Welcome to reportnowtv.in   Click to listen highlighted text! Welcome to reportnowtv.in
Wednesday, February 5, 2025
HomeDistrictsTumakuruಕಲ್ಪತರು ನಾಡಹಬ್ಬ ತುಮಕೂರು ಜಿಲ್ಲೆ ತಿಪಟೂರು ಶ್ರೀಸತ್ಯಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ.

ಕಲ್ಪತರು ನಾಡಹಬ್ಬ ತುಮಕೂರು ಜಿಲ್ಲೆ ತಿಪಟೂರು ಶ್ರೀಸತ್ಯಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ.

ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ವಿಶೇಷಪೂಜೆಸಲ್ಲಿಸಿ ನಂತರ ಹೂವಿನಿಂದ ಅಲಂಕೃತವಾದ ಉತ್ಸವದಲ್ಲಿ ಕೂರಿಸಿ, ಶಾಸಕರಾದ ಕೆ.ಷಡಕ್ಷರಿ,ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಶ್ರೀಸತ್ಯಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀಕಂಠ ಶ್ರೀ ಸತ್ಯಗಣಪತಿಯವರಿಗೆ ಪೂಜೆಸಲ್ಲಿಸಿ ಚಾಲನೆ ನೀಡಿದರು.

ಶ್ರೀಸತ್ಯಗಣಪತಿ ಆಸ್ಥಾನದಿಂದ ಹೊರಟ ಉತ್ಸವ,ದೊಡ್ಡಪೇಟೆ, ಕನ್ನಿಕಾ ಪರಮೇಶ್ವರಿ ದೇವಾಸ್ಥಾನ ರಸ್ತೆ ಎಲೆ ಆಸರ,ಮಡಕೆ ಆಸರ, ಮೂಲಕ ಅದ್ದೂರಿ ಉತ್ಸವ ನಡೆಸಲಾಯಿತು, ಮಂಗಳವಾದ್ಯ,ಚಂಡೆವಾಧ್ಯ ತಮಟೆವಾಧ್ಯ, ನಾದಸ್ವರ, ಡಿಜೆ ಉತ್ಸವಕ್ಕೆ ಮೆರಗು ನೀಡಿದವು.ಲಕ್ಷಾಂತರ ಜನ ಭಕ್ತಾಧಿಗಳು ಉತ್ಸವದಲ್ಲಿ ಭಾಗವಹಿಸಿದರು
ಗಣೇಶ ಉತ್ಸವ ಸಾಗುವ ಮಾರ್ಗದಲ್ಲಿ ಸ್ವಾಮಿಯವರಿಗೆ ವಿಶೇಷವಾದ ಫಲಹಾರ, ವಿವಿಧ ನೈವೇದ್ಯಗಳು,ಹಣ್ಣು ಹಾರ ಸಮರ್ಪಿಸಿ ಪೂಜೆಸಲ್ಲಿಸಿದರು.
ಅದ್ದೂರಿ ಡಿಜೆ ಸೌಂಡ್ಸ್ ಗೆ ಸಾವಿರಾರು ಯುವಕ ಯುವತಿಯರು ಕುಣಿದು ಕುಪ್ಪಳಿಸಿದರು


ನಗರದಾದ್ಯಂತ ಕಣ್ಮನಕೋರೈಸುವ ರಂಗುರಂಗಿನ ದೀಪಾಲಂಕಾರ ಭಕ್ತ ಸಮೂಹವನ್ನ ಆಕರ್ಶಿಸಿದೆ

ತಿಪಟೂರು ಶ್ರೀಸತ್ಯಗಣಪತಿ ಜಾತ್ರೆಯ ವಿಶೇಷವಾಗಿ ಬೆಳಗಿನ ಜಾವದಲ್ಲಿ ನಡೆಯುವ ಪಟಾಕಿ ಪ್ರದರ್ಶನ,ಜನಮನ ಸೂರೆಗೊಂಡಿತು.ರಂಗುರಂಗಿನ ಪಟಾಕಿ ಚಿತ್ತಾರ, ಮನಸೂರೆಗೊಂಡಿತುಜಾತ್ರೆಯಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್.ವಿವಿಧ ಬಗೆಯ ವಸ್ತುಗಳ ಮಾರಾಟ ಪ್ರದರ್ಶನ ಆಕರ್ಷಕವಾಗಿ ನಡೆಯುತ್ತಿದ್ದು. ಇಂದು ಭಾನುವಾರ ರಾತ್ರಿ ತಿಪಟೂರು ಅಮಾನೀಕೆರೆಯಲ್ಲಿ ಗಣೇಶ ವಿಸರ್ಜನೆ ನಡೆಯಲಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!