ಇದರಲ್ಲಿ ಯಾವುದೇ ಜಿದ್ದಾಜಿದ್ದಿನ ಪಂದ್ಯ ನಡೆಯುವುದಿಲ್ಲಾ ನಮ್ಮಕುಟುಂಬದ ಸದಸ್ಯರಂತೆ ಆಟವಾಡಿ ಯಾರೇ ಗೆದ್ದರೂ ನಮ್ಮವರೇ
ಈ ಟೂರ್ನಿಯಲ್ಲಿ 8 ತಂಡಗಳು ಭಾಗಿಯಾಗಿದೆ ಪ್ರಥಮ ಬಹುಮಾನವಾಗಿ ಒಂದುಲಕ್ಷ ಮತ್ತು ಆಕರ್ಷಕ ಟ್ರೋಫಿ ಮತ್ತು ದ್ವಿತೀಯ ಬಹುಮಾನ ಐವತ್ತು ಸಾವಿರ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಟೆನ್ನಿಸ್ ಬಾಲ್ ಕ್ರಿಕೇಟ್ ಟೂರ್ನಿಯಲ್ಲಿ ಜಯಕರ್ನಾಟಕ ಸಂಘಟನೆಯ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹಾಗೂ ನಾಲ್ಕು ತಾಲ್ಲೂಕಿನ ಸದಸ್ಯರು ಭಾಗವಹಿಸಿದ್ದರು.